ಬಲ್ಲಿಯಾ ಶೂಟೌಟ್ ಪ್ರಕರಣ; ಪ್ರಮುಖ ಆರೋಪಿ ಧೀರೇಂದ್ರ ಸಿಂಗ್ ಬಂಧನ

ಧೀರೇಂದ್ರ ಸಿಂಗ್

ಧೀರೇಂದ್ರ ಸಿಂಗ್

ಬಲ್ಲಿಯಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 10 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

  • Share this:

ಲಕ್ನೋ (ಅ. 18): ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮೂರು ದಿನಗಳ ಹಿಂದೆ ಪೊಲೀಸರ ಎದುರಿನಲ್ಲೇ ವ್ಯಕ್ತಿಯೊಬ್ಬನನ್ನು ಗುಂಡು ಹಾರಿಸಿ, ಕೊಲೆ ಮಾಡಿದ್ದ ಆರೋಪದಲ್ಲಿ ಪ್ರಮುಖ ಆರೋಪಿ ಧೀರೇಂದ್ರ ಸಿಂಗ್​ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ನಾನು ನಿರಪರಾಧಿ ಎಂದು ವಿಡಿಯೋ ರಿಲೀಸ್ ಮಾಡಿದ್ದ ಧೀರೇಂದ್ರ ಸಿಂಗ್ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರಿಗೆ ಆಪ್ತನಾಗಿದ್ದ ಎನ್ನಲಾಗಿದೆ. ಈತನ ಜೊತೆಗೆ ಸಂತೋಷ್ ಯಾದವ್ ಮತ್ತು ಅಮರಜೀತ್ ಯಾದವ್ ಎಂಬ ಇನ್ನಿಬ್ಬರು ಆರೋಪಿಗಳನ್ನು ಕೂಡ ಉತ್ತರಪ್ರದೇಶ ಎಸ್​ಟಿಎಫ್ ಸಿಬ್ಬಂದಿ ಇಂದು ಲಕ್ನೋದಲ್ಲಿ ವಶಕ್ಕೆ ಪಡೆದಿದ್ದಾರೆ.


ಬಲ್ಲಿಯಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 10 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮೂರು ದಿನಗಳ ಹಿಂದೆ ಬಲ್ಲಿಯಾದಲ್ಲಿ ಪಡಿತರ ಅಂಗಡಿಗಳನ್ನು ಅಧಿಕಾರಿಗಳ ಸುಪರ್ದಿಗೆ ವಹಿಸುವ ಕಾರ್ಯಕ್ರಮದಲ್ಲಿ ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿ ಎದುರಲ್ಲೇ ಬಿಜೆಪಿ ಕಾರ್ಯಕರ್ತ ಧೀರೇಂದ್ರ ಸಿಂಗ್​ ಜೈ ಪ್ರಕಾಶ್​ ಎಂಬುವವರಿಗೆ ಗುಂಡು ಹಾರಿಸಿ, ಕೊಲೆ ಮಾಡಿದ್ದ.


ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಮೂವರ ಬಂಧನ


ಈ ಘಟನೆ ನಡೆದ ಬಳಿಕ ಧೀರೇಂದ್ರ ಸಿಂಗ್ ತಲೆಮರೆಸಿಕೊಂಡಿದ್ದ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಯನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅಮಾನತುಗೊಳಿಸಿದ್ದರು. ಈ ಪ್ರಕರಣದ ಬಗ್ಗೆ ವಿಡಿಯೋ ರಿಲೀಸ್ ಮಾಡಿದ್ದ ಧೀರೇಂದ್ರ ಸಿಂಗ್, ನಾನು ಗುಂಡು ಹೊಡೆದಿಲ್ಲ. ನನ್ನನ್ನು ಸಿಲುಕಿಸಲು ಯಾರೋ ಪಿತೂರಿ ನಡೆಸಿದ್ದಾರೆ.


ಅಧಿಕಾರಿಗಳಾದ ಪಾಲ್ ಮತ್ತು ಯಾದವ್ ಅವರು ಇನ್ನೊಂದು ಗುಂಪಿನೊಂದಿಗೆ ಶಾಮೀಲಾಗಿ ನನ್ನನ್ನು ಪ್ರಕರಣದಲ್ಲಿ ಸಿಕ್ಕಿಹಾಕಿಸಲು ಪಿತೂರಿ ಮಾಡಿದ್ಧಾರೆ. ನಾನು ಯಾವುದೇ ಗುಂಡು ಹಾರಿಸಲಿಲ್ಲ. ಜೈ ಪ್ರಕಾಶ್ ಪಾಲ್​ನನ್ನು ಕೊಂದ ಬುಲೆಟ್ ಯಾರು ಹಾರಿಸಿದ್ದು ಎಂಬುದು ನನಗೆ ಗೊತ್ತಿಲ್ಲ. ಗುಂಡೇಟಿನ ಶಬ್ದ ಕೇಳಿ ನನ್ನ 80 ವರ್ಷದ ವೃದ್ಧ ತಂದೆ ಕುಸಿದು ಬಿದ್ದರು. ಕೆಲ ಜನರು ನನ್ನ ಅತ್ತಿಗೆಯ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಸಿಗುತ್ತಿಲ್ಲ ಎಂದು ನಮ್ಮ ಮನೆಯವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಧೀರೇಂದ್ರ ಸಿಂಗ್ ವಿಡಿಯೋದಲ್ಲಿ ಆರೋಪಿಸಿದ್ದರು.

First published: