ಪ್ರತಿ ತಿಂಗಳು ಬ್ಯಾಂಕ್‌ಗೆ ಇಂತಿಷ್ಟು ರಜಾ ದಿನಗಳೆಂದು ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 - 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರಿಗೂ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ಇನ್ನೂ ಹಲವರು ಬ್ಯಾಂಕ್‌ಗೆ ಹೋಗುತ್ತಾರೆ. ಈ ಹಿನ್ನೆಲೆ ಬ್ಯಾಂಕ್ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು. ಇದೇ ರೀತಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಾಲಿಡೇ ಕ್ಯಾಲೆಂಡರ್ ಪ್ರಕಾರ, ಜುಲೈ ತಿಂಗಳಿನಲ್ಲಿ ಬರೋಬ್ಬರಿ 15 ದಿನಗಳು ಬ್ಯಾಂಕ್ ಬಂದ್ ಆಗಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗಬಹುದು.
ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಈ 15 ದಿನಗಳ ರಜೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಈ ಜುಲೈ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್ ರಜೆ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 15 ದಿನಗಳ ಕಾಲ ರಜೆ ಇರುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.
ಇದನ್ನೂ ಓದಿ:Morning Digest: ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರು, ವೀಕೆಂಡ್ ಕರ್ಫ್ಯೂಅಂತ್ಯ; ಇಂದಿನ ಪ್ರಮುಖ ಸುದ್ದಿಗಳಿವು
ಬ್ಯಾಂಕ್ ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ...
ಜುಲೈ 4- ಭಾನುವಾರ
ಜುಲೈ 10- ಎರಡನೇ ಶನಿವಾರ
ಜುಲೈ 11- ಭಾನುವಾರ
ಜುಲೈ 18-ಭಾನುವಾರ
ಜುಲೈ 24-ನಾಲ್ಕನೇ ಶನಿವಾರ
ಜುಲೈ 25-ಭಾನುವಾರ
ಕಾಂಗ್(ರಥಜಾತ್ರಾ)/ ರಥ ಯಾತ್ರಾ- ಜುಲೈ 12
ಭಾನು ಜಯಂತಿ- ಜುಲೈ 13
ದೃಕ್ಪ ಶೆಚಿ-ಜುಲೈ 14
ಹರೆಲ- ಜುಲೈ 16
ಯು ತಿರೋತ್ ಸಿಂಗ್ ಡೇ/ ಖರ್ಚಿ ಪೂಜಾ-ಜುಲೈ 17
ಗುರು ರಿಂಪೊಚೆ ತುಂಗ್ಕರ್ ಶೆಚು-ಜುಲೈ 19
ಬಕ್ರೀದ್- ಜುಲೈ 20
ಬಕ್ರಿ ಈದ್(ಈದ್-ಯುಐ ಜುಹಾ) (ಈದ್-ಯುಐ-ಅಧಾ)-ಜುಲೈ 21
ಕೇರ್ ಪೂಜಾ-ಜುಲೈ 31
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ