Sushma ChakreSushma Chakre
|
news18-kannada Updated:February 17, 2020, 6:01 PM IST
ಮುಸುಕುಧಾರಿಗಳು ಬ್ಯಾಂಕ್ ದರೋಡೆ ಮಾಡುತ್ತಿರುವ ದೃಶ್ಯ
ಚಂಡೀಗಢ (ಫೆ. 17): ಹಾಡಹಗಲೇ ಚಂಡೀಗಢದ ಲುಧಿಯಾನದಲ್ಲಿರುವ ಬ್ಯಾಂಕ್ಗೆ ನುಗ್ಗಿದ ದರೋಡೆಕೋರರು 12 ಕೋಟಿ ರೂ. ಮೌಲ್ಯದ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಲುಧಿಯಾನ ಬೆಚ್ಚಿಬಿದ್ದಿದ್ದು, ಕಳ್ಳರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಲುಧಿಯಾನದ ಗಿಲ್ ರೋಡ್ನಲ್ಲಿರುವ ಗೋಲ್ಡ್ ಲೋನ್
ಬ್ಯಾಂಕ್ಗೆ ಮುತ್ತಿಗೆ ಹಾಕಿದ ಐವರು ದರೋಡೆಕೋರರು 30 ಕೆಜಿ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ಬ್ಯಾಂಕ್ನಲ್ಲಿದ್ದವರ ಹಣೆಗೆ ಗನ್ಪಾಯಿಂಟ್ ಇಟ್ಟು ದರೋಡೆ ನಡೆಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ಬ್ಯಾಂಕ್ನ ಎದುರೇ ಪಂಜಾಬ್ ಪೊಲೀಸ್ ಇಲಾಖೆಯ ಅಪರಾಧ ತನಿಖಾ ಏಜೆನ್ಸಿಯ ಕಚೇರಿಯಿದೆ.
ಸುಮಾರು 25 ನಿಮಿಷಗಳ ಕಾಲ ಬ್ಯಾಂಕ್ನಲ್ಲೇ ಇದ್ದ
ದರೋಡೆಕೋರರು ಗನ್ ತೋರಿಸಿ, ಬ್ಯಾಂಕ್ನಲ್ಲಿದ್ದ ಚಿನ್ನವನ್ನು ಪಡೆದಿದ್ದಾರೆ. ನಾಲ್ವರು ದರೋಡೆಕೋರರು ಬ್ಯಾಂಕ್ ಒಳಗೆ ನುಗ್ಗಿ, ಬಂದೂಕು ತೋರಿಸಿದ್ದ. ಇನ್ನೋರ್ವ ಹೊರಗೆ ಕಾರಿನಲ್ಲೇ ಕುಳಿತು ಕಾವಲು ಕಾಯುತ್ತಿದ್ದ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯವಾಗಲಿ, ಪ್ರಾಣಹಾನಿಯಾಗಲಿ ಆಗಿಲ್ಲ.
ಇದನ್ನೂ ಓದಿ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರ!; ನೇಲ್ ಪಾಲಿಶ್ ಖರೀದಿಸಿ ರೂ. 92,446 ಕಳೆದುಕೊಂಡ ಯುವತಿ
ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ
ದರೋಡೆಯ ದೃಶ್ಯಾವಳಿಗಳು ಸೆರೆಯಾಗಿದ್ದು, ಮುಸುಕುಧಾರಿಯಾಗಿದ್ದ ನಾಲ್ವರು ಈ ಕೃತ್ಯ ಎಸಗಿರುವುದು ದಾಖಲಾಗಿದೆ.
(ವರದಿ: ರಾಮಲಾಲ್ ಕೊಂಡಾಲ್)
First published:
February 17, 2020, 6:01 PM IST