ನವಜೋತ್​ ಸಿಧು ತಲೆ ಕತ್ತರಿಸಿದವರಿಗೆ 5 ಲಕ್ಷ ಬಹುಮಾನ ಘೋಷಿಸಿದ ಬಜರಂಗದಳ


Updated:August 21, 2018, 9:11 AM IST
ನವಜೋತ್​ ಸಿಧು ತಲೆ ಕತ್ತರಿಸಿದವರಿಗೆ 5 ಲಕ್ಷ ಬಹುಮಾನ ಘೋಷಿಸಿದ ಬಜರಂಗದಳ

Updated: August 21, 2018, 9:11 AM IST
ನ್ಯೂಸ್​ 18 ಕನ್ನಡ

ಚಂಡೀಗಡ(ಆ.21): ಪಂಜಾಬ್​​ ಸಚಿವ ನವಜೋತ್​ ಸಿಂಗ್​ ಸಿಧುರವರ ತಲೆ ಕತ್ತರಿಸಿ ತಂದವರಿಗೆ ಬರೋಬ್ಬರಿ 5 ಲಕ್ಷ ಬಹುಮಅನ ನೀಡಲಾಗುವುದೆಂದು ಆಗ್ರಾದ ಬಜರಂಗದಳ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್​ ಜಾಟ್​ ಘೋಷಿಸಿದ್ದಾರೆ.

ಶನಿವಾರದಂದು ಪಾಕಿಸ್ತಾನದಲ್ಲಿ ನಡೆದಿದ್ದ ಪ್ರಧಾನಿ ಇಮ್ರಾನ್​ ಖಾನ್​ರವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನವಜೋತ್​ ಸಿದು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್​ ಜಾವೇದ್​ರನ್ನು ಆತ್ಮೀಯವಾಗಿ ಆಲಂಗಿಸಿದ್ದರು. ಇದೇ ವಿಚಾರವಾಗಿ ಚಕಾರವೆತ್ತಿರುವ ಬಜರಂಗದಳ "ಪಾಕ್​ ಪ್ರಧಾನಿಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಧು ಪಾಲ್ಗೊಂಡಿದ್ದು ನಾಚಿಕೆಗೇಡಿನ ವಿಚಾರ. ಹೀಗಾಗಿ ಅವರನ್ನು ಈ ಕೂಡಲೇ ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು" ಎಂದು ಆಗ್ರಹಿಸಿದ್ದಾರೆ.ಇದೇ ವಿಚಾರವಾಗಿ ಸಂಜಯ್​ ಜಾಟ್​ರವರು ಮಾತನಾಡಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ಇದರಲ್ಲಿ ನವಜೋತ್​ ಸಿಧು ಆಗ್ರಾಗೆ ಭೇಟಿ ನೀಡಿದರೆ ಬೂಟುಗಳ ಮಾಲೆಯನ್ನು ಅರ್ಪಿಸಲಾಗುವುದು ಎಂದಿದ್ದಾರೆ. ಅಲ್ಲದೇ ಸಿಧು ತಲೆ ಕತ್ತರಿಸಿ ತಂದವರಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

ಈ ವಿಡಿಯೋ ಕುರಿತಾಗಿ ಮಾತನಾಡಿದ ಪೊಲೀಸರು "ನಾವಿನ್ನೂ ವಿಡಿಯೋ ನೋಡಿಲ್ಲ. ಇದು ಸಿಕ್ಕ ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.
Loading...

ಸಿಧು ವಿರುದ್ಧ ದೂರು ದಾಖಲು: 

ಇನ್ನು ಸಿಧುವರ ವಿರುದ್ಧ ಈಗಾಗಲೇ ಮುಜಫ್ಫರ್​ನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ಸುಧೀರ್​ ಕುಮಾರ್​ ಓಝಾ ಎಂಬುವವರು ದೂರು ದಾಖಲಿಸಿದ್ದಾರೆ. ಜಿಲ್ಲಾ ಮುಖ್ಯ ನ್ಯಾಯಾಧೀಶ ಹರಿಪ್ರಸಾದ್​ ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್​ 24ಕ್ಕೆ ನಿಗದಿಪಡಿಸಿದ್ದಾರೆ.

"ಸೇನಾ ಮುಖ್ಯಸ್ಥರ ಆದೇಶದಲ್ಲಿ ಭಾರತೀಯ ಗಡಿಯಲ್ಲಿ ಭಅರತೀಯ ಯೋಧರ ಹತ್ಯೆಯಾಗುತ್ತಿದೆ. ಈಗ ಅವರನ್ನು ಆಲಂಗಿಸಿಕೊಳ್ಳುವ ಮೂಲಕ ಹುತಾತ್ಮರಅದ ಭಾರತೀಯ ಯೋಧರ ಕುಟುಂಬಕ್ಕೆ ಅವಮಾನ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ಗಂಭೀರವಅಗಿ ಪರಿಗಣಿಸಿ ಬಂಧನಕ್ಕೆ ಆದೇಶಿಸಬೇಕು" ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626