ಏಷ್ಯಾ ಕಪ್​​ನಲ್ಲಿ ಸೋಲು: ಕೊಹ್ಲಿ ವೆಬ್​​ಸೈಟ್ ಹ್ಯಾಕ್ ಮಾಡಿ ಎಚ್ಚರಿಕೆ ನೀಡಿದ ಬಾಂಗ್ಲಾ ಅಭಿಮಾನಿಗಳು

news18
Updated:October 3, 2018, 3:31 PM IST
ಏಷ್ಯಾ ಕಪ್​​ನಲ್ಲಿ ಸೋಲು: ಕೊಹ್ಲಿ ವೆಬ್​​ಸೈಟ್ ಹ್ಯಾಕ್ ಮಾಡಿ ಎಚ್ಚರಿಕೆ ನೀಡಿದ ಬಾಂಗ್ಲಾ ಅಭಿಮಾನಿಗಳು
  • Advertorial
  • Last Updated: October 3, 2018, 3:31 PM IST
  • Share this:
ನ್ಯೂಸ್ 18 ಕನ್ನಡ

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಏಷ್ಯಾ ಕಪ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿ 7ನೇ ಬಾರಿ ಏಷ್ಯಾ ಕಪ್​​ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆದರೆ ಫೈನಲ್ ಪಂದ್ಯದಲ್ಲಿ ನಮ್ಮ ದೇಶಕ್ಕೆ ಮೋಸವಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ವೆಬ್​ ಸೈಟ್​​ ಹ್ಯಾಕ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೈನಲ್ ಕಾದಾಟದಲ್ಲಿ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್ ಅವರು ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಆದರೆ 121 ರನ್ ಗಳಿಸಿದ್ದಾಗ ಟೀಂ ಇಂಡಿಯಾ ಕೀಪರ್ ಎಂ. ಎಸ್. ಧೋನಿಯಿಂದ ಲಿಟನ್ ಅವರು ಸ್ಟಂಪ್​​ಗೆ ಬಲಿಯಾಗಿ ಪೆವಿಲಿನ್ ಸೇರಿಕೊಳ್ಳಬೇಕಾಯಿತು. ಈ ತೀರ್ಪುನ್ನು ಮೂರನೇ ಅಂಪೈರ್​​ ಕೂಡ ಧೃಡೀಕರಿಸಿತ್ತು. ಆದರೆ ಬಾಂಗ್ಲಾ ಅಭಿಮಾನಿಗಳು ಇದು ತಪ್ಪು ನಿರ್ಣಯ ಎಂದು ಹೇಳಿ ಸೈಬರ್ ಸೆಕ್ಯುರಿಟಿ ಇಂಟೆಲಿಜೆನ್ಸ್​ (ಸಿಎಸ್​​​​ಐ) ಎಂಬ ಬಾಂಗ್ಲಾದೇಶದ ಹ್ಯಾಕರ್​​ಗಳ ತಂಡ ಥರ್ಡ್​​ ಅಂಪೈರ್ ನಿರ್ಣಯದ ನಾಲ್ಕು ಚಿತ್ರಗಳನ್ನು ಒಟ್ಟುಗೂಡಿಸಿ ವಿರಾಟ್ ಕೊಹ್ಲಿ ಅವರ ವೆಬ್ ಸೈಟ್​​​ನಲ್ಲಿ ಪ್ರಕಟಿಸಿದೆ.

courtesy: twitter


ಜೊತೆಗೆ ಡಿಯರ್ ಐಸಿಸಿ, 'ಇದು ಹೇಗೆ ಔಟ್ ಎಂದು ತಿಳಿಸಿ. ನೀವು ಕ್ಷಮೆ ಕೇಳಬೇಕು. ಅಂಪೈರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿ ಬಾರಿ ವೆಬ್​ಸೈಟ್ ಸರಿಪಡಿಸಿದಾಗ ಹ್ಯಾಕ್ ಮಾಡುತ್ತೇವೆ' ಎಂದು ಬರೆದುಕೊಂಡಿದ್ದಾರೆ.

courtesy: twitter


ಇನ್ನು 'ಭಾರತೀಯ ಸಹೋದರಿ ಮತ್ತು ಸಹೋದರರೆ, ಈ ಬಗ್ಗೆ ದಯವಿಟ್ಟು ಯೋಚಿಸಿ, ನಿಮ್ಮ ತಂಡಕ್ಕೆ ಇದೇ ರೀತಿ ಅನ್ಯಾಯವಾಗಿದ್ದರೆ ನಿಮಗೆ ಹೇಗೆ ಅನಿಸುತ್ತಿತ್ತು?. ಪ್ರತಿಯೊಂದು ರಾಷ್ಟ್ರೀಯ ತಂಡವನ್ನು ಸಮಾನ ರೀತಿಯಲ್ಲಿ ಕಾಣಬೇಕು. ಬಾಂಗ್ಲಾದೇಶ ಅನ್ಯಾಯಕ್ಕೆ ಒಳಗಾಗಿದೆ. ಅದಕ್ಕಾಗಿ ವಿರಾಟ್ ಕೊಹ್ಲಿ ಅಧಿಕೃತ ವೆಬ್​ಸೈಟ್​​​ನ್ನು ಹ್ಯಾಕ್ ಮಾಡಿದ್ದೇವೆ. ಮುಂದೆಯು ಇದೇರೀತಿ ಸಾಕಷ್ಟು ನಿದರ್ಶನಗಳು ನಡೆಯಲಿವೆ' ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
courtesy: twitter
First published:October 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ