ಬಾಲಾಕೋಟ್ ಉಗ್ರರ ಕ್ಯಾಂಪ್ ಈಗಲೂ ಕಾರ್ಯನಿರ್ವಹಿಸುತ್ತಿದೆ, ದೇಶದೊಳಕ್ಕೆ ನುಸುಳಲು 500 ಉಗ್ರರು ಕಾಯುತ್ತಿದ್ದಾರೆ; ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಭಾರದ ವಾಯುಸೇನೆ ನಾಶ ಮಾಡಿದ್ದ ಜೈಶ್-ಎ-ಮಹಮ್ಮದ್ ಉಗ್ರ ಸಂಘಟನೆಯ ಸುಸಜ್ಜಿತ ಕ್ಯಾಂಪ್ ಮತ್ತೆ ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿದೆ ಎಂದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇಂದು ತಮಿಳುನಾಡಿನಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ಮಾಹಿತಿ ನೀಡಿದ್ದಾರೆ.

MAshok Kumar | news18-kannada
Updated:September 23, 2019, 12:31 PM IST
ಬಾಲಾಕೋಟ್ ಉಗ್ರರ ಕ್ಯಾಂಪ್ ಈಗಲೂ ಕಾರ್ಯನಿರ್ವಹಿಸುತ್ತಿದೆ, ದೇಶದೊಳಕ್ಕೆ ನುಸುಳಲು 500 ಉಗ್ರರು ಕಾಯುತ್ತಿದ್ದಾರೆ; ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಸೇನಾ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್.
  • Share this:
ಚೆನ್ನೈ (ಸೆಪ್ಟೆಂಬರ್.23); ಕಳೆದ ಮಾರ್ಚ್ ತಿಂಗಳಲ್ಲಿ ಭಾರತೀಯ ವಾಯುಸೇನೆಯಿಂದ ಬಾಂಬ್ ದಾಳಿಗೆ ಒಳಗಾಗಿದ್ದ ಬಾಲಾಕೋಟ್ ಉಗ್ರರ ಕ್ಯಾಂಪ್ ಈಗಲೂ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸುಮಾರು 500 ಕ್ಕೂ ಹೆಚ್ಚು ಉಗ್ರರು ಭಾರತದೊಳಕ್ಕೆ ನುಸುಳಲು ಸನ್ನದ್ಧರಾಗಿದ್ದಾರೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ ತಿಳಿಸಿದ್ದಾರೆ.

ಕಳೆದ ಫೆಬ್ರವರಿ.14 ರಂದು ಪಾಕಿಸ್ತಾನ ಬೆಂಬಲಿತ ಉಗ್ರರು ಪುಲ್ವಾಮದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಮೂಲಕ ಸುಮಾರು 44ಕ್ಕೂ ಹೆಚ್ಚು ಜನ ಸೈನಿಕರ ಸಾವಿಗೆ ಕಾರಣರಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತ ವಾಯುಸೇನೆ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ ಬಾಗದಲ್ಲಿರುವ ಬಾಲಾಕೋಟ್ ಎಂಬ ಪ್ರದೇಶದಲ್ಲಿ ವಾಯು ದಾಳಿ ಸಂಘಟಿಸಿತ್ತು.

ಈ ದಾಳಿಯಲ್ಲಿ ಜೈಶ್-ಎ-ಮಹಮ್ಮದ್ ಉಗ್ರ ಸಂಘಟನೆಯ ಉಗ್ರಗಾಮಿಗಳ ಸುಸಜ್ಜಿತ ಕ್ಯಾಂಪ್ ಅನ್ನು ಸಂಪೂರ್ಣ ನಾಶ ಮಾಡಲಾಗಿತ್ತು. ಆದರೆ, ಈ ಬಾಲಾಕೋಟ್​ ಉಗ್ರರ ಕ್ಯಾಂಪ್ ಮತ್ತೆ ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿದೆ ಎಂದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇಂದು ತಮಿಳುನಾಡಿನಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ಮಾಹಿತಿ ನೀಡಿದ್ದಾರೆ.

ವಾಯು ದಾಳಿಯಲ್ಲಿ ಭಾರತದ ವಿಂಗ್ ಕಮಾಂಡರ್​ ಅಭಿನಂದನ್​ ಪಾಕಿಸ್ತಾನದ​ ಎಫ್​-16 ವಿಮಾನವನ್ನು ಹೊಡೆದುರುಳಿಸಿದ್ದರು. ಈ ಸಂದರ್ಭದಲ್ಲಿ ಅವರ ವಿಮಾನವೂ ಅಪಘಾತವಾಗಿ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಸೇನೆ ಕೈಗೆ ಸಿಕ್ಕಿ ಬಂಧಿಯಾಗಿದ್ದರು. ನಂತರ ಇವರನ್ನು ಅಂತಾರಾಷ್ಟ್ರೀಯ ಜಿನೇವಾ ಒಪ್ಪಂದದ ಸಹಾಯದಿಂದ ದೇಶಕ್ಕೆ ಸುರಕ್ಷಿತವಾಗಿ ಮರಳಿ ಕರೆತರಲಾಗಿತ್ತು.

ಇದನ್ನೂ ಓದಿ ; ಬಾಲಾಕೋಟ್ ವಾಯುದಾಳಿ, ಉಗ್ರರನ್ನು ಸದೆಬಡಿದ ಕಾರ್ಯಾಚರಣೆ ಬಗ್ಗೆ ನ್ಯೂಸ್​​-18 ಜೊತೆ ಮಿರಜ್​ ಪೈಲೆಟ್​ಗಳ ಮಾತು

First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading