ಶೇ 0.25ರಷ್ಟು ರೆಪೋ ದರ ಕಡಿತಗೊಳಿಸಿದ ಆರ್​ಬಿಐ; ಗೃಹ ಸಾಲ ಇನ್ನು ಅಗ್ಗ

ಕಳೆದ ತನ್ನ ಎರಡು ವರದಿ ಆಧಾರಿಸಿ ಆರ್​ಬಿಐ ಶೇ 0.25ರಷ್ಟು ರೆಪೋ ದರ ಕಡಿತಗೊಳಿಸಲು ನಿರ್ಧರಿಸಿತು

Seema.R | news18
Updated:June 6, 2019, 12:42 PM IST
ಶೇ 0.25ರಷ್ಟು ರೆಪೋ ದರ ಕಡಿತಗೊಳಿಸಿದ ಆರ್​ಬಿಐ; ಗೃಹ ಸಾಲ ಇನ್ನು ಅಗ್ಗ
ಆರ್​ಬಿಐ
Seema.R | news18
Updated: June 6, 2019, 12:42 PM IST
ನವದೆಹಲಿ: ಆರ್​ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ಸಾಲವನ್ನು (ರೆಪೋ ದರ) ಶೇ.0.25ರಷ್ಟು ಕಡಿತಗೊಳಿಸಿದೆ.

ಪ್ರಸಕ್ತ ವರ್ಷದ ಎರಡನೇ ಮಾಸದ ಹಣಕಾಸು ನೀತಿ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ದಾಸ್​​ ಸಾಲದ ಬಡ್ಡಿದರವನ್ನು ಇಳಿಕೆ ಮಾಡಿರುವ ಕುರಿತು ಪ್ರಕಟಿಸಿದ್ದಾರೆ. ಪ್ರಸಕ್ತ ಬಡ್ಡಿದರ ಶೇ.6ರಷ್ಟಿದ್ದು ಇದನ್ನು ಶೇ.5.75ರಷ್ಟಕ್ಕೆ ಇಳಿಕೆ ಮಾಡಲಾಗಿದೆ.

ಸತತ ಮೂರು ದಿನಗಳ ಕಾಲ ಹಣಕಾಸು ನೀತಿ ಸಮಿತಿ ಸಭೆ ನಡೆಸಿದ ಬಳಿಕ ಈ ಆದೇಶ ಹೊರ ಬಿದ್ದಿದೆ. ಕಳೆದ ತನ್ನ ಎರಡು ವರದಿ ಆಧರಿಸಿ ಆರ್​ಬಿಐ 25ಬೇಸಿಸ್​ ಪಾಯಿಂಟ್​ ಇಳಿಕೆ ಮಾಡಿದೆ. ಇದರಿಂದ ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಇದರ ಜೊತೆ ಬ್ಯಾಂಕ್​ ವಾಹಿವಾಟಿನ NEFT, RTGS ಶುಲ್ಕ ರದ್ದುಗೊಳಿಲಾಗಿದೆ.

ಇದನ್ನು ಓದಿ: ಆಂಗ್ಲ ಮಾಧ್ಯಮ ಶಾಲೆ ವಿರೋಧಿಸಿದ್ದ ಸಿದ್ದರಾಮಯ್ಯ ತವರಲ್ಲೇ ಇಂಗ್ಲಿಷ್ ಮೀಡಿಯಂಗೆ ಭಾರೀ ಬೇಡಿಕೆ, ಕನ್ನಡಕ್ಕೆ ಶೂನ್ಯ ದಾಖಲಾತಿ!

ದೇಶದ ಆರ್ಥಿಕ ದರ ಕುಂಠಿತಗೊಳುವ ಸಾಧ್ಯತೆ ಇರುವುದರಿಂದ​​ ಆರ್​ಬಿಐ ದೊಡ್ಡ ಮೊತ್ತದ ರೆಪೋ ದರವನ್ನು ತಮ್ಮ ಮುಂದಿನ ಹಣಕಾಸು ನೀತಿಯಲ್ಲಿ ಕಡಿತಗೊಳಿಸಬೇಕು ಎಂದು ಭಾರತೀಯ ಸ್ಟೇಟ್​ ಬ್ಯಾಂಕ್ ಸಮೀಕ್ಷಾ ವರದಿ ನೀಡಿತ್ತು.

 

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...