Sheikh Hasina: ದೆಹಲಿಯಲ್ಲಿ ಗುರುತು ಮರೆಮಾಚಿಕೊಂಡು ರಹಸ್ಯವಾಗಿ ಬದುಕಿದ್ದ ಬಾಂಗ್ಲಾ ಪ್ರಧಾನಿ!

India-Bangladesh Relationship: ಸಮಸ್ಯೆಯಿದ್ದರೆ, ಅದು ಚೀನಾ ಮತ್ತು ಭಾರತದ ನಡುವೆ. ನಾನು ಈ ವಿಷಯದ ಕುರಿತು ಮೂಗು ಹಾಕಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶೇಖ್ ಹಸೀನಾ

ಶೇಖ್ ಹಸೀನಾ

  • Share this:
ದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Bangladesh PM Sheikh Hasina) ಭಾರತವನ್ನು 'ವಿಶ್ವಾಸಾರ್ಹ ಸ್ನೇಹಿತ' ಎಂದು ವ್ಯಾಖ್ಯಾನಿಸಿದ್ದಾರೆ.  ಅಲ್ಲದೇ ಭಾರತ ಮತ್ತು ಬಾಂಗ್ಲಾದೇಶದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಉಭಯ ದೇಶಗಳ (India-Bangladesh Relationship) ನಡುವಿನ ದೀರ್ಘಕಾಲದ ನೀರು ಹಂಚಿಕೆ ವಿವಾದವನ್ನು ಪರಿಹರಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಜೊತೆಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್​ರ (Sheikh Mujibur Rehman) ಹತ್ಯೆ ಮಾಡಿದವರಿಂದ ತಪ್ಪಿಸಿಕೊಳ್ಳಲು ತಮ್ಮ ಮಕ್ಕಳೊಂದಿಗೆ ದೆಹಲಿಯಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದೆ ಎಂದು ಭಾನುವಾರ ಬಹಿರಂಗಪಡಿಸಿದ್ದಾರೆ.

ದುಷ್ಕರ್ಮಿಗಳು ತಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಸಾಯಿಸಲು ಹುಡುಕುತ್ತಿದ್ದಾಗ ಭಾರತ ಸರ್ಕಾರವು ತನಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಸಹ ಅವರು ವಿವರಿಸಿದ್ದಾರೆ. ಸುದ್ದಿಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಬಾಂಗ್ಲಾದೇಶದ ಇತಿಹಾಸದ ಕರಾಳ ಅಧ್ಯಾಯಗಳನ್ನು ನೆನಪಿಸಿಕೊಳ್ಳುತ್ತಾ ಭಾರತ ತಮಗೆ ಸಹಾಯ ಮಾಡಿದ ಬಗೆಯನ್ನು ಅವರು ವಿವರಿಸಿದ್ದಾರೆ.

ಆ ಭೇಟಿಯೇ ಹೆತ್ತವರ ಜೊತೆಗಿನ ಕೊನೆ ಭೇಟಿ
1975 ರಲ್ಲಿ ಜರ್ಮನಿಯಲ್ಲಿ ಪರಮಾಣು ವಿಜ್ಞಾನಿಯಾಗಿದ್ದ ಪತಿಯನ್ನು ಸೇರಲು ಬಾಂಗ್ಲಾದೇಶವನ್ನು ತೊರೆಯಬೇಕಾಯಿತು.  ಹಸೀನಾ ಮತ್ತು ಆಕೆಯ ಸಹೋದರಿಯನ್ನು ನೋಡಲು ಆಕೆಯ ಕುಟುಂಬ ಸದಸ್ಯರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಕೆಲವು ದಿನಗಳ ನಂತರ ನನ್ನ ತಂದೆಯನ್ನೂ ಸೇರಿ ಕುಟುಂಬ ಸದಸ್ಯರನ್ನು ಕೊಂದ ವಿಷಯ ನನಗೆ ತಿಳಿಯಿತು. ಆ ಸಂದರ್ಭವೇ ಹೆತ್ತವರೊಂದಿಗೆ ತಮ್ಮ ಕೊನೆಯ ಭೇಟಿಯಾಗಿತ್ತು ಎಂದು ಅವರು ಭಾವಪೂರ್ಣವಾಗಿ ವಿವರಿಸಿದ್ದಾರೆ.

ಗುರುತು ಮರೆಮಾಚಿಕೊಂಡು ಬದುಕಿದ್ದೆ
ತನಗೆ ಸಹಾಯ ಮಾಡಿದ ಮೊದಲ ದೇಶಗಳಲ್ಲಿ ಭಾರತವೂ ಒಂದು ಎಂದು ಹೇಳಿದ ಹಸೀನಾ, ಇಂದಿರಾ ಗಾಂಧಿ ಅವರು ಅಂದು ನಮಗೆ ಭದ್ರತೆ ಮತ್ತು ಆಶ್ರಯವನ್ನು ನೀಡುವುದಾಗಿ ತಿಳಿಸಿದರು. ನಾವು ದೆಹಲಿಗೆ ಬಂದೆವು. ಆದರೆ ಭದ್ರತಾ ಕಾರಣಗಳಿಂದಾಗಿ ಗುರುತನ್ನು ಮರೆಮಾಚಿಕೊಂಡು ಬೇರೆ ಹೆಸರಿಟ್ಟುಕೊಂಡು ದೆಹಲಿಯಲ್ಲಿ ಬದುಕಬೇಕಾಯಿತು ಎಂದು ಅವರು ಅಂದಿನ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ.

ಬಾಂಗ್ಲಾದೇಶದಲ್ಲಿ ಆ ಕರಾಳ ದಿನಗಳು
ಬಂಗಬಂಧು ಎಂದೇ ಖ್ಯಾತಿ ಹೊಂದಿದ್ದ ಶೇಖ್ ಮುಜಿಬುರ್ ರೆಹಮಾನ್ ಮತ್ತು ಅವರ ಕುಟುಂಬ ಸದಸ್ಯರು ಆಗಸ್ಟ್ 15, 1975 ರಂದು ಹಿರಿಯ ಸೇನಾ ಅಧಿಕಾರಿಗಳಿಂದ ಕೊಲ್ಲಲ್ಪಟ್ಟಿದ್ದರು. ಇದರ ಪರಿಣಾಮವಾಗಿ ಬಾಂಗ್ಲಾದೇಶದಲ್ಲಿ ರಾಜಕೀಯ ಅವ್ಯವಸ್ಥೆ ಮತ್ತು ಮಿಲಿಟರಿ ಆಡಳಿತ ಆರಂಭಗೊಂಡಿತ್ತು.

ಭಾರತ ಚೀನಾ ನಡುವೆ ನಾವು ಮೂಗು ತೂರಿಸಲ್ಲ
ಭಾರತ ಮತ್ತು ಚೀನಾದೊಂದಿಗಿನ ಚೀನಾದ ಸಂಬಂಧದ ಕುರಿತು ಪ್ರಶ್ನೆಯನ್ನು ಉದ್ದೇಶಿಸಿ ಮಾತನಾಡಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತವನ್ನು ಬಾಂಗ್ಲಾದೇಶದ ವಿದೇಶಾಂಗ ನೀತಿಯು "ಎಲ್ಲರಿಗೂ ಸ್ನೇಹ, ದುರುದ್ದೇಶ ರಹಿತ" ಎಂದು ಹೇಳಿದರು.  ಅಲ್ಲದೇ ಸಮಸ್ಯೆಯಿದ್ದರೆ, ಅದು ಚೀನಾ ಮತ್ತು ಭಾರತದ ನಡುವೆ. ನಾನು ಈ ವಿಷಯದ ಕುರಿತು ಮೂಗು ಹಾಕಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭಾರತಕ್ಕೆ ಭೇಟಿ ನೀಡಲಿರುವ ಶೇಖ್ ಹಸೀನಾ
ಬಾಂಗ್ಲಾದೇಶದ ಪ್ರಧಾನಿ ಸೆಪ್ಟೆಂಬರ್ 5 ಮತ್ತು 8 ರ ನಡುವೆ ಭಾರತಕ್ಕೆ ಭೇಟಿ ನೀಡಲಿದ್ದು, ಈ ಸಮಯದಲ್ಲಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿಯಾಗಲಿದ್ದಾರೆ.  ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: Elephant Retirement: ಮನುಷ್ಯರಂತೆ ಆನೆಗಳಿಗೂ ನಿವೃತ್ತಿ; ವಿದಾಯ ಸಭೆಯ ಭಾವನಾತ್ಮಕ ವಿಡಿಯೋ ವೈರಲ್

ಭಾರತ ಸಹಕರಿಸಬೇಕಿದೆ
ನಾವು ಭಾರತ ದೇಶದ ಕೆಳಭಾಗದಲ್ಲಿದ್ದೇವೆ.  ನಮಗೆ ಭಾರತದಿಂದ ನೀರು ಬರುತ್ತಿದೆ. ಹಾಗಾಗಿ ಭಾರತ ಇನ್ನಷ್ಟು ಉದಾರತೆ ತೋರಬೇಕು. ವಿಶೇಷವಾಗಿ ತೀಸ್ತಾ ನದಿಯ ನೀರಿನ ಬಗ್ಗೆ ಭಾರತ ನಮಗೆ ಉದಾರತನ ತೋರಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ತೀಸ್ತಾ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಉತ್ಸುಕರಾಗಿದ್ದಾರೆ ಎಂದು ನಮಗೆ ಅರಿವಿದೆ. ಆದರೆ ನಮ್ಮಲ್ಲಿ 54 ಇತರ ನದಿಗಳಿವೆ. ಈ ನದಿಗಳ ನೀರಿನ ಕುರಿತು ದೀರ್ಘಕಾಲದ ಸಮಸ್ಯೆಯಾಗಿದ್ದು, ಅದನ್ನು ಪರಿಹರಿಸಬೇಕು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮನವಿ ಮಾಡಿದ್ದಾರೆ.

ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯಲಿ
ನಾನು ನನ್ನ ದೇಶದ ಅಭಿವೃದ್ಧಿಯನ್ನು ಬಯಸುತ್ತೇನೆ. ಭಾರತವು ನಮ್ಮ ನೆರೆಹೊರೆಯವರಾಗಿರುವುದರಿಂದ ನಾವು ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ನಾವು ಅನೇಕ ದ್ವಿಪಕ್ಷೀಯ ಸಮಸ್ಯೆಗಳನ್ನು ಹೊಂದಿದ್ದೇವೆ.  ಆದರೆ ಆ ಎಲ್ಲ ಸಮಸ್ಯೆಗಳಿಗೂ ನಾವು ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ಭಾರತದ ಸಂಬಂಧದ ಕುರಿತು ಧನಾತ್ಮಕ ಮಾತನಾಡಿದರು.   

ಇದನ್ನೂ ಓದಿ: GDP Growth: ಜಿಡಿಪಿಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಭಾರತ! ಡ್ರ್ಯಾಗನ್ ರಾಷ್ಟ್ರಕ್ಕೆ ಶುರುವಾಯ್ತು ಭಯ

ನನ್ನ ಉದ್ದೇಶವೆಂದರೆ ನಮ್ಮ ಬಾಂಗ್ಲಾದೇಶದ ಜನರ ಅಭಿವೃದ್ಧಿಯನ್ನು ಕೇಂದ್ರೀಕರಿಸುವುದು. ಅವರಿಗೆ ಉತ್ತಮ ಜೀವನ ನೀಡುವುದು ಹೇಗೆ? ಅವರ ಜೀವನವನ್ನು ಹೇಗೆ ಸುಧಾರಿಸುವುದು? ಎಂಬ ವಿಷಯಗಳು. ನಮಗೆ ಯಾವಾಗಲೂ ಇರುವುದು ಒಂದೇ ಶತ್ರು ಎಂದು ನಾನು ಹೇಳುತ್ತೇನೆ. ಅದು ಬಡತನ. ಆದ್ದರಿಂದ ನಾವು ಒಟ್ಟಿಗೆ ಕೆಲಸ ಮಾಡೋಣ ಎಂದು ಅವರು ಹೇಳಿದರು.
Published by:guruganesh bhat
First published: