Sai Pallavi: ಸಾಯಿ ಪಲ್ಲವಿಯ ವಿವಾದಾತ್ಮಕ ಹೇಳಿಕೆ ವಿರುದ್ಧ ಬಜರಂಗದಳದ ಕಾರ್ಯಕರ್ತನಿಂದ ದೂರು

ತಾನು ಆಯ್ತು, ತನ್ನ ಸಿನಿಮಾ ಆಯ್ತು ಅಂತಾ ಇದ್ದ, ಯುವಕರ ಕ್ರಶ್​​ ಪ್ರಖ್ಯಾತ ನಟಿ ಸಾಯಿ ಪಲ್ಲವಿ ಅವರ ಹೆಸರು ಈದೀಗ ವಿವಾದವೊಂದರಲ್ಲಿ ತಳುಕು ಹಾಕಿಕೊಂಡಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾಯಿ ಪಲ್ಲವಿ ವಿರುದ್ಧ ಹಲವಾರು ಟೀಕೆ, ಟಿಪ್ಪಣಿ, ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಸಾಯಿ ಪಲ್ಲವಿ

ಸಾಯಿ ಪಲ್ಲವಿ

  • Share this:
ಹೈದರಾಬಾದ್: ತಾನು ಆಯ್ತು, ತನ್ನ ಸಿನಿಮಾ ಆಯ್ತು ಅಂತಾ ಇದ್ದ, ಯುವಕರ ಕ್ರಶ್​​ ಆಗಿದ್ದ ಪ್ರಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಅವರ ಹೆಸರು ಈದೀಗ ವಿವಾದವೊಂದರಲ್ಲಿ ತಳುಕು ಹಾಕಿಕೊಂಡಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ (Kashmir Pnadit's) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾಯಿ ಪಲ್ಲವಿ ವಿರುದ್ಧ ಹಲವಾರು ಟೀಕೆ, ಟಿಪ್ಪಣಿ, ಆಕ್ರೋಶಗಳು ವ್ಯಕ್ತವಾಗುತ್ತಿವೆ. ಕಾಶ್ಮೀರಿ ಪಂಡಿತರ ಹತ್ಯೆಗೆ ಗೋವು ಕಳ್ಳಸಾಗಾಣಿಕೆಯನ್ನು ಹೋಲಿಸಿ ಮಾತನಾಡಿರುವ ಸಾಯಿ ಪಲ್ಲವಿ ಅವರ ವಿರುದ್ಧ ಭಜರಂಗ ದಳದ ನಾಯಕರು (Bajrang Dal activist) ಸಹ ದೂರು ನೀಡಿದ್ದಾರೆ.

ಸಾಯಿ ಪಲ್ಲವಿ ವಿರುದ್ಧ ದೂರು
ಬಜರಂಗದಳದ ಕಾರ್ಯಕರ್ತರೊಬ್ಬರು ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನಟಿ ವಿರುದ್ಧ ದೂರು ನೀಡಿದ್ದಾರೆ. ಬಜರಂಗದಳದ ಕಾರ್ಯಕರ್ತ ಅಖಿಲ್ ಎಂಬುವವರು ತಮ್ಮ ದೂರಿನಲ್ಲಿ ಸಾಯಿ ಪಲ್ಲವಿ ಇತ್ತೀಚಿನ ಸಂದರ್ಶನವೊಂದರಲ್ಲಿ ಗೋ ರಕ್ಷಕರ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಬಜರಂಗದಳದ ಕಾರ್ಯಕರ್ತ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಲ್ತಾನ್ ಬಜಾರ್ ಇನ್ಸ್‌ಪೆಕ್ಟರ್ ಪಿ. ಪದ್ಮಾ "ನಾವು ವೀಡಿಯೊವನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಕಾನೂನು ಅಭಿಪ್ರಾಯವನ್ನು ಪರಿಗಣಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:  Sonia Gandhi: ಕೋವಿಡ್‌ ಬೆನ್ನಲ್ಲೇ ಸೋನಿಯಾ ಗಾಂಧಿಗೆ ಫಂಗಲ್‌ ಸೋಂಕು! ಎಐಸಿಸಿ ಅಧ್ಯಕ್ಷೆಗೆ ಮುಂದುವರೆದ ಚಿಕಿತ್ಸೆ

ನಟಿ ಸಾಯಿಪಲ್ಲವಿಯವರ ಅಭಿಪ್ರಾಯ ಕಾಶ್ಮೀರಿ ಉಗ್ರಗಾಮಿಗಳೊಂದಿಗೆ ಹೋಲಿಸಿದ ಪ್ರಾಣಿ ಪ್ರಿಯರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರುದಾರರು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಬಿಜೆಪಿ ವಕ್ತಾರ ಎನ್.ವಿ.ಸುಭಾಷ್ ಮಾತನಾಡಿ, ‘ದಿ ಕಾಶ್ಮೀರ್ ಫೈಲ್ಸ್’ ಕಾಶ್ಮೀರ ಪಂಡಿತರ ಮೇಲಿನ ನರಮೇಧದ ಕುರಿತಾಗಿದೆ ಮತ್ತು ಚಿತ್ರರಂಗದ ನಿರ್ದೇಶಕರ ಸೂಚನೆಯಂತೆ ನಟಿಸುವುದನ್ನು ಹೊರತುಪಡಿಸಿ ನಟಿಗೆ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಸಾಯಿ ಪಲ್ಲವಿ ವಿರುದ್ಧ ಗುಡುಗಿದ್ದಾರೆ.

ಪಲ್ಲವಿಯವರ ಹೇಳಿಕೆಯನ್ನು ಖಂಡಿಸಿದ ಸುಭಾಷ್, ಭಾರತದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ ಮತ್ತು ಅವರಿಗೆ ಈ ವಿಷಯದ ಬಗ್ಗೆ ಗೊತ್ತೇ ಇಲ್ಲ ಎಂದು ತೋರುತ್ತದೆ ಎಂದು ನಟಿಯ ಹೇಳಿಕೆಯನ್ನು ಖಂಡಿಸಿದ್ದಾರೆ.

ಏನಿದು ವಿವಾದ?
ತಮ್ಮ ಮುಂಬರುವ ಹೊಸ ಸಿನಿಮಾ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ ನಿಮಿತ್ತ ಬ್ಯುಸಿಯಾಗಿರುವ ಸಾಯಿಪಲ್ಲವಿ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ತೆಲುಗು ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಸಾಯಿ ಪಲ್ಲವಿ ಪ್ರಶ್ನಿಸಿದ್ದರು. ಸಾಯಿ ಪಲ್ಲವಿಯವರ ಈ ಹೇಳಿಕೆ ಸದ್ಯ ಗೋ ರಕ್ಷಕರನ್ನು ರೊಚ್ಚಿಗೆಬ್ಬಿಸಿದ್ದು, ಹಿಂದೂಗಳ ಕೆಂಗಣ್ಣಿಗೆ ನಟಿಮಣಿ ಗುರಿಯಾಗಿದ್ದಾರೆ.

ಸಂದರ್ಶನದಲ್ಲಿ ಸಾಯಿ ಪಲ್ಲವಿ ಹೇಳಿದ್ದೇನು?
ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಸಾಯಿ ಪಲ್ಲವಿ, "ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ಕಾಶ್ಮೀರ ಫೈಲ್ಸ್ ಸಿನಿಮಾ ತೋರಿಸಿದೆ.

ಇದನ್ನೂ ಓದಿ:  Sai Pallavi ನಟಿ ಸಾಯಿಪಲ್ಲವಿ ವಿರುದ್ಧ ಎಲ್ಲಾ ಪೊಲೀಸ್ ಸ್ಟೇಷನ್​ನಲ್ಲಿ ದೂರು ಕೊಡಿ: ಕರೆ ನೀಡಿದ ಬಿಜೆಪಿ ಶಾಸಕ

ನೀವು ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ಪರಿಗಣಿಸುತ್ತಿದ್ದರೆ, ಇತ್ತೀಚೆಗಷ್ಟೇ ಹಸುವನ್ನು ವಾಹನದಲ್ಲಿ ಓರ್ವ ವ್ಯಕ್ತಿ ಕರೆದೊಯ್ಯುತ್ತಿದ್ದ. ಆತ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಹತ್ಯೆ ಮಾಡಲಾಗಿತ್ತು. ಆ ವ್ಯಕ್ತಿಯನ್ನು ಹತ್ಯೆ ಮಾಡಿದ ಬಳಿಕ ದಾಳಿ ಮಾಡಿದವರು ‘ಜೈ ಶ್ರೀರಾಮ್’ ಎಂದು ಕೂಗಿದರು. ಧಾರ್ಮಿಕವಾಗಿ ನೋಡುವುದಾದರೆ ಈ ಎರಡೂ ಘಟನೆಗಳು ಒಂದೇ ಅಲ್ಲವೇ? ವ್ಯತ್ಯಾಸ ಎಲ್ಲಿದೆ?’’ ನಾವು ಒಳ್ಳೆಯ ಮನುಷ್ಯರಾಗಬೇಕು. ನಾವು ಒಳ್ಳೆಯವರಾಗಿದ್ದರೆ ನಾವು ಇತರರನ್ನು ನೋಯಿಸುವುದಿಲ್ಲ ಎಂದು ಸಾಯಿ ಪಲ್ಲವಿ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಅನೇಕ ನೆಟಿಗ್ಗರು ನಟಿಯ ವಿರುದ್ಧ ಹರಿಹಾಯ್ದಿದ್ದಾರೆ.
Published by:Ashwini Prabhu
First published: