Nisarga Cyclone - ನಿಸರ್ಗ ಸೈಕ್ಲೋನ್​ಗೆ ಹೆಸರಿಟ್ಟವರಾರು? ಚಂಡಮಾರುತಗಳಿಗೆ ಹೆಸರಿಡುವ ವಿಶೇಷ ವ್ಯವಸ್ಥೆಯ ಬಗ್ಗೆ ತಿಳಿದಿರಿ

ಭಾರತೀಯ ಹವಾಮಾನ ಇಲಾಖೆ ತಾನೊಂದೇ ಎಲ್ಲಾ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆಂದೇ ಒಂದು ಸಮಿತಿ ರಚನೆಯಾಗಿದೆ. ಈ ಸಮಿತಿಯಲ್ಲಿ ಭಾರತ ಸೇರಿ ಈ ಮಹಾಸಾಗರ ವ್ಯಾಪ್ತಿಯ 13 ದೇಶಗಳು ಇವೆ.

news18-kannada
Updated:June 3, 2020, 1:45 PM IST
Nisarga Cyclone - ನಿಸರ್ಗ ಸೈಕ್ಲೋನ್​ಗೆ ಹೆಸರಿಟ್ಟವರಾರು? ಚಂಡಮಾರುತಗಳಿಗೆ ಹೆಸರಿಡುವ ವಿಶೇಷ ವ್ಯವಸ್ಥೆಯ ಬಗ್ಗೆ ತಿಳಿದಿರಿ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಅಂಪನ್ ಚಂಡಮಾರುತದ ರಕ್ಕಸ ನರ್ತನ ಕಂಡ ಕೆಲವೇ ದಿನಗಳಲ್ಲೇ ಅರಬ್ಬಿ ಸಮುದ್ರದಲ್ಲಿ ನಿಸರ್ಗ ಚಂಡಮಾರುತ ಅಬ್ಬರಿಸುತ್ತಿದೆ. ಹಿಂದೆಲ್ಲಾ ಫನಿ, ಅರ್ನಬ್, ಆಗ್ ಇತ್ಯಾದಿ ಚಂಡಮಾರುತಗಳನ್ನ ಕಂಡಿದ್ದೇವೆ. ಒಮ್ಮೆ ಬಂದ ಚಂಡಮಾರುತ ಮತ್ತೆ ಮರುಕಳುಸುವುದಿಲ್ಲ. ಉದಾಹರಣೆಗೆ, ಕಳೆದ ವರ್ಷ ಬಂದ ಫನಿ ಚಂಡಮಾರುತ ಈ ವರ್ಷ ಬರುವುದಿಲ್ಲ. ಅಂದರೆ ಬೇರೆಯ ಹೆಸರಿನಲ್ಲಿ ಈ ಚಂಡಮಾರುತ ಬರುತ್ತದೆ. ಅಂದಹಾಗೆ, ಇವತ್ತು ಮುಂಬೈಗೆ ದಾಂಗುಡಿ ಇಟ್ಟಿರುವ ನಿಸರ್ಗ ಚಂಡಮಾರುತಕ್ಕೆ ಆ ಹೆಸರು ಇಟ್ಟಿದ್ದು ಬಾಂಗ್ಲಾದೇಶ. ಬಂಗಾಳ ಕೊಲ್ಲಿಗೆ ಅಪ್ಪಳಿಸಿದ ಚಂಡಮಾರುತಕ್ಕೆ ಅಂಪನ್ ಎಂದು ನಾಮಕರಣ ಮಾಡಿದ್ದು ಥಾಯ್ಲೆಂಡ್ ದೇಶ.

ಚಂಡಮಾರುತಕ್ಕೆ ಯಾರು, ಯಾಕೆ ಮತ್ತು ಹೇಗೆ ಹೆಸರಿಡುತ್ತಾರೆ ಎಂಬ ಕುತೂಹಲ ನಿಮಗಿರಬಹುದು. ಚಂಡಮಾರುತಕ್ಕೆ ಹೆಸರಿಡಲು ಒಂದು ವಿಶೇಷ ವ್ಯವಸ್ಥೆಯೇ ಇದೆ. ವಿಶ್ವಾದ್ಯಂತ ಆರು ಪ್ರಾದೇಶಿಕ ಪರಿಣಿತ ಹವಾಮಾನ ಕೇಂದ್ರ (ಆರ್​ಎಸ್​ಎಂಸಿ) ಮತ್ತು 5 ಉಷ್ಣವಲಯ ಚಂಡಮಾರುತ ಕೇಂದ್ರ (ಟಿಸಿಡಬ್ಲ್ಯೂಸಿ)ಗಳಿಗೆ ವಲಯವಾರು ಚಂಡಮಾರುತಗಳನ್ನ ಗುರುತಿಸಿ ಹೆಸರಿಡುವ ಅಧಿಕಾರ ಹೊಂದಿವೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೂಡ ಈ ಕೇಂದ್ರಗಳಲ್ಲೊಂದಾಗಿದೆ. ಹಿಂದೂ ಮಹಾಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಹೆಸರಿಡುವುದು ಭಾರತೀಯ ಹವಾಮಾನ ಇಲಾಖೆಯೇ.

ಇದನ್ನೂ ಓದಿ: ಆಹಾರ ಹುಡುಕಿ ಬಂದ ಗರ್ಭಿಣಿ ಆನೆಯ ಬಾಯಲ್ಲಿ ಪಟಾಕಿಯಿಟ್ಟು ಕೊಂದ ಜನ!

ಆದರೆ, ಭಾರತೀಯ ಹವಾಮಾನ ಇಲಾಖೆ ತಾನೊಂದೇ ಎಲ್ಲಾ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆಂದೇ ಒಂದು ಸಮಿತಿ ರಚನೆಯಾಗಿದೆ. ಈ ಸಮಿತಿಯಲ್ಲಿ ಭಾರತ ಸೇರಿ ಈ ಮಹಾಸಾಗರ ವ್ಯಾಪ್ತಿಯ 13 ದೇಶಗಳು ಇವೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಮಾಲ್ಡೀವ್ಸ್, ಮಯನ್ಮಾರ್, ಥಾಯ್ಲೆಂಡ್, ಓಮನ್, ಇರಾನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯೆಮೆನ್ ದೇಶಗಳು ಈ ಸಮಿತಿಯಲ್ಲಿವೆ.

ಮುಂಬರುವ ಚಂಡಮಾರುತಗಳನ್ನ ಈ ಸಮಿತಿ ಮೊದಲೇ ಗುರುತಿಸಿ, ಅಥವಾ ಅಂದಾಜು ಮಾಡಿ, ಅವುಗಳಿಗೆ ಹೆಸರಿಡುತ್ತದೆ. ಇದೇ ಏಪ್ರಿಲ್ ತಿಂಗಳಲ್ಲಿ ಒಟ್ಟು 169 ಚಂಡಮಾರುತಗಳನ್ನು ಹೊಸ ನಾಮಕರಣದೊಂದಿಗೆ ಪಟ್ಟಿ ಮಾಡಿ ಬಿಡುಗಡೆ ಮಾಡಲಾಯಿತು.

ಸಮಿತಿಯಲ್ಲಿರುವ 13 ದೇಶಗಳು ಸೇರಿ ತಲಾ 13 ಹೆಸರುಗಳನ್ನ ಸೂಚಿಸಿವೆ. ಹಾಗೆಯೇ, ಹೆಸರಿಡಲೂ ಕೆಲವೊಂದು ನಿಯಮ, ನಿಬಂಧನೆಗಳಿವೆ. ಈ ಹೆಸರು ಲಿಂಗಸೂಚಿಯಾಗಿರಬಾರದು, ರಾಜಕೀಯ ಸಂಬಂಧಿತವಾಗಿರಬಾರದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೂಚಕವೂ ಆಗಿರಬಾರದು. ಯಾರ ಭಾವನೆಗೂ ನೋವುಂಟು ಮಾಡಬಾರದು.

ಇದನ್ನೂ ಓದಿ: ಮೋದಿ ಆಡಳಿತಕ್ಕೆ ಶೇ.65 ಜನರ ಮೆಚ್ಚುಗೆ; ಪ್ರಧಾನಿ ಮೆಚ್ಚಿದವರಲ್ಲಿ ಬಿಹಾರ ಫಸ್ಟ್, ಕರ್ನಾಟಕಕ್ಕೆಷ್ಟನೇ ಸ್ಥಾನ?ಹೆಸರು ಉಚ್ಚರಿಸಲು ಬಹಳ ಸರಳ ಇರಬೇಕು. ಚಿಕ್ಕದಿರಬೇಕು. ಇಂಗ್ಲೀಷ್​ನಲ್ಲಿ ಹೆಸರು ಗರಿಷ್ಠ 8 ಪದಗಳಿರಬೇಕು. ಇವು ಚಂಡಮಾರುತಕ್ಕೆ ಹೆಸರಿಡಲು ಇರುವ ಮಾನದಂಡಗಳಾಗಿವೆ.

ಗತಿ, ನಿವರ್, ಬುರೇವಿ, ಟೌಕಟೇ, ಯಾಸ್ ಇವು ಮುಂಬರುವ ಚಂಡಮಾರುತಗಳಾಗಿವೆ. ಗತಿ ಹೆಸರನ್ನು ಸೂಚಿಸಿರುವುದು ಭಾರತವೇ. ಗತಿ ಜೊತೆಗೆ ತೇಜ್, ಮುರಸು, ಆಗ್, ವ್ಯೋಮ್, ಝಾರ್, ಪ್ರೊಬಾಹೊ, ನೀರ್, ಪ್ರಬಂಜನ್, ಘುರ್ನಿ, ಅಂಬುದ್, ಜಲಾಧಿ, ವೇಗ ಇವೂ ಕೂಡ ಭಾರತ ಇಟ್ಟಿರುವ ಹೆಸರುಗಳಾಗಿವೆ.

First published: June 3, 2020, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading