Bangalore University Recruitment 2020: ಖಾಲಿ ಇರುವ 7 ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗ್ರಂಥಾಲಯ

ಗ್ರಂಥಾಲಯ

Assistant Librarian Posts 2020: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 32,000/- ರಿಂದ 36,000/-ರೂ ವೇತನವನ್ನು ನೀಡಲಾಗುವುದು.

  • Share this:

    ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. 7 ಹುದ್ದೆಗಳು ಖಾಲಿ ಇದ್ದು ಆಸಕ್ತರು ಅಜರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ. ಅಕ್ಟೋಬರ್ 27,2020ರೊಳಗೆ ಅರ್ಜಿ ಸಲ್ಲಿಸಬಹುದು ಕೊನೆಯ ದಿನಾಂಕವಾಗಿದೆ.


    ವಿದ್ಯಾರ್ಹತೆ: ಸಹಾಯಕ ಗ್ರಂಥಪಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವಿ, ಪಿ.ಹೆಚ್ಡಿ ವಿದ್ಯಾರ್ಹತೆ ಹೊಂದಿರುವ ಹಾಗೂ ಎನ್ಇಟಿ ಮತ್ತು ಎಸ್ಇಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


    ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 32,000/- ರಿಂದ 36,000/-ರೂ ವೇತನವನ್ನು ನೀಡಲಾಗುವುದು.


    ವಯೋಮಿತಿ: ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಯು ಅರ್ಜಿ ಹಾಕಬಹುದು.


    ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.


    ಅರ್ಜಿ ಸಲ್ಲಿಕೆ: ಸಹಾಯಕ ಗ್ರಂಥಪಾಲಕ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್ https://eng.bangaloreuniversity.ac.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿ ನಂತರ ಅರ್ಜಿ ಭರ್ತಿ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಕ್ಟೋಬರ್ 27,2020ರ ಒಳಗೆ ಕಚೇರಿಗೆ ಕೊರಿಯರ್ ಮಾಡಬೇಕು.


    ಕಚೇರಿ ವಿಳಾಸ:
    The university librarian,
    bangalore university library,
    jnana bharathi campus,
    bengaluru -560056.


    ನಂಬ್ತಿರೋ…ಬಿಡ್ತಿರೋ..ಈ LED ಸ್ಮಾರ್ಟ್​ಟಿವಿ ಬೆಲೆ ಕೇವಲ 3232 ರೂ!

    Published by:Harshith AS
    First published: