ತೀವ್ರ ಹಿನ್ನಡೆ ಕಂಡ ದೇಶದ ಅರ್ಥಿಕತೆ; ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾದೇಶ

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಾರ ಪ್ರಸ್ತುತ ಸ್ಥಿತಿಯಲ್ಲಿ 2020 ರ ಅಂತ್ಯದ ವೇಳೆಗೆ ಬಾಂಗ್ಲಾದೇಶದ ತಲಾ ಜಿಡಿಪಿಯು ಶೇ.4 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು ಸಾಧ್ಯವಾದರೆ ಬಡ ರಾಷ್ಟ್ರ ಎಂದು ಬಣ್ಣಿಸಲ್ಪಡುವ ಬಾಂಗ್ಲಾದೇಶದ ಜಿಡಿಪಿ ಭಾರತವನ್ನು ಹಿಂದಿಕ್ಕಲಿದೆ ಎನ್ನಲಾಗುತ್ತಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ನವ ದೆಹಲಿ: ಅಸಮರ್ಪಕ ಅರ್ಥಿಕ ನೀತಿ ಮತ್ತು ಕೊರೋನಾ ಬಿಕ್ಕಟ್ಟಿನಿಂದಾಗಿ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಒಂದು ಕಾಲದಲ್ಲಿ ಏಷ್ಯಾ ಮತ್ತು ವಿಶ್ವದ ಬಲಿಷ್ಠ ಆರ್ಥಿಕತೆ ಎಂದು ಗುರುತಿಸಿಕೊಂಡಿದ್ದ ಭಾರತದ ಪ್ರಸ್ತುತ ಸ್ಥಿತಿ ಇದೀಗ ಚಿಂತಾಜನಕವಾಗಿದೆ. ಜಿಡಿಪಿ ಮೌಲ್ಯ ಋಣಾತ್ಮಕವಾಗಿ ಕುಸಿಯುತ್ತಿದೆ. ಇದು ಸಾಮಾನ್ಯವಾಗಿ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದಲ್ಲದೆ, ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸಣ್ಣ-ಮಧ್ಯಮ ಕೈಗಾರಿಕೆಗಳ ಅವಸಾನ ಸರ್ಕಾರದ ಪಾಲಿಗೆ ಸವಾಲಿನ ವಿಚಾರವಾಗಿದೆ. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಹೊಸದೊಂದು ಅಂಕಿಅಂಶ ಮತ್ತು ವಿಶ್ಲೇಷಣೆಯನ್ನು ಮುಂದಿಟ್ಟಿದ್ದು, "ಈ ವರ್ಷಾಂತ್ಯದಲ್ಲಿ ಭಾರತದ ತಲಾ ಆದಾಯ ಬಾಂಗ್ಲಾದೇಶಕ್ಕಿಂತ ಕೆಳಗಿಳಿಯಲಿದೆ. ಈ ವರ್ಷ ಶೇ. 10.3 ರಷ್ಟು ಭಾರಿ ಪ್ರಮಾಣದಲ್ಲಿ ತಲಾ ಜಿಡಿಪಿ ಕುಸಿಯುವ ನಿರೀಕ್ಷೆಯಿದೆ ಇದ್ದು, ತಲಾ ಆದಾಯ ಜಿಡಿಪಿಯಲ್ಲಿ ಬಾಂಗ್ಲಾದೇಶವು ಭಾರತವನ್ನು ಹಿಂದಿಕ್ಕಲಿದೆ" ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.

  ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಾರ ಪ್ರಸ್ತುತ ಸ್ಥಿತಿಯಲ್ಲಿ 2020 ರ ಅಂತ್ಯದ ವೇಳೆಗೆ ಬಾಂಗ್ಲಾದೇಶದ ತಲಾ ಜಿಡಿಪಿಯು ಶೇ.4 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು ಸಾಧ್ಯವಾದರೆ ಬಡ ರಾಷ್ಟ್ರ ಎಂದು ಬಣ್ಣಿಸಲ್ಪಡುವ ಬಾಂಗ್ಲಾದೇಶದ ಜಿಡಿಪಿ ಭಾರತವನ್ನು ಹಿಂದಿಕ್ಕಲಿದೆ ಎನ್ನಲಾಗುತ್ತಿದೆ.

  ಈ ಅಂದಾಜಿನ ಪ್ರಕಾರ, ಭಾರತವು ದಕ್ಷಿಣ ಏಷ್ಯಾದ ಮೂರನೇ ಬಡ ರಾಷ್ಟ್ರವಾಗಲಿದೆ. ಕೊರೋನಾ ಬಿಕ್ಕಟ್ಟಿನ ಕಾಲದಲ್ಲಿ ಪಾಕಿಸ್ತಾನ ಮತ್ತು ನೇಪಾಳದಲ್ಲಿ ಮಾತ್ರ ತಲಾ ಜಿಡಿಪಿ ಕುಸಿತ ಕಂಡಿದೆ. ಆದರೆ ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ದೇಶಗಳ ಜಿಡಿಪಿ ಅಭಿವೃದ್ಧಿಯ ಹಾದಿಯಲ್ಲಿದ್ದು ಈ ದೇಶಗಳು ಭಾರತವನ್ನು ಹಿಂದಿಕ್ಕಲಿವೆ ಎಂದು ಅಂದಾಜಿಸಲಾಗಿದೆ.

  ಡಬ್ಲ್ಯುಇಒ ದತ್ತಾಂಶದ ಪ್ರಕಾರ, ಕೊರೋನಾ ವೈರಸ್‌ನಿಂದಾಗಿ ಶ್ರೀಲಂಕಾದ ತಲಾ ಆದಾಯ ಶೇ.4 ರಷ್ಟು ಕುಸಿದಿದೆ. ಆದರೆ, ಏಷ್ಯಾ ಖಂಡದಲ್ಲೇ ಭಾರತದಷ್ಟು ಯಾವ ದೇಶದ ಆರ್ಥಿಕತೆಯೂ ಹಿನ್ನಡೆ ಅನುಭವಿಸಿಲ್ಲ. ಶೇ.-23. ರಷ್ಟು ಭಾರತದ ಜಿಡಿಪಿ ಋಣಾತ್ಮಕವಾಗಿ ಕುಸಿದಿದೆ. ಹೀಗಾಗಿ ಶ್ರೀಲಂಕಾ ತಲಾ ಆದಾಯ ಮತ್ತು ಜಿಡಿಪಿ ಕುಸಿದಿದ್ದರೂ ಸಹ ಭಾರತವನ್ನು ಈ ದೇಶ ಹಿಂದಿಕ್ಕಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ನೇಪಾಳ ಮತ್ತು ಭೂತಾನ್ ಈ ವರ್ಷ ತಮ್ಮ ಆರ್ಥಿಕತೆಯನ್ನು ಬೆಳೆಸಲು ತುಲನಾತ್ಮಕವಾಗಿ ಹೆಜ್ಜೆ ಇಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

  ಇದನ್ನೂ ಓದಿ : ಕೇರಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; UDF ತೊರೆದು ಕಮ್ಯುನಿಸ್ಟ್​ ಒಕ್ಕೂಟ ಸೇರಿದ ಕಾಂಗ್ರೆಸ್ (ಎಂ) ಪಕ್ಷ

  ಮುಂದಿನ ವರ್ಷ ಭಾರತದಲ್ಲಿ ತೀಕ್ಷ್ಣವಾದ ಆರ್ಥಿಕ ಚೇತರಿಕೆ ಕಾಣುವ ಸಾಧ್ಯತೆಯಿದೆ ಎಂದು ಐಎಂಎಫ್‌ ಹೇಳಿದೆ. ಒಂದು ವೇಳೆ 2021ರಲ್ಲಿ ಆರ್ಥಿಕ ಚೇತರಿಕೆ ಕಂಡಲ್ಲಿ ಬಾಂಗ್ಲಾದೇಶಕ್ಕಿಂತ ಭಾರತ ಕೊಂಚ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಆದರೆ, ಬಾಂಗ್ಲಾದೇಶವೂ ಮತ್ತಷ್ಟು ಚೇತರಿಕೆ ಕಂಡಲ್ಲಿ ಅದೂ ಕೂಡ ಅಸಾಧ್ಯವೇ ಆಗಿದೆ ಎಂದು ವಿಶ್ಲೇಷಿಸಲಾಗಿದೆ.  ಐಎಮ್‌‌ಎಫ್‌ ವರದಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, “ಬಿಜೆಪಿಯ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ 6 ವರ್ಷಗಳ ಘನ ಸಾಧನೆ ಇದು . ಭಾರತವನ್ನು ಹಿಂದಿಕ್ಕಲು ಬಾಂಗ್ಲಾದೇಶ ಸಜ್ಜಾಗಿದೆ” ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
  Published by:MAshok Kumar
  First published: