ಚಿತ್ರ ನಿರ್ಮಾಪಕ ನಿಖಿಲ್ ಅಡ್ವಾಣಿ ಅವರು ರಚಿಸಿರುವ ವೆಬ್ ಸರಣಿ ‘ದ ಎಂಪೈರ್’ ಆಗಸ್ಟ್ 27 ರಿಂದ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಅಲೆಕ್ಸ್ ರುತ್ ಫೋಲ್ಡ್ ಅವರ ‘ಎಂಪೈರ್ ಆಫ್ ಮುಘಲ್ : ರೈಡರ್ಸ್ ಫ್ರಾಮ್ ನಾರ್ತ್’ ಅನ್ನು ಆಧರಿಸಿರುವ, ಐತಿಹಾಸಿಕ ಅವಧಿಯ-ಆ್ಯಕ್ಷನ್-ಡ್ರಾಮ ವೆಬ್ ಸರಣಿಯ ನ್ನು ಮಿತಾಕ್ಷರ ಕುಮಾರ್ ನಿರ್ದೇಶಿಸಿದ್ದಾರೆ. ಫರ್ಘಾನ ಕಣಿವೆಯಿಂದ ಸಮರ ಖಂಡಕ್ಕೆ ಮತ್ತು ಅದರಾಚೆಗಿನ ಒಂದು ಸಾಮ್ರಾಜ್ಯದ ಕಥೆಯನ್ನು ಹೇಳುತ್ತದೆ. ಈ ವೆಬ್‍ಸರಣಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಬಾಲಿವುಡ್ ನಟ ಕುನಾಲ್ ಕಪೂರ್ , ಮೊಘಲ್ ದೊರೆ ಬಾಬರನ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ.ಎಂಟು ಕಂತುಗಳ ಈ ವೆಬ್‍ಸರಣಿಯಲ್ಲಿ ಶಬಾನ ಆಜ್ಮಿ, ದೃಷ್ಟಿ ದಾಮಿ, ಡಿನೋ ಮೊರಿಯಾ, ಆದಿತ್ಯ ಸೀಲ್, ಸಹೇರ್ ಬಾಂಬಾ ಮತ್ತು ರಾಹುಲ್ ದೇವ್ ಮುಂತಾದ ಹಿರಿತೆರೆ, ಕಿರುತೆರೆಯ ಖ್ಯಾತ ನಟ ನಟಿಯರು ಪಾತ್ರ ವಹಿಸಿದ್ದಾರೆ.
ಅದೇನೇ ಇದ್ದರೂ, ಈ ಶೋ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾದ ಟೀಕೆಗಳು ವ್ಯಕ್ತವಾಗುತ್ತಿವೆ. ‘ಮುಘಲರನ್ನು’ ವೈಭವೀಕರಿಸುತ್ತಿರುವುದಕ್ಕೆ ನೆಟ್ಟಿಗರು ರೊಚ್ಚಿಗೆದ್ದಿದ್ದು, ಈ ಶೋ ಗೆ ಹಿಗ್ಗಾಮುಗ್ಗವಾಗಿ ಬೈಗುಳದ ಮಳೆ ಸುರಿಸುತ್ತಿದ್ದಾರೆ. ಶನಿವಾರ ಬೆಳಗ್ಗೆಯಿಂದ ಟ್ವಿಟರ್‌ನಲ್ಲಿ “ಬ್ಯಾನ್ ದ ಎಂಪೈರ್ ಸಿರೀಸ್” ಮತ್ತು “ಅನ್ ಇನ್‍ಸ್ಟಾಲ್ ಹಾಟ್‍ಸ್ಟಾರ್” ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
“ ಮೊಘಲರನ್ನು ವೈಭವೀಕರಿಸಿದವರು ಶಿಕ್ಷಣ ತಜ್ಞರು ಮತ್ತು ಎನ್‍ಸಿಇಆರ್‍ಟಿ ಹಾಗೂ ಬಾಲಿವುಡ್ ಗುಂಪು. ಇದೀಗ ಓಟಿಟ ವೇದಿಕೆಯೂ ಕೂಡ ಅಂತಹ ನಿರೂಪಣೆಯನ್ನು ಮಾಡಲು ಹೊರಟಿದೆ. ಅಂತಹ ಅನಾಗರಿಕರನ್ನು ವೈಭವೀಕರಿಸುತ್ತಿರುವ ಡಿಸ್ನಿ ಹಾಟ್ ಸ್ಟಾರ್ ಗೆ ನಾಚಿಗೆ ಆಗಬೇಕು” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರ, “ಕುತೂಹಲದ ವಿಷಯವೆಂದರೆ, ಇಡೀ ಟ್ರೈಲರ್‌ನಲ್ಲಿ ಬಾಬರ್ ನಡೆಸಿದ ದೌರ್ಜನ್ಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕುತೂಹಲ ವನ್ನು ಹೆಚ್ಚಿಸಲು, ವಿಶೇಷವಾಗಿ ಹಿಂದೂಗಳಿಗೆ ಅವರದ್ದೇ ಭೂಮಿಯಲ್ಲಿ ಕಿರುಕುಳ ನೀಡಿದ್ದನ್ನು ಸೇರಿಸಬಹುದಿತ್ತು” ಎಂದು ಟ್ವೀಟ್ ಮಾಡಿದ್ದಾರೆ.
ಲಕ್ಷಗಟ್ಟಲೆ ಹಿಂದೂಗಳನ್ನು ಲೂಟಿ ಮಾಡಿದ, ಕಿರುಕುಳ ನೀಡಿದ ಮತ್ತು ಕೊಂದು ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಜಹೀರ್ ಉದ್ ದಿನ್ ಮೊಹಮದ್ ಬಾಬರನನ್ನು ವೈಭವೀಕರಿಸುವುದು ಅವಮಾನಕರ. ಅಂತಹ ಆಕ್ರಮಣಕಾರರು ಪ್ರಾಂತ್ಯಗಳನ್ನು ವಶಪಡಿಸಿಕೊಂಡು ನಾಗರೀಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ತಾಲಿಬಾನಿ ಯರ ಕ್ರಮಗಳು ನೆನಪಿಸುತ್ತವೆ ಎಂದು ಮತ್ತೊಬ್ಬ ಬಳಕೆದಾರ ಟ್ವೀಟ್ ಮಾಡಿದ್ದಾರೆ.
ಈ ವೆಬ್ ಸರಣಿಯನ್ನು ಭಾರತ ಮತ್ತು ಉಜಬೇಕಿಸ್ತಾನದ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ದ ಎಂಪೈರ್’ ಸರಣಿಯನ್ನು ನಿಖಿಲ್ ಅಡ್ವಾಣಿಯ ಸಹೋದರಿ ಮೊನಿಶಾ ಅಡ್ವಾಣಿ ಮತ್ತು ಮಧು ಭೋಜ್ವಾನಿ ತಮ್ಮ ಎಮ್ಮಿ ಎಂಟಟೈನ್‌ಮೆಂಟ್ ಬ್ಯಾನರ್ ಅಡಿ ಯಲ್ಲಿ ನಿರ್ಮಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ