September Bank holidays: ಬ್ಯಾಂಕ್​ ಗ್ರಾಹಕರೇ ಗಮನಿಸಿ; ಸೆಪ್ಟೆಂಬರ್​ ತಿಂಗಳಲ್ಲಿ 12 ದಿನ ಬ್ಯಾಂಕ್​ಗಳಿಗೆ ರಜೆ

Bank holidays in September 2021: ಸೆ.10 ರಂದು ಗಣೇಶ ಚತುರ್ಥಿ ಇರುವುದರಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕುಗಳು ಕ್ಲೋಸ್ ಆಗಲಿವೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿ ತಿಂಗಳು ಬ್ಯಾಂಕ್‌ಗೆ ಇಂತಿಷ್ಟು ರಜಾ ದಿನಗಳೆಂದು ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 - 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್‌ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರಿಗೂ ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ಇನ್ನೂ ಹಲವರು ಬ್ಯಾಂಕ್‌ಗೆ ಹೋಗುತ್ತಾರೆ. ಈ ಹಿನ್ನೆಲೆ ಬ್ಯಾಂಕ್‌ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್‌ ಶಾಖೆಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು. ಇದೇ ರೀತಿ, ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾದ ಹಾಲಿಡೇ ಕ್ಯಾಲೆಂಡರ್​ ಪ್ರಕಾರ, ಸೆಪ್ಟೆಂಬರ್ ​​ ತಿಂಗಳಿನಲ್ಲಿ ಬರೋಬ್ಬರಿ 12 ದಿನಗಳು ಬ್ಯಾಂಕ್‌ ಬಂದ್‌ ಆಗಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗಬಹುದು.

ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಈ 12 ದಿನಗಳ ರಜೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಈ ಸೆಪ್ಟೆಂಬರ್​ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್​ ರಜೆ ಇರುತ್ತದೆ ಎಂದು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಹೇಳಿದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 15 ದಿನಗಳ ಕಾಲ ರಜೆ ಇರುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್​ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್​ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.

ಈ ಸೆಪ್ಟೆಂಬರ್ ತಿಂಗಳಿನಲ್ಲಿ 7 ದಿಗಳು ಮಾತ್ರ ಬ್ಯಾಂಕ್​ಗಳಿಗೆ ರಜೆ ಇದೆ. ಇನ್ನುಳಿದ ರಜಾದಿನಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿವೆ. ಸೆ.10 ರಂದು ಗಣೇಶ ಚತುರ್ಥಿ ಇರುವುದರಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕುಗಳು ಕ್ಲೋಸ್ ಆಗಲಿವೆ. ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗಪುರ, ಪಣಜಿ ಸೇರಿದಂತೆ ವಿವಿಧ ನಗರಗಲಲ್ಲಿ ಹಬ್ಬದ ಆಚರಣೆ ಇದ್ದು, ಅಂದು ಬ್ಯಾಂಕ್ ರಜಾದಿನವಾಗಿದೆ. ಅಲ್ಲದೆ, ಮರುದಿನ, ಸೆಪ್ಟೆಂಬರ್ 11ರಂದು ವಾರಾಂತ್ಯವಾಗಿರುವುದರಿಂದ ಅಂದು ಸಹ ರಜಾದಿನವಾಗಿದೆ.ಅಂದು ಗಣೇಶ ಚತುರ್ಥಿಯ ಎರಡನೇ ದಿನ, ಇದು ಪಣಜಿಯಲ್ಲಿ ಬ್ಯಾಂಕುಗಳಿಗೆ ಮಾತ್ರ ಹಬ್ಬದ ರಜೆ ಇದೆ.

ಇದನ್ನೂ ಓದಿ:Explained: ಸ್ಮಾರ್ಟ್ ಗ್ಲಾಸ್ ಎಂದರೇನು ಮತ್ತು ಅವು ಹೇಗೆ ಕೆಲಸ ಮಾಡುತ್ತವೆ ಗೊತ್ತಾ..?

ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್​ ಕ್ಲೋಸಿಂಗ್. ಆದರೆ ಇದ್ಯಾವುದು ಸೆಪ್ಟೆಂಬರ್ ತಿಂಗಳಿಗೆ ಅನ್ವಯಿಸುವುದಿಲ್ಲ.

ಬ್ಯಾಂಕ್‌ ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ.

1) ಸೆಪ್ಟೆಂಬರ್ 5 - ಭಾನುವಾರ

2) ಸೆಪ್ಟೆಂಬರ್ 8 - ಶ್ರೀಮಂತ ಶಂಕರದೇವರ ತಿಥಿ - (ಗುವಾಹಟಿ)

3) ಸೆಪ್ಟೆಂಬರ್ 9 - ತೀಜ್ (ಹರಿತಾಳಿಕ) - (ಗ್ಯಾಂಗ್ಟಾಕ್)

4) ಸೆಪ್ಟೆಂಬರ್ 10 - ಗಣೇಶ ಚತುರ್ಥಿ (ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ, ಪಣಜಿ)

5) ಸೆಪ್ಟೆಂಬರ್ 11 - ಎರಡನೇ ಶನಿವಾರ / ಗಣೇಶ ಚತುರ್ಥಿ (2 ನೇ ದಿನ) - (ಪಣಜಿ)

6) ಸೆಪ್ಟೆಂಬರ್ 12 - ಭಾನುವಾರ

7) ಸೆಪ್ಟೆಂಬರ್ 17 - ಕರ್ಮ ಪೂಜೆ - (ರಾಂಚಿ)

8) ಸೆಪ್ಟೆಂಬರ್ 19 - ಭಾನುವಾರ

9) ಸೆಪ್ಟೆಂಬರ್ 20 - ಇಂದ್ರಜಾತ್ರೆ - (ಗ್ಯಾಂಗ್ಟಾಕ್)

10) ಸೆಪ್ಟೆಂಬರ್ 21 - ಶ್ರೀ ನಾರಾಯಣ ಗುರು ಸಮಾಧಿ ದಿನ - (ಕೊಚ್ಚಿ ಮತ್ತು ತಿರುವನಂತಪುರಂ)

11) ಸೆಪ್ಟೆಂಬರ್ 25 - ನಾಲ್ಕನೇ ಶನಿವಾರ

12) ಸೆಪ್ಟೆಂಬರ್ 26 - ಭಾನುವಾರ

ಇದನ್ನೂ ಓದಿ:Karnataka Weather Today: ಸೆ.5ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
Published by:Latha CG
First published: