2002 Bali Bombings: 217 ಅಮಾಯಕರ ಹಂತಕ, ಅಲ್ ಖೈದಾದ ಈ ಭಯೋತ್ಪಾದಕ ಜೈಲಿನಿಂದ ಬಿಡುಗಡೆ!

ಗುಜರಾತ್ 2002 ರ ಗೋಧ್ರಾ ನಂತರದ ಗಲಭೆಗಳಲ್ಲಿ, ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬಾನೋ ಅವರ 11 ಆರೋಪಿಗಳನ್ನು ಜೈಲಿನಿಂದ ಅವಧಿಗೆ ಮುನ್ನ ಬಿಡುಗಡೆ ಮಾಡಿದ ಪ್ರಕರಣವು ಮಾಧ್ಯಮಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ಇಂಡೋನೇಷ್ಯಾದಲ್ಲಿ ಇಂತಹ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.

ಕುಖ್ಯಾತ ಭಯೋತ್ಪಾದಕ ಉಮರ್ ಪಾಟೇಕ್

ಕುಖ್ಯಾತ ಭಯೋತ್ಪಾದಕ ಉಮರ್ ಪಾಟೇಕ್

  • Share this:
ಸಿಡ್ನಿ(ಆ.20): ಈತನೇ ಕುಖ್ಯಾತ ಭಯೋತ್ಪಾದಕ ಉಮರ್ ಪಾಟೇಕ್ (Umar Patek). ಈತ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. 20 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಇಂಡೋನೇಷ್ಯಾ (Indonesia) ಮೂಲದ ಈ ಭಯೋತ್ಪಾದಕನ ಶಿಕ್ಷೆಯನ್ನು ಕಡಿತಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ಅವನು ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ. ಇದಕ್ಕೆ ಆಸ್ಟ್ರೇಲಿಯಾ (Australia) ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರಕರಣವು ಬಿಲ್ಕಿಸ್ ಬಾನೊ ಪ್ರಕರಣದಂತೆಯೇ ನಡೆದಿದೆ. ಇಲ್ಲಿ, ಗುಜರಾತ್‌ನ 2002 ರ ಗೋಧ್ರಾ (Godhra) ನಂತರದ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಿಲ್ಕಿಸ್ ಬಾನೊ (Bilkis Bano) ಅವರ 11 ಆಪರಾಧಿಗಳನ್ನು ಅಕಾಲಿಕವಾಗಿ ಬಿಡುಗಡೆ ಮಾಡಿದ ಪ್ರಕರಣ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. (ಚಿತ್ರ: ಆಗಸ್ಟ್ 17 ರಂದು ಇಂಡೋನೇಷ್ಯಾ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದ ನಂತರ ಒಮರ್ ಪಾಟೆಕ್ ತನ್ನ ಪತ್ನಿ ರುಕಯ್ಯ ಬಿನಾತಿ ಹುಸೇನ್ ಲುಸೆನೊ ಸುರಬಯಾ ಜೊತೆ ಪೆನಿನ್ಸುಲಾದಲ್ಲಿ)

ಒಮರ್ ಅನೇಕ ಬಾಂಬ್ ಸ್ಫೋಟಗಳ ಮಾಸ್ಟರ್ ಮೈಂಡ್

2002 ರ ಬಾಲಿ (ಇಂಡೋನೇಷ್ಯಾ) ಬಾಂಬ್ ಸ್ಫೋಟದಲ್ಲಿ ಇಂಡೋನೇಷ್ಯಾದ ಒಮರ್ ಪಾಟೆಕ್ ಜೈಲು ಪಾಲಾಗಿದ್ದ ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ (Australian Prime Minister Anthony Albanese) ಶುಕ್ರವಾರ ಹೇಳಿದ್ದಾರೆ. ಇದರಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಇದೀಗ ಆತನ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ಅಂದರೆ, ಈಗ ಅವನು ಪೆರೋಲ್ ಮೇಲೆ ಬಿಡುಗಡೆಯಾಗಬಹುದು. ಒಂದು ದಶಕದ ಹಿಂದೆ ಎರಡು ಬಾಲಿ ನೈಟ್‌ಕ್ಲಬ್‌ಗಳಲ್ಲಿ ಬಾಂಬ್ ಸ್ಫೋಟ ಮಾಡಿದ ಆರೋಪದ ಮೇಲೆ 2012 ರಲ್ಲಿ ಇಂಡೋನೇಷ್ಯಾದ ನ್ಯಾಯಾಲಯವು ಒಮರ್ ಪಾಟೆಕ್​ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಈ ಸ್ಫೋಟದಲ್ಲಿ 88 ಆಸ್ಟ್ರೇಲಿಯನ್ನರು ಸೇರಿದಂತೆ 202 ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ: Terrorist: ನಾಗ್ಪುರದ RSS ಕಚೇರಿ ಸುತ್ತ ಭೂಸಮೀಕ್ಷೆ ನಡೆಸಿರುವ ಉಗ್ರರು, ಸ್ಥಳದಲ್ಲಿ ಬಿಗಿ ಭದ್ರತೆ, ಡ್ರೋಣ್​ ಹಾರಾಟ ನಿಷೇಧ

ಅಲ್ ಖೈದಾ-ಸಂಬಂಧಿತ ಭಯೋತ್ಪಾದಕ ಗುಂಪಿನ ಜೆಮಾಹ್ ಇಸ್ಲಾಮಿಯಾ ಸದಸ್ಯ ಒಮರ್, 2000 ರಲ್ಲಿ ಕ್ರಿಸ್‌ಮಸ್ ಮುನ್ನಾದಿನದಂದು ಜಕಾರ್ತದಲ್ಲಿ ಹಲವಾರು ಚರ್ಚ್‌ಗಳ ಮೇಲೆ ಬಾಂಬ್ ದಾಳಿ ನಡೆಸಿದ ಪ್ರಕರಣದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಈ ವೇಳೆ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಆಗಸ್ಟ್ 17 ರಂದು ಇಂಡೋನೇಷ್ಯಾದ ಸ್ವಾತಂತ್ರ್ಯ ದಿನದಂದು ಕೈದಿಗಳಿಗೆ ನೀಡಲಾದ ಕ್ಷಮಾದಾನದ ಸರಣಿಯ ಭಾಗವಾಗಿ ಒಮರ್‌ಗೆ ಐದು ತಿಂಗಳ ಕ್ಷಮಾದಾನ ನೀಡಲಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೇಳಿದರು.

ಇಂಡೋನೇಷ್ಯಾದ ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯವು ಈ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದು ಆಸ್ಟ್ರೇಲಿಯಾದ ಪ್ರಧಾನಿ ಹೇಳಿದರು. ಅವರು (ಇಂಡೋನೇಷ್ಯಾ) ಆ ನಿರ್ಧಾರದ ಬಗ್ಗೆ ನಮಗೆ ತಿಳಿಸಿದರು ಮತ್ತು ಆ ನಿರ್ಧಾರದ ಬಗ್ಗೆ ನಾವು ನಮ್ಮ ಅಭಿಪ್ರಾಯಗಳನ್ನು ಅವರಿಗೆ ತಿಳಿಸಿದ್ದೇವೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಅಲ್ಬನೀಸ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಇಂಡೋನೇಷ್ಯಾ ಒಂದು ವ್ಯವಸ್ಥೆಯನ್ನು ಹೊಂದಿದೆ, ಅದರ ಅಡಿಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ ವೇಳೆ ಶಿಕ್ಷೆಯ ಪ್ರಮಾಣ ಬದಲಾಯಿಸಲಾಗುತ್ತದೆ. ಈ ನಿರ್ಧಾರದ ವಿಚಾರವಾಗಿ ಇಂಡೋನೇಷ್ಯಾದೊಂದಿಗೆ ತನ್ನ ಸರ್ಕಾರ ರಾಜತಾಂತ್ರಿಕ ಸಂಪರ್ಕವನ್ನು ಮಾಡಲಿದೆ ಎಂದು ಅಲ್ಬನೀಸ್ ಹೇಳಿದ್ದಾರೆ.

ಇದನ್ನೂ ಓದಿ: Terrorist: ಕೇರಳ ಮೂಲದ ಉಗ್ರ ಅಘ್ಘಾನಿಸ್ತಾನದಲ್ಲಿ ಸಾವು! ಮದುವೆ ಆದ ಮರು ಕ್ಷಣವೇ ಆತ್ಮಾಹುತಿ ದಾಳಿ

ಇದನ್ನೂ ತಿಳಿದುಕೊಳ್ಳಿ

ಒಮರ್ ಪಾಟೆಕ್ ಹುಡುಕಿ ಕೊಟ್ಟವರಿಗೆ $1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಹೀಗಿರುವಾಗ ಆತ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಸಿಕ್ಕಿಬಿದ್ದಿದ್ದ. ಇದೇ ನಗರದಲ್ಲಿ 2011ರಲ್ಲಿ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆಯಾಗಿತ್ತು. ಬಾಲಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್, ಅನ್ಸೆಪ್ ನೂರ್ಜಮಾನ್ ಎಂದೂ ಕರೆಯಲ್ಪಡುವ ಹಂಬಾಲಿ ಪ್ರಸ್ತುತ ಕ್ಯೂಬಾದ ಗ್ವಾಂಟನಾಮೊ ಕೊಲ್ಲಿಯಲ್ಲಿ ಬಂಧನದಲ್ಲಿದ್ದಾನೆ ಮತ್ತು 2006 ರಿಂದ ವಿಚಾರಣೆಗಾಗಿ ಕಾಯುತ್ತಿದ್ದಾನೆ.
Published by:Precilla Olivia Dias
First published: