Bank Holidays in December: ಭಾರತದಲ್ಲಿ ಡಿಸೆಂಬರ್ (December)ತಿಂಗಳಲ್ಲಿ ಬರೋಬ್ಬರಿ 12 ದಿನ ಬ್ಯಾಂಕ್ಗಳಿಗೆ ರಜೆ(Bank Holidays) ಇದ್ದು, ಮುಚ್ಚಲ್ಪಟ್ಟಿರುತ್ತವೆ. ಈ ರಜಾದಿನ(Holiday)ಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಸೇರಿವೆ. ಆದಾಗ್ಯೂ ಭಾರತ(India)ದಲ್ಲಿ ಎಲ್ಲಾ ಬ್ಯಾಂಕ್ಗಳು ಸಹ 12 ದಿನಗಳ ಕಾಲ ಮುಚ್ಚಿರುವುದಿಲ್ಲ. ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕೆಲವು ರಜೆಗಳು ಪ್ರಾದೇಶಿಕ ವಿಶೇಷತೆಯನ್ನು ಒಳಗೊಂಡಿರುತ್ತವೆ.
ಕ್ರಿಸ್ಮಸ್ಗೆ ದೇಶಾದ್ಯಂತ ಬ್ಯಾಂಕ್ ರಜೆ
ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚುವ ಒಂದು ದಿನವಿದೆ. ಅದು ಡಿಸೆಂಬರ್ 25 ರಂದು (ಶನಿವಾರ) ಕ್ರಿಸ್ಮಸ್ ಆಗಿದೆ. ಕೆಲವು ರಾಜ್ಯ-ನಿರ್ದಿಷ್ಟ ರಜಾದಿನಗಳೂ ಇವೆ. ಇದಕ್ಕೆ ಹೆಚ್ಚುವರಿಯಾಗಿ, ಡಿಸೆಂಬರ್ನಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುವ ರಜಾದಿನಗಳ ಪಟ್ಟಿಯನ್ನು ನೋಡೋಣ, ಆದ್ದರಿಂದ ನೀವು ಅದಕ್ಕೆ ಅನುಗುಣವಾಗಿ ವೇಳಾಪಟ್ಟಿಯನ್ನು ಮಾಡಬಹುದು.
ಇದನ್ನೂ ಓದಿ: ಊಟದ ಮೆನು ಬದಲಿಸಿದ IRCTC: ಯಾವ ರೈಲಿನಲ್ಲಿ ಏನು ಸಿಗುತ್ತೆ? ಇಲ್ಲಿದೆ ಮಾಹಿತಿ
ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
ಡಿಸೆಂಬರ್ 3: ಫೀಸ್ಟ್ ಆಫ್ ಸೇಂಟ್ ಫ್ರಾನ್ಸಿಸ್ ಗ್ಸೇವಿಯರ್
ಡಿಸೆಂಬರ್ 18: ಯು ಸೋಸೋ ಥಾಮ್ ಡೆತ್ ಆನಿವರ್ಸರಿ
ಡಿಸೆಂಬರ್ 24: ಕ್ರಿಸ್ಮಸ್ ಈವ್
ಡಿಸೆಂಬರ್ 25: ಕ್ರಿಸ್ಮಸ್
ಡಿಸೆಂಬರ್ 27: ಕ್ರಿಸ್ಮಸ್ ಸೆಲೆಬ್ರೇಷನ್
ಡಿಸೆಂಬರ್ 30: ಯು ಕಿಯಾಂಗ್ ನಾಂಗ್ಬಹ್
ಡಿಸೆಂಬರ್ 31: ನ್ಯೂ ಇಯರ್ ಈವ್
ಈ ಮೇಲ್ಕಂಡ ರಜೆಗಳ ಹೊರತಾಗಿ ಡಿಸೆಂಬರ್ ತಿಂಗಳ ರಜೆ ಪಟ್ಟಿಯಲ್ಲಿ ಎರಡನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರಗಳು ಸೇರಿವೆ.
ಉಳಿದ ರಜಾದಿನಗಳ ಪಟ್ಟಿ
ಡಿಸೆಂಬರ್ 5- ಭಾನುವಾರ
ಡಿಸೆಂಬರ್ 11- ಎರಡನೇ ಶನಿವಾರ
ಡಿಸೆಂಬರ್ 12- ಭಾನುವಾರ
ಡಿಸೆಂಬರ್ 19- ಭಾನುವಾರ
ಡಿಸೆಂಬರ್ 25- ನಾಲ್ಕನೇ ಶನಿವಾರ & ಕ್ರಿಸ್ಮಸ್
ಡಿಸೆಂಬರ್ 26- ಭಾನುವಾರ
ಮೂರು ವರ್ಗಗಳಾಗಿ ರಜಾದಿನ ವಿಂಗಡಣೆ
ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್ ಕ್ಲೋಸಿಂಗ್.
ಇದನ್ನೂ ಓದಿ: IISc Bangalore Recruitment 2021: ತಿಂಗಳಿಗೆ 1 ಲಕ್ಷ ರೂ. ಸಂಬಳ; ಬೆಂಗಳೂರು IIScಯಲ್ಲಿ ಉದ್ಯೋಗ
ಗ್ರಾಹಕರು ಬ್ಯಾಂಕ್ಗೆ ಹೋಗುವ ಮುನ್ನ
ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ