ಕರಾಚಿ (ಮೇ 22); ಪಾಕಿಸ್ತಾನ ಏರ್‌ಲೈನ್ಸ್ ವಿಮಾನವೊಂದು ಲಾಹೋರ್‌ನ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಜನ ವಸತಿ ಸ್ಥಳದಲ್ಲಿ ಇಂದು ಪತನಗೊಂಡಿತ್ತು. ಈ ದುರಂತದಲ್ಲಿ ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 107 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈ ಅಪಘಾತದಲ್ಲಿ ಪಾಕಿಸ್ತಾನದ ಬ್ಯಾಂಕ್ ಆಫ್ ಪಂಜಾಬ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಫರ್ ಮಸೂದ್ ಮಾತ್ರ ಅಚ್ಚರಿಯ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿದ್ದು, ಇನ್ನಷ್ಟು ಜನ ಬದುಕುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಲಾಹೋರ್‌ನಿಂದ ಕರಾಚಿಗೆ ತೆರಳುತ್ತಿದ್ದ ಪಿಕೆ -8303 ವಿಮಾನದಲ್ಲಿ ಪ್ರಯಾಣಿಸಿದ್ದ 98 ಜನ ಪ್ರಯಾಣಿಕರ ಪೈಕಿ ಮಸೂದ್ ಸಹ ಒಬ್ಬರು. ಈ ವಿಮಾನ ಅಪಘಾತಕ್ಕೀಡಾದಾಗ ವಿಮಾನದಲ್ಲಿದ್ದ ಯಾರೂ ಸಹ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಪಾಕಿಸ್ತಾನದ ಸೇನೆ ಹೇಳಿತ್ತು. ಆದರೆ, ಇದೀಗ ಅಚ್ಚರಿಯ ರೂಪದಲ್ಲಿ ಮಸೂದ್ ಬದುಕುಳಿದಿದ್ದು ಇನ್ನೂ ಹಲವರು ಬದುಕುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ರಕ್ಷಣಾ ಕಾರ್ಯವನ್ನೂ ಚುರುಕುಗೊಳಿಸಲಾಗಿದೆ.
Heart-Breaking 😢💔 #planecrash #BreakingNews #Karachi #Lahore #airbus320 pic.twitter.com/JDtrEwYTVD
— Kazim•Zaidi (@Kazim_zaidii) May 22, 2020
PIA plane crash, PIA air bus crashed from lahore to karachi.#PIA #PIACrash pic.twitter.com/MJonh1rJcE
— Kazim•Zaidi (@Kazim_zaidii) May 22, 2020
ಇದನ್ನೂ ಓದಿ : 99 ಪ್ರಯಾಣಿಕರು, 8 ಸಿಬ್ಬಂದಿಯಿದ್ದ ಪಾಕಿಸ್ತಾನದ ವಿಮಾನ ಕರಾಚಿಯಲ್ಲಿ ಪತನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ