news18-kannada Updated:February 25, 2021, 3:45 PM IST
ಸಾಂದರ್ಭಿಕ ಚಿತ್ರ
ಮುಂಬೈ (ಫೆ. 25): ಮಹಾರಾಷ್ಟ್ರದ ಮುಂಬೈನಲ್ಲಿ 70 ವರ್ಷದ ಮಹಿಳೆಯೊಬ್ಬರು ತಮ್ಮ ಮಗನ ಶವದ ಜೊತೆಗೆ ಇಡೀ ರಾತ್ರಿಯನ್ನು ಕಳೆದಿದ್ದಾರೆ. ಮಂಗಳವಾರ ರಾತ್ರಿ ಆಕೆಯ ಮಗ ಬಾತ್ ರೂಮಿನಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದ. ಆತನ ತಲೆಗೆ ಗಂಭೀರವಾದ ಗಾಯವಾಗಿತ್ತು. ಗಾಯಗೊಂಡಿದ್ದ ಮಗನನ್ನು ರಾತ್ರಿ ಆಸ್ಪತ್ರೆಗೆ ಸೇರಿಸಲಾಗದೆ ಬೆಳಗಾಗುವುದನ್ನೇ ಕಾಯುತ್ತಾ ಕುಳಿತಿದ್ದ ಆತನ ತಾಯಿಗೆ ಆತ ಸಾವನ್ನಪ್ಪಿರುವ ವಿಷಯವೇ ಗೊತ್ತಿರಲಿಲ್ಲ. ಬೆಳಗ್ಗೆ ಮಗನನ್ನು ಆಸ್ಪತ್ರೆಗೆ ಸೇರಿಸಬೇಕೆಂದು ರಾತ್ರಿಯಿಡೀ ಆತನ ದೇಹದ ಪಕ್ಕದಲ್ಲಿಯೇ ಕುಳಿತಿದ್ದ ಆಕೆಗೆ ಮಾರನೇ ದಿನ ಮಗ ಸತ್ತಿರುವ ವಿಷಯ ತಿಳಿದು ಆಘಾತವಾಗಿದೆ.
42 ವರ್ಷದ ವ್ಯಕ್ತಿ ಮೇಘಾಲಯ ಮೂಲದ ವ್ಯಕ್ತಿ ಸಾವನ್ನಪ್ಪಿದ್ದು, ಕುಡಿತದ ಮತ್ತಿನಲ್ಲಿ ಮಂಗಳವಾರ ರಾತ್ರಿ ತನ್ನ ಮನೆಯ ಬಾತ್ ರೂಮ್ನಲ್ಲಿ ಸೋಮವಾರ ಬಿದ್ದಿದ್ದ. ಬಳಿಕ ಮಗ ಕೆಳಗೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಆತನ ತಾಯಿ ಆತನನ್ನು ಎಳೆದುಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದ್ದರು. ಪ್ರಜ್ಞಾಹೀನವಾಗಿ ಬಿದ್ದಿದ್ದ ಆತನ ಗಾಯಕ್ಕೆ ಅರಿಶಿನ ಪುಡಿ ಹಾಕಿ, ಬ್ಯಾಂಡೇಜ್ ಕಟ್ಟಿದ್ದರು. ಬೆಳಗಾಗುತ್ತಿದ್ದಂತೆ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಕಾಯುತ್ತಿದ್ದ ಆಕೆಗೆ ಬೆಳಗ್ಗೆ ಮಗ ಕಣ್ಣು ಬಿಡದಿದ್ದಾಗ ಗಾಬರಿಯಾಗಿತ್ತು.
ಇದನ್ನೂ ಓದಿ: ಸಿಂಗಾಪುರದಲ್ಲಿ ಮನೆ ಕೆಲಸದವಳಿಗೆ ಚಿತ್ರಹಿಂಸೆ ನೀಡಿ ಕೊಂದ ಭಾರತೀಯ ಮಹಿಳೆ
ಬೆಳಗಾದರೂ ಮಗ ಕಣ್ಣು ಬಿಡದಿದ್ದಕ್ಕೆ ಗಾಬರಿಯಾದ ಆಕೆ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದ ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಲಾಕ್ಡೌನ್ ಬಳಿಕ ಕೆಲಸ ಕಳೆದುಕೊಂಡಿದ್ದ ಆ ವ್ಯಕ್ತಿ ಖಿನ್ನತೆಗೊಳಗಾಗಿದ್ದ. ಅದೇ ಕಾರಣಕ್ಕೆ ಕುಡಿತದ ಚಟಕ್ಕೆ ತುತ್ತಾಗಿದ್ದ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಆತನ ಕುಡಿದು, ಬಿದ್ದು ಸಾವನ್ನಪ್ಪಿದ್ದಾನೆ. ಈ ಸಾವನ್ನು
'ಆಕಸ್ಮಿಕ ಸಾವು' ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published by:
Sushma Chakre
First published:
February 25, 2021, 3:45 PM IST