HOME » NEWS » National-international » BAN ON MANUFACTURE STORAGE AND SALE OF GUTKHA IN DELHI EXTENDED BY ANOTHER YEAR LG

ಗುಟ್ಕಾ ಮತ್ತು ಪಾನ್​ ಮಸಾಲ ಮೇಲಿನ ನಿಷೇಧವನ್ನು ಇನ್ನೂ ಒಂದು ವರ್ಷ ವಿಸ್ತರಿಸಿದ ದೆಹಲಿ ಸರ್ಕಾರ

ಈವರೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿಕೋಟಿನ್​ ಅಂಶ ಹೊಂದಿರುವ ಸಿಗರೇಟ್ ಉತ್ಪನ್ನಗಳ ಮೇಲೆ ನಿಷೇಧ ವಿಧಿಸಿಲ್ಲ. ಗುಟ್ಕಾ ಮತ್ತು ಪಾನ್ ಮಸಾಲಗಳನ್ನು ಮಾತ್ರ ನಿಷೇಧಿಸಿದೆ.

news18-kannada
Updated:July 17, 2020, 12:34 PM IST
ಗುಟ್ಕಾ ಮತ್ತು ಪಾನ್​ ಮಸಾಲ ಮೇಲಿನ ನಿಷೇಧವನ್ನು ಇನ್ನೂ ಒಂದು ವರ್ಷ ವಿಸ್ತರಿಸಿದ ದೆಹಲಿ ಸರ್ಕಾರ
ಪ್ರಾತಿನಿಧಿಕ ಚಿತ್ರ
  • Share this:
ದೆಹಲಿ(ಜು.16): ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರವು ಗುರುವಾರದಿಂದ ಅನ್ವಯವಾಗುವಂತೆ ಗುಟ್ಕಾ ಮತ್ತು ಪಾನ್​ ಮಸಾಲ ತಯಾರಿಕೆ, ಸಂಗ್ರಹ, ಮಾರಾಟ ಮತ್ತು ವಿತರಣೆ ಮೇಲಿನ ನಿಷೇಧವನ್ನು ಇನ್ನೂ ಒಂದು ವರ್ಷ ವಿಸ್ತರಿಸಿ ಆದೇಶಿಸಿದೆ.

ದೆಹಲಿಯ ಆಹಾರ ಸುರಕ್ಷತಾ ಆಯುಕ್ತರಾದ ಡಿಎನ್​ ಸಿಂಗ್ ಈ ಉತ್ಪನ್ನಗಳ ನಿಷೇಧ ಕುರಿತಾಗಿ ಅಧಿಸೂಚನೆ ಹೊರಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನೂ ಒಂದು ವರ್ಷ ದೆಹಲಿಯಲ್ಲಿ ಗುಟ್ಕಾ ಮತ್ತು ಪಾನ್​ ಮಸಾಲ ತಯಾರಿಕೆ, ಸಂಗ್ರಹ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿದೆ.

ಆಹಾರ ಸುರಕ್ಷತಾ ಇಲಾಖೆಯು ಕಳೆದ 4 ವರ್ಷಗಳಿಂದ ದೆಹಲಿಯಲ್ಲಿ ಗುಟ್ಕಾ ಮತ್ತು ಪಾನ್​ ಮಸಾಲವನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸುತ್ತಾ ಬಂದಿದೆ. ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್​ ಮಸಾಲವನ್ನು ತಯಾರಿಸುವುದು, ಸಂಗ್ರಹಿಸುವುದು, ಸಾಗಾಟ ಮಾಡುವುದು, ಪ್ರದರ್ಶಿಸುವುದು ಮತ್ತು ಮಾರಾಟ ಮಾಡುವುದನ್ನು ದೆಹಲಿಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಆದರೆ ಈವರೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿಕೋಟಿನ್​ ಅಂಶ ಹೊಂದಿರುವ ಸಿಗರೇಟ್ ಉತ್ಪನ್ನಗಳ ಮೇಲೆ ನಿಷೇಧ ವಿಧಿಸಿಲ್ಲ. ಗುಟ್ಕಾ ಮತ್ತು ಪಾನ್ ಮಸಾಲಗಳನ್ನು ಮಾತ್ರ ನಿಷೇಧಿಸಿದೆ.

ಬಾಗಲಕೋಟೆ ಜಿಪಂ ಉಪಾಧ್ಯಕ್ಷರಿಗೆ ಕೊರೋನಾ ಸೋಂಕು; ಜಿಲ್ಲಾಧಿಕಾರಿ ಮತ್ತು ರೈತರಿಗೆ ಆತಂಕ

ತಂಬಾಕು ಮತ್ತು ನಿಕೋಟಿನ್​ ಆರೋಗ್ಯಕ್ಕೆ ತೀವ್ರ ಹಾನಿಕಾರವಾಗಿದ್ದು, ದುಷ್ಪರಿಣಾಮವನ್ನು ಬೀರುತ್ತದೆ. ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಂಬಾಕು ಅಥವಾ ನಿಕೋಟಿನ್​ ಪದಾರ್ಥಗಳನ್ನು ಒಳಗೊಂಡಿರುವ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಹೆಸರುಗಳ ಗುಟ್ಕಾ ಮತ್ತು ಪಾನ್ ಮಸಾಲಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿ ನಿಷೇಧಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಈಗಾಗಲೇ ತಂಬಾಕು ಮತ್ತು ನಿಕೋಟಿನ್​ ಹೊಂದಿರುವ ಪಾನ್​ ಮಸಾಲಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
Published by: Latha CG
First published: July 16, 2020, 10:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories