• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಏಪ್ರಿಲ್​ 2021ರ ಬ್ಯಾಂಕ್​ ರಜಾ ದಿನಗಳು: ಈ ದಿನ ಬ್ಯಾಂಕ್​ಗೆ ಹೋಗುವ ಕೆಲಸವನ್ನು ಇಟ್ಟುಕೊಳ್ಳಬೇಡಿ...!

ಏಪ್ರಿಲ್​ 2021ರ ಬ್ಯಾಂಕ್​ ರಜಾ ದಿನಗಳು: ಈ ದಿನ ಬ್ಯಾಂಕ್​ಗೆ ಹೋಗುವ ಕೆಲಸವನ್ನು ಇಟ್ಟುಕೊಳ್ಳಬೇಡಿ...!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಬ್ಯಾಂಕ್​ ಕೆಲಸಗಳನ್ನು ಈ ರಜಾದಿನಗಳನ್ನು ನೋಡಿಕೊಂಡು ಮುಗಿಸಿಕೊಳ್ಳಿ. ಚೆಕ್ ಹಾಕುವುದು, ಹಣ ಡ್ರಾ ಮಾಡುವುದು, ಹೊಸ ಪಾಸ್​ ಬುಕ್​ ಅಪ್ಲೈ ಮಾಡುವುದು, ಪಾಸ್​ಬುಕ್ ಎಂಟ್ರಿ ಮಾಡಿಸುವುದು, ಪಿಂಚಣಿ ಹಣ ಡ್ರಾ ಮಾಡುವುದು, ಡಿಡಿ ತೆಗೆದುಕೊಳ್ಳುವುದು ಇಂತಹ ತುರ್ತು ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಅವಲಂಬನೆ ಇರುವವರು ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಉತ್ತಮ.

ಮುಂದೆ ಓದಿ ...
  • Share this:

ಪ್ರತಿ ವರ್ಷವೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್​​ಬಿಐ) ರಜೆಯ ಕ್ಯಾಲೆಂಡರ್​ ದೇಶಾದ್ಯಂತ ಕಾರ್ಯನಿರ್ವಹಿಸುವ ಎಲ್ಲಾ ಬ್ಯಾಂಕುಗಳ ಸರ್ಕಾರಿ ರಜೆಯ ಪಟ್ಟಿಯನ್ನು ಒಳಗೊಂಡಿರುತ್ತದೆ. ಈ ಕ್ಯಾಲೆಂಡರ್​ನಲ್ಲಿ ಉಲ್ಲೇಖಿಸಲಾಗಿರುವ ದಿನಗಳಲ್ಲಿ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ಆ ದಿನ ಬ್ಯಾಂಕ್​ ರಜಾ ದಿನವಾಗಿರುತ್ತದೆ. ನೆಗೋಶಿಯಬಲ್ ಇನ್ಸ್​​ಟ್ರುಮೆಂಟ್ಸ್​ ಆ್ಯಕ್ಟ್ ಅಡಿಯಲ್ಲಿ ರಜೆ, ರಿಯಲ್ ಟೈಮ್ ಸೆಟಲ್ಮೆಂಟ್ ರಜೆ ಮತ್ತು ಬ್ಯಾಂಕುಗಳ ಖಾತೆಗಳು ಈ ಮೂರು ಅಂಶಗಳನ್ನು ಆಧರಿಸಿ ನಿರ್ದಿಷ್ಟ ದಿನಗಳನ್ನು ಬ್ಯಾಂಕ್​ ರಜಾ ದಿನವನ್ನಾಗಿ ಘೋಷಣೆ ಮಾಡಲಾಗಿದೆ. ಈಗಾಗಲೇ ಏಪ್ರಿಲ್‌ 1, 2 ಸತತ ರಜೆಗಳು ಇದ್ದವು. ಇನ್ನು, ಮುಂದಿನ ವಾರದಿಂದ ಬ್ಯಾಂಕ್‌ಗಳಿಗೆ ಹೋಗುವ ಮುನ್ನ ಈ ರಜಾ ದಿನಗಳ ಪಟ್ಟಿಯನ್ನು ನೋಡಿಕೊಳ್ಳಿ.


ಭಾರತದಲ್ಲಿ ಒಂದೇ ಹಬ್ಬ ಅಥವಾ ಬೇರೆ ಬೇರೆ ಹಬ್ಬಗಳಿರಬಹುದು. ಪ್ರತಿ ರಾಜ್ಯದಲ್ಲೂ ಈ ಹಬ್ಬ ಮತ್ತು ಹಬ್ಬದ ದಿನಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ನಾವು 2021 ರ ಏಪ್ರಿಲ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಸಂಗ್ರಹಿಸಿದ್ದು ಅದರ ವಿವರ ಹೀಗಿದೆ.


ಏಪ್ರಿಲ್ 5: ಬಾಬು ಜಗಜ್ಜೀವನ್ ರಾಮ್ ಅವರ ಜನ್ಮದಿನ. ಇದು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಹಳ ನಿರ್ದಿಷ್ಟವಾದ ರಜಾದಿನವಾಗಿದೆ.


ಏಪ್ರಿಲ್ 6: ತಮಿಳುನಾಡು ವಿಧಾನಸಭಾ ಚುನಾವಣೆಯ ಕಾರಣ ಇಲ್ಲಿ ರಾಜ್ಯ ನಿರ್ದಿಷ್ಟ ರಜಾದಿನವಾಗಿದೆ.


ಏಪ್ರಿಲ್ 10: ಇದು ಎರಡನೇ ಶನಿವಾರವಾಗಿದ್ದು, ಬ್ಯಾಂಕ್​ಗಳಿಗೆ ಎಂದಿನಂತೆ ರಜೆ ಇರುತ್ತದೆ.


ಏಪ್ರಿಲ್ 13: ಗುಡಿ ಪಡ್ವಾ, ತೆಲುಗು ಹೊಸ ವರ್ಷದ ದಿನವಾಗಿದ್ದು, ಕರ್ನಾಟಕದಲ್ಲಿ ಯುಗಾದಿಯ ದಿನವಾಗಿದೆ.


ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತ್ಯಂತ ಅದ್ಧೂರಿ ವೈವಾಹಿಕ ಪ್ರದರ್ಶನ


ಏಪ್ರಿಲ್ 14: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ / ತಮಿಳು ಹೊಸ ವರ್ಷದ ದಿನ / ವಿಶು / ಬಿಜು ಹಬ್ಬ / ಚಿರೋಬಾ (ಮಣಿಪುರ) / ಬೋಹಾಗ್ ಬಿಹುವನ್ನು ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಆಚರಿಸಲಾಗುತ್ತದೆ. ಆದ್ದರಿಂದ ಈ ದಿನ ಬ್ಯಾಂಕ್​ ರಜಾದಿನವಾಗಿದೆ.


ಏಪ್ರಿಲ್ 15: ಹಿಮಾಚಲ್ ದಿನ / ಬಂಗಾಳಿ ಹೊಸ ವರ್ಷದ ದಿನ / ಬೋಹಾಗ್ ಬಿಹು / ಸರ್ಹುಲ್ ಕಾರಣ ರಜಾದಿನವಾಗಿದೆ.


ಏಪ್ರಿಲ್ 21: ಶ್ರೀ ರಾಮ ನವಮಿ / ಗರಿಯಾ ಪೂಜಾ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ಗೋವಾ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ, ಪುದುಚೇರಿ ಮತ್ತು ತಮಿಳುನಾಡುಗಳಲ್ಲಿ ರಾಷ್ಟ್ರೀಯ ರಜಾದಿನವಾಗಿದೆ.


ಏಪ್ರಿಲ್ 24: ಇದು ತಿಂಗಳ ನಾಲ್ಕನೇ ಶನಿವಾರ. ಆದ್ದರಿಂದ ಎಂದಿನಂತೆಯೇ ಬ್ಯಾಂಕ್​ಗಳಿಗೆ ರಜೆ ಇರುತ್ತದೆ.


ಏಪ್ರಿಲ್ 25: ಮಹರ್ಷಿ ಪರಶುರಾಮ ಜಯಂತಿ. ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನಗಳಲ್ಲಿ ಆಚರಿಸುವ ಹಬ್ಬವಾಗಿದ್ದು, ನಿರ್ದಿಷ್ಟ ರಜಾ ದಿನವಾಗಿದೆ.


ಒಟ್ಟಿನಲ್ಲಿ ಈ ಎಲ್ಲಾ ರಜಾದಿನಗಳನ್ನು ನಿಮ್ಮ ಕ್ಯಾಲೆಂಡರ್​ನಲ್ಲಿ ಗುರುತು ಹಾಕಿಕೊಳ್ಳುವುದನ್ನು ಮರೆಯಬೇಡಿ. ಜೊತೆಗೆ ನಿಮ್ಮ ಬ್ಯಾಂಕ್​ ಕೆಲಸಗಳನ್ನು ಈ ರಜಾದಿನಗಳನ್ನು ನೋಡಿಕೊಂಡು ಮುಗಿಸಿಕೊಳ್ಳಿ. ಚೆಕ್ ಹಾಕುವುದು, ಹಣ ಡ್ರಾ ಮಾಡುವುದು, ಹೊಸ ಪಾಸ್​ ಬುಕ್​ ಅಪ್ಲೈ ಮಾಡುವುದು, ಪಾಸ್​ಬುಕ್ ಎಂಟ್ರಿ ಮಾಡಿಸುವುದು, ಪಿಂಚಣಿ ಹಣ ಡ್ರಾ ಮಾಡುವುದು, ಡಿಡಿ ತೆಗೆದುಕೊಳ್ಳುವುದು ಇಂತಹ ತುರ್ತು ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಅವಲಂಬನೆ ಇರುವವರು ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಉತ್ತಮ.

First published: