ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ; 2 ದಿನಗಳ ಭಾರತದ ಪ್ರವಾಸ ಮೊಟಕುಗೊಳಿಸಿದ ಬಾಂಗ್ಲಾ ವಿದೇಶಾಂಗ ಸಚಿವ

ಲೋಕಸಭೆ ಮತ್ತು ರಾಜ್ಯಸಭೆ ಎರಡು ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಶೀಘ್ರದಲ್ಲಿ ಕಾನೂನಾಗಿ ಜಾರಿಗೊಳ್ಳಲಿದೆ. ಮಸೂದೆಗೆ  ವಿರೋಧ ವ್ಯಕ್ತಪಡಿಸಿ ದೇಶದ ಹಲವೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

HR Ramesh | news18-kannada
Updated:December 12, 2019, 3:24 PM IST
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ; 2 ದಿನಗಳ ಭಾರತದ ಪ್ರವಾಸ ಮೊಟಕುಗೊಳಿಸಿದ ಬಾಂಗ್ಲಾ ವಿದೇಶಾಂಗ ಸಚಿವ
ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್
  • Share this:
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿಚಾರವಾಗಿ ಭಾರತವನ್ನು ಟೀಕೆ ಮಾಡಿದ್ದ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ತಮ್ಮ ಎರಡು ದಿನಗಳ ಭಾರತ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆ ಎರಡು ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಶೀಘ್ರದಲ್ಲಿ ಕಾನೂನಾಗಿ ಜಾರಿಗೊಳ್ಳಲಿದೆ. ಮಸೂದೆಗೆ  ವಿರೋಧ ವ್ಯಕ್ತಪಡಿಸಿ ದೇಶದ ಹಲವೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ 2015ಕ್ಕಿಂತ ಹಿಂದೆಯೇ ಭಾರತಕ್ಕೆ ಬಂದಿರುವವ ಮುಸ್ಲಿಂಯೇತರರಿಗೆ ನಾಗರಿತ್ವ ನೀಡುವ ಪ್ರಸ್ತಾವನೆಯನ್ನು ಪೌರತ್ವ ತಿದ್ದುಪಡಿ ಮಸೂದೆ ಹೊಂದಿದೆ. ಸೋಮವಾರ ಮಸೂದೆ ಲೋಕಸಭೆಯಲ್ಲಿ 334 ಮತಗಳೊಂದಿಗೆ ಅಂಗೀಕಾರ ಪಡೆದುಕೊಂಡಿತ್ತು. ರಾಜ್ಯಸಭೆಯಲ್ಲಿ ಮಸೂದೆ ಪರವಾಗಿ 125 ಸದಸ್ಯರು ಮತ ಹಾಕಿದ್ದರು.

ಇದನ್ನು ಓದಿ: ರಾಜ್ಯಸಭೆಯಲ್ಲೂ ಅಂಗೀಕಾರವಾದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ, ಶೀಘ್ರದಲ್ಲೇ ಕಾನೂನು
First published:December 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ