51 ಶಾಖೆಗಳನ್ನು ಮುಚ್ಚಿದ ಸರ್ಕಾರಿ ಬ್ಯಾಂಕ್​: ನವೆಂಬರ್​ 30ರ ಬಳಿಕ ಚೆಕ್​ ಸೌಲಭ್ಯವೂ ಬಂದ್

Precilla Olivia Dias | news18
Updated:October 4, 2018, 7:41 PM IST
51 ಶಾಖೆಗಳನ್ನು ಮುಚ್ಚಿದ ಸರ್ಕಾರಿ ಬ್ಯಾಂಕ್​: ನವೆಂಬರ್​ 30ರ ಬಳಿಕ ಚೆಕ್​ ಸೌಲಭ್ಯವೂ ಬಂದ್
  • News18
  • Last Updated: October 4, 2018, 7:41 PM IST
  • Share this:
ನ್ಯೂಸ್​ 18 ಕನ್ನಡ

ಪುಣೆ(ಅ.04): ಸರ್ಕಾರಿ ಬ್ಯಾಂಕ್​ ಒಂದು ತನ್ನ ಅಧೀನಕ್ಕರ ಬರುವ 51 ಶಾಖೆಗಳನ್ನು ಮುಚ್ಚುವ ಘೋಷಣೆ ಮಾಡಿದೆ. ಈ ಸರ್ಕಾರಿ ಬ್ಯಾಂಕ್​ನ ಪ್ರಧಾನ ಕಚೇರಿಯು ಹೊರಡಿಸಿರುವ ಪ್ರಕಟನೆಯಿಂದ ಈ ವಿಚಾರ ಬಹಿರಂಗಗೊಂಡಿದೆ. ಮುಚ್ಚಲಿರುವ ಹೆಚ್ಚಿನ ಶಾಖೆಗಳು ಪಟ್ಟಣ ಪ್ರದೇಶಗಳಲ್ಲಿವೆ ಎನ್ನಲಾಗಿದೆ. ಹೌದು ಬ್ಯಾಂಕ್​ ಆಫ್​ ಮಹಾರಾಷ್ಟ್ರ ಇಂತಹುದ್ದೊಂದು ನಿರ್ಧಾರವನ್ನು ತೆಗೆದುಕೊಂಡಿದೆ. ಈ ಶಾಖೆಗಳಿಂದ ಬ್ಯಾಂಕ್​ಗೆ ಲಾಭವಾಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಮುಚ್ಚುತ್ತಿರುವುದಾಗಿ ತಿಳಿದು ಬಂದಿದೆ.

ಈ ಕುರಿತಾಗಿ ಮಾತನಾಡಿದ ಬ್ಯಾಂಕ್​ನ ಹಿರಿಯ ಅಧಿಕಾರಿಯೊಬ್ಬರು ಈ 51 ಶಾಖೆಗಳನ್ನು ಬಂದ್​ ಮಾಡಿ ಅವುಗಳನ್ನು ಹತ್ತಿರದ ಶಾಖೆಗಳೊಂದಿಗೆ ವಿಲೀನಗೊಳಿಸಲಾಗಿದೆ ಎಂದಿದ್ದಾರೆ. ಈ ಮೂಲಕ ಗ್ರಾಹಕರ ಖಾತೆ ಬೇರೆ ಶಾಖೆಗಳಿಗೆ ವರ್ಗಾಯಿಸಿದ್ದಾರೆಂಬುವುದು ಸ್ಪಷ್ಟವಾಗಿದೆ.

ರದ್ದಾದ IFSC ಕೋಡ್​: ಬ್ಯಾಂಕ್​ ಆಫ್​ ಮಹಾರಾಷ್ಟ್ರವು ದೇಶದಾದ್ಯಂತ 1900ಶಾಖೆಗಳನ್ನು ಹೊಂದಿದೆ. ಆದರೆ ಸೋಮವಾರದಂದು ಮಾಡಿದ ತನ್ನ ಘೋಷಣೆಯಲ್ಲಿ ಜನರಿಗಾಗಿ ಈ ಶಾಖೆಗಳನ್ನು ವಿಲೀನಗೊಳಿಸುತ್ತಿರುವುದಾಗಿ ತಿಳಿಸಿದೆ.

ಗ್ರಾಹಕರೇನು ಮಾಡುತ್ತಾರೆ?

ಬಂದ್​ ಮಾಡಲಾದ ಬ್ಯಾಂಕ್​ ಶಾಖೆಗಳ IFSC ಕೋಡ್​ ಹಾಗೂ MICR ಕೋಡ್​ಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಎಲ್ಲಾ ಉಳಿತಾಯ, ಚಾಲ್ತಿ ಹಾಗೂ ಇತರ ಎಲ್ಲಾ ಖಾತೆಗಳನ್ನು ವಿಲೀನಗೊಳಿಸಿದ ಶಾಖೆಗಳಿಗೆ ವರ್ಗಾಯಿಸಲಾಗಿದೆ. ಅಂದರೆ ಎಲ್ಲಾ ಖಾತೆಗಳು ಬೇರೆ ಶಾಖೆಗಳಿಗೆ ಶಿಫ್ಟ್​ ಆಗಿದೆ ಎಂಬುವುದು ಸ್ಪಷ್ಟ.

ನವೆಂಬರ್​ 30ರ ಬಳಿಕ ಕಾರ್ಯ ನಿರ್ವಹಿಸುವುದಿಲ್ಲ ಇಲ್ಲಿನ ಚೆಕ್​ ಬುಕ್​!:ಬ್ಯಾಂಕ್​ ಆಫ್​ ಮಹಾರಾಷ್ಟ್ರವು ಬಂದ್​ ಮಾಡಿರುವ ಶಾಖೆಗಳ ಎಲ್ಲಾ ಗ್ರಾಹಕರಿಗೆ ಈ ಮೊದಲು ನೀಡಲಾದ ಎಲ್ಲಾ ಚೆಕ್​ ಪುಸ್ತಕಗಳನ್ನು ನವೆಂಬರ್​ 30ರೊಳಗೆ ಹಿಂತಿರುಗಿಸುವಂತೆ ಬ್ಯಾಂಕ್​ ಸೂಚಿಸಿದೆ. ಇಲ್ಲವಾದಲ್ಲಿ ಹೊಸ ಶಾಖೆಯ IFSC/MICR ಕೋಡ್​ ಹೊಂದಿರುವ ಪುಸ್ತಕಗಳನ್ನು ಪಡೆಯಲು ಸೂಚಿಸಲಾಗಿದೆ. ಎಲ್ಲಾ IFSC/MICR ಕೋಡ್​ಗಳು ಡಿಸೆಂಬರ್​ 30ರ ವೇಳೆಗೆ ಅಮಾನ್ಯಗೊಳ್ಳುತ್ತದೆ ಎಂದು ತಿಳಿಸಿರುವ ಬ್ಯಾಂಕ್​, ತನ್ನೆಲ್ಲಾ ಗ್ರಾಹಕರಿಗೆ ತಮ್ಮೆಲ್ಲಾ ವ್ಯವಹಾರವನ್ನು ನೂತನ IFSC/MICR ಕೋಡ್​ ಮೂಲಕವೇ ಮಾಡುವಂತೆ ಸೂಚಿಸಿದೆ.
First published: October 4, 2018, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading