Har Ghar Tiranga: ಹಿಂದೂಗಳೇ ತ್ರಿವರ್ಣ ಧ್ವಜ ನಿಮ್ಮನ್ನು ಹಾಳು ಮಾಡಿದೆ, ಕೇಸರಿ ಧ್ವಜ ಹಾರಿಸಿ: ಯತಿ ನರಸಿಂಹಾನಂದ ವಿವಾದ

ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಯತಿ ನರಸಿಂಹಾನಂದ್ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಯತಿ ನರಸಿಂಹಾನಂದ ಗಿರಿ, 'ಈ ದೇಶದಲ್ಲಿ ತ್ರಿವರ್ಣ ಧ್ವಜದ ಹೆಸರಿನಲ್ಲಿ ದೊಡ್ಡ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನವನ್ನು ಭಾರತದ ಆಡಳಿತ ಪಕ್ಷ ಬಿಜೆಪಿ ನಡೆಸುತ್ತಿದೆ. ತ್ರಿವರ್ಣ ಧ್ವಜವನ್ನು ತಯಾರಿಸುವ ದೊಡ್ಡ ಆರ್ಡರ್ ಅನ್ನು ಬಂಗಾಳದ ಸಲಾವುದ್ದೀನ್ ಎಂಬ ಮುಸ್ಲಿಂ ಮಾಲೀಕತ್ವದ ಕಂಪನಿಗೆ ನೀಡಲಾಗಿದೆ ಎಂದಿದ್ದಾರೆ.

ಯತಿ ಸತ್ಯದೇವನಂದ ಸರಸ್ವತಿ

ಯತಿ ಸತ್ಯದೇವನಂದ ಸರಸ್ವತಿ

  • Share this:
ಗಾಜಿಯಾಬಾದ್‌(ಆ.12): ಯುಪಿಯ ಗಾಜಿಯಾಬಾದ್‌ನಲ್ಲಿರುವ (Ghaziabad) ದಾಸ್ನಾ ದೇವಿ ದೇವಸ್ಥಾನದ ಮಹಂತ್ ಮತ್ತು ಜುನಾ ಅಖಾರಾದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಸರಸ್ವತಿ (Yati Narsinghanand Saraswati) ಅವರು ಅಮೃತ ಸ್ವಾತಂತ್ರ್ಯೋತ್ಸವದ ಅಡಿಯಲ್ಲಿ ದೇಶದಲ್ಲಿ 'ಹರ್ ಘರ್ ತ್ರಿರಂಗಾ' (Har Ghar Tiranga) ಅಭಿಯಾನದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಬಿಡುಗಡೆ ಮಾಡಿರುವ ಯತಿ ನರಸಿಂಹಾನಂದ ಅವರು ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ವಿರೋಧಿಸಿದ್ದು, ತ್ರಿವರ್ಣ ಧ್ವಜವನ್ನು ಬಹಿಷ್ಕರಿಸಿ ಅದರ ಜಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸುವಂತೆ ಹಿಂದೂಗಳಿಗೆ ಮನವಿ ಮಾಡಿದ್ದಾರೆ. ಯತಿ ನರಸಿಂಹಾನಂದರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನೂ ಓದಿ:  Dharam Samsad Hate Speech- ವಾಸಿಂ ರಿಜ್ವಿ ಅಲಿಯಾಸ್ ತ್ಯಾಗಿ ವಿರುದ್ಧ ಪ್ರಕರಣ ದಾಖಲು

ಹಿಂದಿ ಪತ್ರಿಕೆ ದೈನಿಕ್ ಭಾಸ್ಕರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವೈರಲ್ ವೀಡಿಯೊದಲ್ಲಿ ಯತಿ ನರಸಿಂಹಾನಂದ ಗಿರಿ, 'ಈ ದೇಶದಲ್ಲಿ ತ್ರಿವರ್ಣ ಧ್ವಜದ ಹೆಸರಿನಲ್ಲಿ ಬಹಳ ದೊಡ್ಡ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನವನ್ನು ಭಾರತದ ಆಡಳಿತ ಪಕ್ಷ ಬಿಜೆಪಿ ನಡೆಸುತ್ತಿದೆ. ತ್ರಿವರ್ಣ ಧ್ವಜವನ್ನು ತಯಾರಿಸುವ ದೊಡ್ಡ ಆರ್ಡರ್ ಅನ್ನು ಬಂಗಾಳದ ಸಲಾವುದ್ದೀನ್ ಎಂಬ ಮುಸ್ಲಿಂ ಮಾಲೀಕತ್ವದ ಕಂಪನಿಗೆ ನೀಡಲಾಗಿದೆ ಎಂದಿದ್ದಾರೆ.

Let the flag of India fly on every house pvn
ತ್ರಿವರ್ಣ ಧ್ವಜ


ನಂತರ ಮಾತನಾಡಿದ ಅವರು, 'ಜಗತ್ತಿನ ದೊಡ್ಡ ಕಪಟಿಗಳು ಹಿಂದೂಗಳು. ಹಿಂದೂಗಳ ದಲ್ಲಾಳಿಗಳು ಮುಸ್ಲಿಮರ ಆರ್ಥಿಕ ಬಹಿಷ್ಕಾರದ ಬಗ್ಗೆ ಮಾತನಾಡುತ್ತಾರೆ, ಅವರು ಯಾವಾಗಲೂ ಹಿಂದೂಗಳು ಮುಸ್ಲಿಮರನ್ನು ಆರ್ಥಿಕವಾಗಿ ಬಹಿಷ್ಕರಿಸಬೇಕು ಎಂದು ಕೂಗುತ್ತಾರೆ. ಆದರೆ ಸರ್ಕಾರ ರಚನೆಯಾದ ನಂತರ ಮುಸಲ್ಮಾನರಿಗೆ ಸರ್ಕಾರದ ಗುತ್ತಿಗೆಯನ್ನೂ ಕೊಡುತ್ತಾರೆ. ಹಿಂದೂಗಳ ವಿರುದ್ಧ ಎಂತಹ ದೊಡ್ಡ ಷಡ್ಯಂತ್ರ. ಹಿಂದೂಗಳೇ ಈ ಅಭಿಯಾನವನ್ನು ಬಹಿಷ್ಕರಿಸಿ. ನೀವು ಬದುಕಲು ಬಯಸಿದರೆ ಮುಸ್ಲಿಮರಿಗೆ ಹಣ ನೀಡುವ ಈ ತ್ರಿವರ್ಣ ಅಭಿಯಾನವನ್ನು ಬಹಿಷ್ಕರಿಸಿ. ನಿಮ್ಮ ಮನೆಗೆ ತ್ರಿವರ್ಣ ಧ್ವಜವನ್ನು ಹಾಕಲು ಬಯಸಿದರೆ, ಹಳೆಯ ತ್ರಿವರ್ಣ ಧ್ವಜವನ್ನು ಹುಡುಕಿ ಸ್ಥಾಪಿಸಿ, ಆದರೆ ಸಲಾವುದ್ದೀನ್‌ಗೆ ಈ ರೀತಿ ಒಂದು ಪೈಸೆ ನೀಡಬೇಡಿ ಎಂದಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಯತಿ ನರಸಿಂಹಾನಂದ್ ಅವರು, 'ಈ ನಾಯಕರು ತಕ್ಕ ಪಾಠ ಕಲಿಯಬೇಕು. ಹಿಂದೂಗಳ ಹಣ ಯಾವುದೇ ಮುಸಲ್ಮಾನನಿಗೆ ಹೋದಾಗ ಅವನು ಜಿಹಾದ್‌ಗಾಗಿ ಝಕಾತ್ ನೀಡುತ್ತಾನೆ ಮತ್ತು ಅದೇ ಝಕಾತ್ ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಕೊಲ್ಲಲು ಉಪಯುಕ್ತವಾಗಿದೆ. ಈ ವಂಚಕರ ಮಾತಿಗೆ ಸಿಕ್ಕಿಹಾಕಿಕೊಳ್ಳಬೇಡಿ. ಅದಕ್ಕಾಗಿಯೇ ನಾನು ತ್ರಿವರ್ಣ ಧ್ವಜವನ್ನು ಬಹಿಷ್ಕರಿಸುವಂತೆ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ, ಏಕೆಂದರೆ ಈ ತ್ರಿವರ್ಣವು ನಿಮ್ಮನ್ನು ಹಾಳು ಮಾಡಿದೆ. ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಕೇಸರಿ ಬಾವುಟ ಸದಾ ಇರಲೇಬೇಕು ಎಂದಿದ್ದಾರೆ. ಇದಕ್ಕೂ ಮುನ್ನ ನರಸಿಂಹಾನಂದರು ಹಲವು ಸಂದರ್ಭಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ:  India ಇಸ್ಲಾಮಿಕ್​ ರಾಷ್ಟ್ರವಾಗುವುದನ್ನು ತಪ್ಪಿಸಲು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ; ಹಿಂದೂಗಳಿಗೆ ಯತಿ ಸತ್ಯದೇವ ಸರಸ್ವತಿ ಕರೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸುಮಾರು ಎರಡು ವಾರಗಳ ಹಿಂದಿನದು ಎಂದು ಹೇಳಲಾಗಿದೆ. ಆದರೆ, ಈ ವಿಡಿಯೋ ನರಸಿಂಹಾನಂದ ಗಿರಿ ಅವರದ್ದು ಎಂದು ವರದಿಯಲ್ಲಿ ದೃಢಪಟ್ಟಿದೆ. ವಾಸ್ತವವಾಗಿ ಕೇಂದ್ರದ ಮೋದಿ ಸರ್ಕಾರ ತ್ರಿವರ್ಣ ಧ್ವಜ ಅಭಿಯಾನ ಯಶಸ್ವಿಗೊಳಿಸಲು ಸರ್ವ ಪ್ರಯತ್ನ ನಡೆಸುತ್ತಿರುವ ಹೊತ್ತಿನಲ್ಲಿ ನರಸಿಂಹಾನಂದ ಗಿರಿ ಈ ಹೇಳಿಕೆ ನೀಡಿದ್ದಾರೆ. ಅಮೃತ ಮಹೋತ್ಸವದ (ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದಂದು) ಆಗಸ್ಟ್ 13 ರಿಂದ 15 ರವರೆಗೆ ದೇಶದ ಎಲ್ಲಾ ನಾಗರಿಕರು ತಮ್ಮ ಮನೆ, ಸಂಸ್ಥೆಗಳು, ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ ಎಂಬುವುದು ಗಮನಿಸಬೇಕಾದ ವಿಚಾರ.
Published by:Precilla Olivia Dias
First published: