ಆರ್​ಬಿಐ ಕಸರತ್ತು; ಆನ್​ಲೈನ್​ನಲ್ಲಿ NEFT ಮತ್ತು RTGS ವಹಿವಾಟಿಗೆ ಇಲ್ಲ ಶುಲ್ಕ; ಎಟಿಎಂ ಶುಲ್ಕ ಕಡಿತಕ್ಕೂ ಚಿಂತನೆ

ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಗೆ ಚೇತರಿಕೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಕೆಲವಾರು ಕ್ರಮಗಳನ್ನು ಘೋಷಿಸಿದೆ.

Vijayasarthy SN | news18
Updated:June 6, 2019, 4:10 PM IST
ಆರ್​ಬಿಐ ಕಸರತ್ತು; ಆನ್​ಲೈನ್​ನಲ್ಲಿ NEFT ಮತ್ತು RTGS ವಹಿವಾಟಿಗೆ ಇಲ್ಲ ಶುಲ್ಕ; ಎಟಿಎಂ ಶುಲ್ಕ ಕಡಿತಕ್ಕೂ ಚಿಂತನೆ
ನಗದು
  • News18
  • Last Updated: June 6, 2019, 4:10 PM IST
  • Share this:
ನವದೆಹಲಿ(ಜೂ. 06): ಭಾರತದ ಹಣಕಾಸು ವ್ಯವಸ್ಥೆಯ ಸೂತ್ರಧಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಇವತ್ತು ಕೆಲ ಮಹತ್ವದ ಕ್ರಮಗಳನ್ನು ಘೋಷಿಸಿದೆ. ರೆಪೋ ದರವನ್ನು ಸತತ ಮೂರನೇ ಬಾರಿ 25 ಮೂಲಾಂಕಗಳಷ್ಟು ಇಳಿಕೆ ಮಾಡಿದೆ. ಇದರ ಜೊತೆಗೆ ವಿವಿಧ ಬ್ಯಾಂಕ್​ಗಳ ಗ್ರಾಹಕರು ಆನ್​ಲೈನ್​ನಲ್ಲಿ ಹಣ ರವಾನೆಗೆ ಬಳಸುವ NEFT ಮತ್ತು RTGS ವಹಿವಾಟಿನ ಮೇಲಿನ ಶುಲ್ಕವನ್ನು ರದ್ದುಗೊಳಿಸಿದೆ. ಇದರೊಂದಿಗೆ ಗ್ರಾಹಕರು ಈ ಎರಡರಲ್ಲೂ ಉಚಿತವಾಗಿ ಹಣ ಕಳುಹಿಸಬಹುದಾಗಿದೆ. ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲು ಆರ್​ಬಿಐ ಈ ಕ್ರಮ ಕೈಗೊಂಡಿದೆ.

NEFT(ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್) ವ್ಯವಸ್ಥೆಯಲ್ಲಿ 2 ಲಕ್ಷ ರೂಪಾಯಿಯವರೆಗೂ ಹಣ ಕಳುಹಿಸಲು ಸಾಧ್ಯವಿದೆ. ಇದು ಬ್ಯಾಂಕ್ ವ್ಯವಹಾರದ ಕಾಲಘಟ್ಟದಲ್ಲಿ ಮಾತ್ರ ಕಳುಹಿಸಬಹುದು. ಈ ವ್ಯವಸ್ಥೆಯಲ್ಲಿ ಒಂದೊಂದು ವಹಿವಾಟಿಗೂ ಆಯಾ ಬ್ಯಾಂಕಿಗೆ ಆರ್​ಬಿಐ ಒಂದಿಷ್ಟು ಶುಲ್ಕ ವಿಧಿಸುತ್ತದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಂದ ಒಂದು ವಹಿವಾಟಿಗೆ 5 ರೂವರೆಗೂ ಶುಲ್ಕ ಹೇರುತ್ತದೆ. ಈಗ ಆರ್​ಬಿಐ ಶುಲ್ಕ ವಿಧಿಸುವುದನ್ನು ನಿಲ್ಲಿಸುತ್ತದೆ. ಬ್ಯಾಂಕುಗಳೂ ಕೂಡ ತನ್ನ ಗ್ರಾಹಕರಿಗೆ ಶುಲ್ಕ ಹಾಕುವಂತಿಲ್ಲ.

ಇದನ್ನೂ ಓದಿ: ಆಂಧ್ರ ಸಿಎಂ ಜಗನ್​​ ನೇತೃತ್ವದಲ್ಲಿ ಹೊಸ ಸಂಪುಟ ರಚನೆ: ಯಾವ ಸಮುದಾಯಕ್ಕೆ ಎಷ್ಟು ಸಚಿವ ಸ್ಥಾನ?

ಅದೇ ರೀತಿ RTGS (ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಸಿಸ್ಟಂ) ವ್ಯವಸ್ಥೆಯಲ್ಲೂ ಶುಲ್ಕ ಇರುವುದಿಲ್ಲ. 2 ಲಕ್ಷಕ್ಕೂ ಮೇಲ್ಪಟ್ಟ ಹಣವನ್ನು ಆರ್​ಟಿಜಿಎಸ್ ಮೂಲಕ ಗ್ರಾಹಕರು ಬ್ಯಾಂಕ್ ವ್ಯವಹಾರದವರೆಗೂ ಕಾಯುವ ಅಗತ್ಯವಿಲ್ಲದೇ, ತತ್​ಕ್ಷಣವೇ ತಮಗೆ ಬೇಕಾದವರಿಗೆ ಹಣ ಕಳುಹಿಸಬಹುದಾಗಿದೆ.

ಎಟಿಎಂ ಶುಲ್ಕದಲ್ಲೂ ಮಾರ್ಪಾಡು:

ಎಟಿಎಂ ವಹಿವಾಟಿನ ಮೇಲಿರುವ ದರಗಳಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ. ಈ ಸಂಬಂಧ ರಿಸರ್ವ್ ಬ್ಯಾಂಕ್ ಒಂದು ಸಮಿತಿ ರಚಿಸಿದೆ. ಭಾರತೀಯ ಬ್ಯಾಂಕುಗಳ ಸಂಸ್ಥೆ (ಐಬಿಎ) ಸಿಇಓ ಅವರು ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಎಟಿಎಂ ವಹಿವಾಟು ದರದಲ್ಲಿ ಯಾವೆಲ್ಲಾ ಬದಲಾವಣೆ ಮಾಡಬೇಕೆಂದು ಈ ಸಮಿತಿಯ ಎರಡು ತಿಂಗಳಲ್ಲಿ ವರದಿ ತಯಾರಿಸಿ ಆರ್​ಬಿಐ ಗರ್ವನರ್ ಅವರಿಗೆ ಸಲ್ಲಿಸಲಿದೆ.

ಇದನ್ನೂ ಓದಿ: ಮೋದಿ ಸಂಪುಟದ ಎಂಟು ಸಮಿತಿಗಳಲ್ಲಿ ಅಮಿತ್ ಶಾಗೆ ಸ್ಥಾನ; ಪ್ರಮುಖ ಸಮಿತಿಯಿಂದ ರಾಜನಾಥ ಸಿಂಗ್​ಗೆ ಕೊಕ್​!ರೆಪೋ ದರ ಇಳಿಕೆಯಿಂದ ಜನಸಾಮಾನ್ಯರಿಗೆ ಅನುಕೂಲವೇ?

ರೆಪೋ ದರವನ್ನು ಆರ್​ಬಿಐ ಸತತ 3ನೇ ಬಾರಿ ಇಳಿಕೆ ಮಾಡಿದೆ. ಒಟ್ಟಾರೆಯಾಗಿ 75 ಮೂಲಾಂಕಗಳಷ್ಟು ಇಳಿಕೆಯಾಗಿದ್ದು, ಇದೀಗ ಇದು 5.75%ಗೆ ಇಳಿದಿದೆ. ವಾಣಿಜ್ಯ ಬ್ಯಾಂಕುಗಳಿಗೆ ಹಣದ ಕೊರತೆ ಎದುರಾದಾಗ ಅದನ್ನು ಒದಗಿಸಲು ಆರ್​ಬಿಐ ವಿಧಿಸುವ ದರವೇ ರೆಪೋ ದರವಾಗಿದೆ. ಅಂದರೆ, ವಾಣಿಜ್ಯ ಬ್ಯಾಂಕುಗಳು ಶೇ. 5.75 ಬಡ್ಡಿದರದಲ್ಲಿ ಆರ್​ಬಿಐನಿಂದ ಹಣ ಪಡೆಯಬಹುದಾಗಿದೆ. ರೆಪೋ ದರ ಕಡಿಮೆಯಾದಾಗ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನೂ ಇಳಿಸಬಹುದೆಂಬ ನಿರೀಕ್ಷೆ ಇರುತ್ತದೆ. ಆದರೆ, ಬ್ಯಾಂಕುಗಳು ತಮ್ಮ ಬಡ್ಡಿ ದರ ಇಳಿಸಲೇಬೇಕೆಂಬ ನಿಯಮವಿಲ್ಲ. ಕಳೆದ ಎರಡು ಬಾರಿ ರೆಪೋ ದರ ಇಳಿಕೆಯಾದರೂ ಗ್ರಾಹಕರಿಗೆ ಅದರ ಲಾಭ ವರ್ಗಾವಣೆ ಆಗಿದ್ದು ಕಡಿಮೆಯೇ. ಬ್ಯಾಂಕುಗಳು ದುಃಸ್ಥಿತಿಯಲ್ಲಿರುವುದು ಇದಕ್ಕೆ ಕಾರಣವಿರಬಹುದು. ಈ ಬಾರಿಯ 25 ಮೂಲಾಂಕಗಳಷ್ಟು ರಿಪೋ ದರ ಇಳಿಕೆಯ ಲಾಭವೂ ಗ್ರಾಹಕರಿಗೆ ವರ್ಗಾವಣೆಯಾಗುವುದು ಅನುಮಾನವೇ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸರಕಾರದ ಕ್ರಮದಿಂದ ಬ್ಯಾಂಕ್ ಗ್ರಾಹಕರಿಗೆ ಲಾಭವಾಗುವುದಕ್ಕಿಂತ ದುಸ್ಥಿತಿಯಲ್ಲಿರುವ ಬ್ಯಾಂಕುಗಳಿಗೆ ಒಂದಷ್ಟು ಚೇತರಿಕೆ ಸಿಗಬಹುದು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ