ಬಾಲಿಯಾ ಶೂಟೌಟ್; ‘ಗುಂಡು ಹೊಡೆದವ ನಾನಲ್ಲ’ - ನಾಪತ್ತೆಯಾದ ಆರೋಪಿ ಹೇಳಿಕೆ

ಅ. 15ರಂದು ಉತ್ತರ ಪ್ರದೇಶ ಬಾಲಿಯಾದಲ್ಲಿ ರೇಷನ್ ಹಂಚಿಕೆ ಸಂಬಂಧ ನಡೆದ ಸಭೆಯಲ್ಲಿ ಶೂಟೌಟ್ ಆಗಿ ಒಬ್ಬ ಯುವಕ ಬಲಿಯಾಗಿದ್ದ. ತಾನು ಗುಂಡು ಹೊಡೆದಿಲ್ಲ ಎಂದು ಆರೋಪಿ ಧಿರೇಂದ್ರ ಸಿಂಗ್ ಹೇಳಿಕೆ ನೀಡಿದ್ಧಾನೆ.

news18
Updated:October 17, 2020, 4:14 PM IST
ಬಾಲಿಯಾ ಶೂಟೌಟ್; ‘ಗುಂಡು ಹೊಡೆದವ ನಾನಲ್ಲ’ - ನಾಪತ್ತೆಯಾದ ಆರೋಪಿ ಹೇಳಿಕೆ
ಬಾಲಿಯಾ ಶೂಟೌಟ್ ನಡೆದ ಸ್ಥಳ
  • News18
  • Last Updated: October 17, 2020, 4:14 PM IST
  • Share this:
ಲಕ್ನೋ(ಅ. 17): ಉತ್ತರ ಪ್ರದೇಶದ ಬಾಲಿಯಾದಲ್ಲಿ ಮೊನ್ನೆ ಹಾಡಹಗಲಿನಲ್ಲೇ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿ ಒಬ್ಬನನ್ನು ಬಲಿತೆಗೆದುಕೊಂಡ ಆರೋಪ ಎದುರಿಸುತ್ತಿರುವ ಧೀರೇಂದ್ರ ಸಿಂಗ್ ಇಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ತಾನು ಗುಂಡು ಹೊಡೆದಿಲ್ಲ ಎಂದು ಹೇಳಿದ್ಧಾನೆ. ಬಾಲಿಯಾದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರ ಆಪ್ತನೆನ್ನಲಾದ ಆರೋಪಿ ಧೀರೇಂದ್ರ ಸಿಂಗ್, ತನ್ನನ್ನ ಸಿಲುಕಿಸಲು ಪಿತೂರಿ ನಡೆದಿತ್ತು. ತನ್ನ ಕುಟುಂಬಕ್ಕೆ ಸುಮ್ಮನೆ ಕಿರುಕುಳ ನೀಡಲಾಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಿದ್ಧಾನೆ.

ಮೊನ್ನೆ ಗುರುವಾರ ರೇಷನ್ ಅಂಗಡಿಗಳ ಆಯ್ಕೆ ವಿಚಾರದಲ್ಲಿ ಆದ ವಿವಾದವನ್ನು ಬಗೆಹರಿಸಲು ಬಾಲಿಯಾದ ಸ್ಥಳೀಯ ಅಧಿಕಾರಿಗಳು ಎರಡು ಗುಂಪುಗಳನ್ನ ಕರೆಸಿ ಸಭೆ ನಡೆಸಿದ್ದರು. ಈ ವೇಳೆ, ಗುಂಡಿನ ಸಪ್ಪಳ ಕೇಳಿಬಂದು ಜೈ ಪ್ರಕಾಶ್ ಪಾಲ್ ಎಂಬ ಯುವಕ ಸಾವನ್ನಪ್ಪಿದ್ದ. ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರ ಆಪ್ತ ಧೀರೇಂದ್ರ ಸಿಂಗ್ ಗುಂಡು ಹಾರಿಸಿದ್ದು ಎಂದೆನ್ನಲಾಗುತ್ತಿದೆ. ಗುಂಡಿನ ದಾಳಿ ಬಳಿಕ ನೂಕುನುಗ್ಗಲು ಸಂಭವಿಸಿ, ಆರೋಪಿ ನಾಪತ್ತೆಯಾಗಿದ್ದ. ಇದೀಗ ವಿಡಿಯೋ ಮೂಲಕ ಆತ ತನ್ನ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ: ಕೊರೋನಾದಿಂದಾಗಿ ಮೃತಪಟ್ಟ ದೆಹಲಿಯ ಆರೀಫ್ ಖಾನ್ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಿದ ರಾಷ್ಟ್ರಪತಿ ಭವನ

“ಎಸ್​ಡಿಒ ಸುರೇಶ್ ಪಾಲ್, ಸಿಒ ಚಂದ್ರಶೇಶ್ ಸಿಂಗ್, ಬಿಡಿಒ ಗಜೇಂದ್ರ ಸಿಂಗ್ ಯಾದವ್ ಮತ್ತು ಎಸ್​ಐ ಸದಾನಂದ್ ಯಾದವ್ ಅವರೆಲ್ಲರೂ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಇಲ್ಲಿಯ ವಾತಾವರಣ ಸರಿ ಇಲ್ಲ. ಯಾವ ಆಧಾರದಲ್ಲಿ ಕೋಟಾ ನೀಡುತ್ತೀರಿ ಎಂದು ನಾನು ಎಸ್​ಡಿಒ ಮತ್ತು ಬಿಡಿಒ ಅವರನ್ನ ಕೇಳಿದ್ದೆ. ಹೆಚ್ಚು ಜನರನ್ನು ಸೇರಿಸಿದ ಗುಂಪಿಗೆ ಕೋಟಾ ಕೊಡಲಾಗುತ್ತದೆ ಎಂದು ನನಗೆ ತಿಳಿಸಲಾಗಿತ್ತು. ನನ್ನ ಕಡೆಯಿಂದ 1,500 ಮಂದಿ, ಮತ್ತೊಂದು ಗುಂಪಿನಲ್ಲಿ 300 ಮಂದಿ ಇದ್ದರು. ನಾನು ಈ ಸಭೆಯಲ್ಲಿ ಗಲಭೆಗಳಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳನ್ನ ಎಚ್ಚರಿಸಿದ್ದೆ. ಆದರೆ ನನ್ನ ಮಾತನ್ನ ಕೇಳಲಿಲ್ಲ.

”ನನ್ನ ಗುಂಪಿನಲ್ಲಿ ಹೆಚ್ಚು ಜನರಿರುವುದರಿಂದ ಪಡಿತರ ನೀಡುವುದಿಲ್ಲ ಎಂದು ಎಸ್​ಡಿಒ ತಿಳಿಸಿದರು. ಹೆಚ್ಚು ಜನರನ್ನು ಸೇರಿಸಿದರೆ ಕೋಟಾ ಕೊಡಲಾಗುತ್ತದೆ ಎಂದು ಹೇಳಿದ್ದನ್ನ ನೆನಪಿಸಿ ಪ್ರತಿಭಟಿಸಿದೆ” ಎಂದು ಧಿರೇಂದ್ರ ಸಿಂಗ್ ವಿವರಿಸಿದ್ದಾನೆ.

“ಅಧಿಕಾರಿಗಳಾದ ಪಾಲ್ ಮತ್ತು ಯಾದವ್ ಅವರು ಇನ್ನೊಂದು ಗುಂಪಿನೊಂದಿಗೆ ಶಾಮೀಲಾಗಿ ತನ್ನನ್ನು ಪ್ರಕರಣದಲ್ಲಿ ಸಿಕ್ಕಿಹಾಕಿಸಲು ಪಿತೂರಿ ಮಾಡಿದ್ಧಾರೆ. ನಾನು ಯಾವುದೇ ಗುಂಡು ಹಾರಿಸಲಿಲ್ಲ. ಜೈ ಪ್ರಕಾಶ್ ಪಾಲ್​ನನ್ನು ಕೊಂದ ಬುಲೆಟ್ ಯಾರು ಹಾರಿಸಿದ್ದು ಅಂತ ನನಗೆ ಗೊತ್ತಿಲ್ಲ. ನನ್ನ 80 ವರ್ಷದ ವೃದ್ಧ ತಂದೆ ಕುಸಿದು ಬಿದ್ದರು. ಕೆಲ ಜನರು ನನ್ನ ಅತ್ತಿಗೆಯ ಮೇಲೆ ಹಲ್ಲೆ ಮಾಡಿದರು. ಇನ್ನೂ ಕೆಲವರು ಸುಮ್ಮನೆ ಗುಂಡು ಹಾರಿಸತೊಡಗಿದರು.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಮೂವರ ಬಂಧನ“ಉದ್ದೇಶಪೂರ್ವಕವಾಗಿಯೇ ಪಂಚಾಯತ್ ಭವನ ಬಳಿ ಸಭೆ ನಡೆಸಲಾಯಿತು. ಬೇರೆ ಗುಂಪಿನ ಜನರ ಮನೆಗಳು ಪಂಚಾಯಿತಿಯ ಸಮೀಪವೇ ಇದೆ. ಜಗಳ ಶುರುವಾದಾಗ ಕಲ್ಲು ತೂರಾಟ  ಪ್ರಾರಂಭವಾಯಿತು. ಎಸ್​ಡಿ ಮತ್ತು ಸಿಒ ಬಳಿ ಇದ್ದ ನಾನು ಪರಿಸ್ಥಿತಿ ನಿಯಂತ್ರಿಸುವಂತೆ ಅವರನ್ನ ಕೇಳಿಕೊಂಡೆ. ಆದರೆ, ಅವರು ಏನೂ ಮಾಡದೆ ಸುಮ್ಮನಿದ್ದರು. ಈಗ ಅಧಿಕಾರಿಗಳು ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮನೆಯನ್ನ ಲೂಟಿ ಮಾಡಲಾಗುತ್ತಿದೆ” ಎಂದು ಸಿಂಗ್ ಆರೋಪಿಸಿದ್ದಾನೆ.

ಶಾಸಕ ಸುರೇಂದ್ರ ಸಿಂಗ್ ಕೂಡ ತನ್ನ ಆಪ್ತನ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಧೀರೇಂದ್ರ ಸಿಂಗ್​ನನ್ನು ಸುಮ್ಮನೆ ಸಿಲುಕಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು ಧರಣಿ ಕೂರಲು ಯೋಜಿಸಿದ್ದಾರೆ.

ಇದೇ ವೇಳೆ, ಶೂಟೌಟ್​ನಲ್ಲಿ ಬಲಿಯಾಗಿದ್ದ ಜೈ ಪ್ರಕಾಶ್ ಪಾಲ್​ನ ಸಹೋದರ ಚಂದ್ರಮ ನೀಡಿದ ದೂರಿನ ಮೇರೆ ಧಿರೇಂದ್ರ ಸಿಂಗ್ ಸೇರಿ 15-20 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್​ಡಿಎಂ ಸುರೇಶ್ ಪಾಲ್, ಸರ್ಕಲ್ ಆಫೀಸರ್ ಚಂದ್ರಕೇಶ್ ಸಿಂಗ್ ಸೇರಿದಂತೆ ಘಟನಾ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನ ತತ್​ಕ್ಷಣವೇ ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದರು. ಆರೋಪಿಗಳ ವಿರುದ್ಧವೂ ಕ್ರಮ ಜರುಗಿಸುವಂತೆ ನಿರ್ದೇಶಿಸಿದ್ದಾರೆ.
Published by: Vijayasarthy SN
First published: October 17, 2020, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading