Bank Holidays in December: ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 12 ದಿನ ಬ್ಯಾಂಕ್ ರಜೆ; ಲಿಸ್ಟ್ ಇಲ್ಲಿದೆ ನೋಡಿ

ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 12 ದಿನಗಳ ಕಾಲ ರಜೆ ಇರುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್​ ರಜೆಗಳು ಬದಲಾಗಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Bank Holidays in December: ಪ್ರತಿ ತಿಂಗಳು ಬ್ಯಾಂಕ್(Bank)‌ಗೆ ಇಂತಿಷ್ಟು ರಜಾ ದಿನಗಳೆಂದು ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆ(Holidays)ಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 - 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್‌ ಗ್ರಾಹಕರಿಗೆ(Bank Customers) ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರಿಗೂ ಆನ್‌ಲೈನ್‌ ಬ್ಯಾಂಕಿಂಗ್(Online Banking)‌ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ಇನ್ನೂ ಹಲವರು ಬ್ಯಾಂಕ್‌ಗೆ ಹೋಗುತ್ತಾರೆ. ಈ ಹಿನ್ನೆಲೆ ಬ್ಯಾಂಕ್‌ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್‌ ಶಾಖೆ(Bank Branch) ಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು. ಇದೇ ರೀತಿ, ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾ(Reserve Bank of India)ದ ಹಾಲಿಡೇ ಕ್ಯಾಲೆಂಡರ್(Holiday Calendar)​ ಪ್ರಕಾರ, ಡಿಸೆಂಬರ್(December)​ ತಿಂಗಳಿನಲ್ಲಿ ಬರೋಬ್ಬರಿ 12 ದಿನಗಳು ಬ್ಯಾಂಕ್‌ ಬಂದ್‌ ಆಗಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗಬಹುದು.

ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಈ 12 ದಿನಗಳ ರಜೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಈ ಡಿಸೆಂಬರ್​ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್​ ರಜೆ ಇರುತ್ತದೆ ಎಂದು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಹೇಳಿದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 12 ದಿನಗಳ ಕಾಲ ರಜೆ ಇರುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್​ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್​ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.

ಇದನ್ನೂ ಓದಿ: Thief: ಪ್ರೇಯಸಿಯರಿಗಾಗಿ ಖರ್ಚು ಮಾಡಲು ದುಬಾರಿ ಬೈಕ್​ನಲ್ಲಿ ಕಳ್ಳತನ.. ಕೊನೆಗೂ ಸಿಕ್ಕಿಬಿದ್ದ ಖದೀಮ!

ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್​ ಕ್ಲೋಸಿಂಗ್.

ಬ್ಯಾಂಕ್‌ ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ.

ಡಿಸೆಂಬರ್ 3: ಫೀಸ್ಟ್​ ಆಫ್​ ಸೇಂಟ್ ಫ್ರಾನ್ಸಿಸ್ ಗ್ಸೇವಿಯರ್
ಡಿಸೆಂಬರ್ 18: ಯು ಸೋಸೋ ಥಾಮ್ ಡೆತ್ ಆನಿವರ್ಸರಿ
ಡಿಸೆಂಬರ್ 24: ಕ್ರಿಸ್​ಮಸ್ ಈವ್
ಡಿಸೆಂಬರ್ 25: ಕ್ರಿಸ್​ಮಸ್
ಡಿಸೆಂಬರ್ 27: ಕ್ರಿಸ್​ಮಸ್ ಸೆಲೆಬ್ರೇಷನ್
ಡಿಸೆಂಬರ್ 30: ಯು ಕಿಯಾಂಗ್ ನಾಂಗ್​ಬಹ್
ಡಿಸೆಂಬರ್ 31: ನ್ಯೂ ಇಯರ್ ಈವ್

ಈ ಮೇಲ್ಕಂಡ ರಜೆಗಳ ಹೊರತಾಗಿ ಡಿಸೆಂಬರ್ ತಿಂಗಳ ರಜೆ ಪಟ್ಟಿಯಲ್ಲಿ ಎರಡನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರಗಳು ಸೇರಿವೆ.

ಡಿಸೆಂಬರ್ 5- ಭಾನುವಾರ
ಡಿಸೆಂಬರ್ 11- ಎರಡನೇ ಶನಿವಾರ
ಡಿಸೆಂಬರ್ 12- ಭಾನುವಾರ
ಡಿಸೆಂಬರ್ 19- ಭಾನುವಾರ
ಡಿಸೆಂಬರ್ 25- ನಾಲ್ಕನೇ ಶನಿವಾರ & ಕ್ರಿಸ್​ಮಸ್
ಡಿಸೆಂಬರ್ 26- ಭಾನುವಾರ

ಇದನ್ನೂ ಓದಿ: HAL Recruitment 2021: ತಿಂಗಳಿಗೆ ₹ 21,000 ಸಂಬಳ, ಡಿಪ್ಲೊಮಾ ಆದವರಿಗೆ ಬೆಂಗಳೂರಿನ HALನಲ್ಲಿ ಉದ್ಯೋಗ

ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
Published by:Latha CG
First published: