Bank Holidays: ನವೆಂಬರ್​ನಲ್ಲಿ ಬ್ಯಾಂಕುಗಳಿಗೆ ಯಾವ್ಯಾವ ದಿನ ರಜೆ? ಇಲ್ಲಿದೆ ಡೀಟೇಲ್ಸ್

Bank Holidays in November: ನವೆಂಬರ್ 1, 8, 14, 15, 22, 28, 29, 30 ರಂದು ಬ್ಯಾಂಕುಗಳಿಗೆ ರಜೆ ಇರಲಿವೆ. ನವೆಂಬರ್ 14 ಮತ್ತು ನವೆಂಬರ್ 30ರಂದು ದೀಪಾವಳಿ ಮತ್ತು ಗುರು ನಾನಕ್ ಜಯಂತಿ ಇದೆ.

news18
Updated:November 2, 2020, 12:37 PM IST
Bank Holidays: ನವೆಂಬರ್​ನಲ್ಲಿ ಬ್ಯಾಂಕುಗಳಿಗೆ ಯಾವ್ಯಾವ ದಿನ ರಜೆ? ಇಲ್ಲಿದೆ ಡೀಟೇಲ್ಸ್
Holiday
  • News18
  • Last Updated: November 2, 2020, 12:37 PM IST
  • Share this:
ನವದೆಹಲಿ(ಅ. 28): ಈಗ ಹಬ್ಬದ ಋತು ಶುರುವಾಗಿದೆ. ಮುಂಬರುವ ನವೆಂಬರ್ ತಿಂಗಳಲ್ಲೂ ಹಲವು ಹಬ್ಬಗಳು ಬರುತ್ತಿವೆ. ಬ್ಯಾಂಕುಗಳಿಗೆ ರಜಾ ದಿನದ ಸುಗ್ಗಿ. ನವೆಂಬರ್​ನಲ್ಲಿ ದೀಪಾವಳಿ ಮತ್ತು ಗುರು ನಾನಕ್ ಜಯಂತಿ ಹಬ್ಬ ಬೀಳುತ್ತದೆ. ಇದರ ಜೊತೆಗೆ ನಾಲ್ಕು ಭಾನುವಾರ ಹಾಗು ಎರಡು ಶನಿವಾರದ ರಜೆಗಳೂ ಇವೆ. ಆದರೆ, ದೀಪಾವಳಿ ಹಬ್ಬವು ಎರಡನೇ ಶನಿವಾರ ಬೀಳುತ್ತಿದೆ. ಹೀಗಾಗಿ, ಒಂದು ಹೆಚ್ಚುವರಿ ರಜೆ ಇಲ್ಲವಾಗಿದೆ. ಕರ್ನಾಟಕದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಇದೆ. ಇದೂ ಕೂಡ ಭಾನುವಾರ ಬಂದಿದೆ. ಹೀಗಾಗಿ ಇದರ ಹೆಚ್ಚವರಿ ರಜೆಯ ಭಾಗ್ಯ ಇರುವುದಿಲ್ಲ.

ನವೆಂಬರ್​ನಲ್ಲಿರುವ ರಜೆಗಳು:

ನವೆಂಬರ್ 1, 8, 14, 15, 22, 28, 29, 30 ರಂದು ಬ್ಯಾಂಕುಗಳಿಗೆ ರಜೆ ಇರಲಿವೆ. ನವೆಂಬರ್ 14 ಮತ್ತು ನವೆಂಬರ್ 30ರಂದು ದೀಪಾವಳಿ ಮತ್ತು ಗುರು ನಾನಕ್ ಜಯಂತಿ ಇದೆ.

ಇದನ್ನೂ ಓದಿ: ಚೀನಾದ ಭಾಗ ಲಡಾಖ್ ಎಂದು ಯಡವಟ್ಟು; ಟ್ವಿಟ್ಟರ್ ವಿವರಣೆ ಸಮರ್ಪಕವಲ್ಲ ಎಂದ ಸಂಸದರ ಸಮಿತಿ

ಇನ್ನು, ನಾಳೆ ಅಕ್ಟೋಬರ್ 29ರಂದು ಕೆಲ ರಾಜ್ಯಗಳಲ್ಲಿ ಮಿಲಾದ್-ಎ-ಶರೀಫ್ ಹಬ್ಬದ ಪ್ರಯುಕ್ತ ರಜೆ ಇದೆ. ಅಕ್ಟೋಬರ್ 30ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಜೆ ಇದೆ. ಅಕ್ಟೋಬರ್ 31ರಂದು ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಸರ್ದಾರ್ ಪಟೇಲ್ ಜಯಂತಿ ಇರುವುದರಿಂದ ಕೆಲ ರಾಜ್ಯಗಳಲ್ಲಿ ರಜೆ ಇರಲಿದೆ.
Published by: Vijayasarthy SN
First published: October 28, 2020, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading