Badlaav Humse Hai: ದೇಶಕ್ಕಾಗಿ ಬದಲಾವಣೆ ತಂದ ಸಾಧಕರಿಗಿಂದು ನೆಟ್​ವರ್ಕ್​ 18 ಕಡೆಯಿಂದ ಸನ್ಮಾನ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೆಟ್​ವರ್ಕ್​ 18 ಹಾಗೂ ಎಯು ಸ್ಮಾಲ್​ ಫಿನಾನ್ಸ್​ ಬ್ಯಾಂಕ್​ (AU Small Finance Bank) ಸಹಯೋಗತ್ವದಲ್ಲಿ ಈ ಬದ್ಲಾವ್​ ಹಮ್​ಸೆ ಹೈ ಎಂಬ ಕಾರ್ಯಕ್ರಮ ನಡೆಸುತ್ತಿದೆ. ಸಮಾಜಕ್ಕಾಗಿ, ದೇಶಕ್ಕಾಗಿ ಹೊಸ ಹೊಸ ಬದಲಾವಣೆಯನ್ನು ತಂದ 20 ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುತ್ತಿದೆ. 

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Mumbai, India
  • Share this:

ಎಲ್ಲರೂ ಮಾಡಲಾಗದ ಸಾಧನೆ (Achievement) ಯನ್ನು ಮಾಡಿದವರನ್ನು ಗುರುತಿಸುವುದು ಒಂದು ಕಲೆ ಎಂದರೆ ತಪ್ಪಾಗಲ್ಲ. ನಿಮ್ಮ ನ್ಯೂಸ್​ 18 (News 18) ಮೊದಲಿನಿಂದಲೂ ಈ ರೀತಿಯ ಕೆಲಸಗಳನ್ನು  ಮಾಡಿಕೊಂಡು ಬಂದಿದೆ. ಈಗಲೂ ಕೂಡ ಬದ್ಲಾವ್​ ಹಮ್​ಸೆ ಹೈ (Badlaav Humse Hai) ಎಂಬ ಕಾರ್ಯಕ್ರಮ ನಡೆಸಿ ಸಮಾಜದ ದುರ್ಬಲ ಹಾಗೂ ನಿರ್ಲಕ್ಷಿತರ ಜೀವನಮಟ್ಟವನ್ನು ಸುಧಾರಿಸಲು ಹಗಲಿರುಳು ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ನೆಟ್​ವರ್ಕ್​ 18 ಹಾಗೂ ಎಯು ಸ್ಮಾಲ್​ ಫಿನಾನ್ಸ್​ ಬ್ಯಾಂಕ್​ (AU Small Finance Bank) ಸಹಯೋಗತ್ವದಲ್ಲಿ ಈ ಬದ್ಲಾವ್​ ಹಮ್​ಸೆ ಹೈ ಎಂಬ ಕಾರ್ಯಕ್ರಮ ನಡೆಸುತ್ತಿದೆ. ಸಮಾಜಕ್ಕಾಗಿ, ದೇಶಕ್ಕಾಗಿ ಹೊಸ ಹೊಸ ಬದಲಾವಣೆಯನ್ನು ತಂದ 20 ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುತ್ತಿದೆ. 


20 ಸಾಧಕರಿಗೆ ಗೌರವ!


ಸಮಾಜದ ದುರ್ಬಲ ಹಾಗೂ ನಿರ್ಲಕ್ಷಿತರ ಜೀವನಮಟ್ಟವನ್ನು ಸುಧಾರಿಸಲು ಹಗಲಿರುಳು ಕೆಲಸ ಮಾಡುತ್ತಿರುವ ಬದಲಾವಣೆಯ ಹರಿಕಾರರ ಯಶೋಗಾಥೆಗಳನ್ನು ಚಿತ್ರಿಸಲು ಈ ತಂಡಗಳು ಆರು ತಿಂಗಳ ಅವಧಿಯಲ್ಲಿ ದೇಶದ ವಿವಿಧೆಡೆಗೆ ಭೇಟಿ ನೀಡಿವೆ. ಶಿಕ್ಷಣದಿಂದ ಉದ್ಯೋಗದವರೆಗೆ, ಸ್ವಯಂ-ಸುಸ್ಥಿರ ಉಪಕ್ರಮಗಳೊಂದಿಗೆ ಜನರನ್ನು ಸಬಲಗೊಳಿಸಲು ಉಚಿತ ವೈದ್ಯಕೀಯ ಸಹಾಯ ಒದಗಿಸುವುದು, ಹೀಗೆ ಈ ಅಭಿಯಾನವು ಸಮುದಾಯದಲ್ಲಿ ಬೇರು ಬಿಟ್ಟಿರುವ ಅತ್ಯಂತ ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ.


ಮುಂಬೈನಲ್ಲಿ ಗ್ರ್ಯಾಂಡ್​ ಫಿನಾಲೆ ಈವೆಂಟ್​!


ಈ ಹೀರೊಗಳ ಶ್ಲಾಘನೀಯ ಕೊಡುಗೆಗಳನ್ನು ಸಂಭ್ರಮಿಸಲು, ಗೌರವಿಸಲು ಡಿಸೆಂಬರ್ 16, 2022ರಂದು ಟ್ರಿಡೆಂಟ್, BKC ಮುಂಬೈನಲ್ಲಿ ಗ್ರ್ಯಾಂಡ್ ಫಿನಾಲೆ ಈವೆಂಟ್ ಅನ್ನು ಆಯೋಜಿಸಲಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಕೌಶಲ ಮತ್ತು ವಾಣಿಜ್ಯೋದ್ಯಮ ಹಾಗೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀ ಮಂಗಲ್ ಪ್ರಭಾತ್ ಲೋಧಾ, ಇನ್ಫೋಸಿಸ್‌ ಸ್ಥಾಪಕರಾದ ಶ್ರೀ ನಾರಾಯಣ ಕೆ ಮೂರ್ತಿ ಅವರು ಭಾಗಿಯಾಗಲಿದ್ದಾರೆ.


ಜೊತೆಗೆ ಖ್ಯಾತ ಸಾಮಾಜಿಕ ಕಾರ್ಯಕರ್ತರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೈಲಾಶ್ ಸತ್ಯಾರ್ಥಿ, ನಟಿ ದಿಯಾ ಮಿರ್ಜಾ ಸೇರಿದಂತೆ ಭಾರತದ ರಾಜಕೀಯ, ಉದ್ಯಮ ಹಾಗೂ ಸಾಮಾಜಿಕ ವಲಯದಿಂದ ಇನ್ನೂ ಹಲವು ಗಣ್ಯರು ಈ ಸಂಭ್ರಮಾಚರಣೆಯ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ.


ಇದನ್ನೂ ಓದಿ: ಇನ್ಫೋಸಿಸ್ ಮುಂದಿನ ಚೇರ್ಮನ್ ಯಾರು? ಮಾಹಿತಿ ಹಂಚಿಕೊಂಡ ನಂದನ್ ನಿಲೇಕಣಿ!


ಈ ಗ್ರ್ಯಾಂಡ್​ ಫಿನಾಲೆ ಬಗ್ಗೆ AU Small Finance Bank ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಉತ್ತಮ್ ಟಿಬ್ರೆವಾಲ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. “ನಮ್ಮ ದೇಶದಲ್ಲಿ ಬ್ಯಾಂಕಿಂಗ್ ಅನ್ನು ನಿರ್ವಹಿಸುವ ವಿಧಾನದಲ್ಲಿ ಬದಲಾವಣೆಯನ್ನು ಉಂಟು  ಮಾಡುವುದು AU Small Finance Bank ನ ಮುಖ್ಯ ತತ್ವವಾಗಿದೆ" ಎಂದು ಅವರು ಹೇಳಿದರು.


ಜೊತೆಗೆ "ನಮ್ಮ ಉತ್ಪನ್ನ, ಸೇವೆಗಳು ಮತ್ತು ಕೊಡುಗೆಗಳ ಮೂಲಕ ನಾವು ದೇಶದಾದ್ಯಂತದ 3.3 ಮಿಲಿಯನ್ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಿದ್ದೇವೆ. ಈ ಬದಲಾವಣೆಯ ಹರಿಕಾರರ (ಚೇಂಜ್‌ಮೇಕರ್ಸ್) ಜತೆಗಿನ ಸಹಯೋಗದೊಂದಿಗೆ, ಈ ಉಪಕ್ರಮವು ಅದೇ ತತ್ವದ ಒಂದು ಅದ್ಭುತ ವಿಸ್ತರಣೆಯಾಗಿದೆ. ಸಮಾಜದಾದ್ಯಂತ ಸದೃಢ, ಸಕಾರಾತ್ಮಕ ಮತ್ತು ಪರಿಣಾಮಕಾರಿ ಬದಲಾವಣೆಯನ್ನು ಉಂಟುಮಾಡುತ್ತಿರುವ ವಿಶಿಷ್ಟ ಚೇಂಜ್‌ಮೇಕರ್‌ಗಳನ್ನು ನಾವೆಲ್ಲರೂ ಗುರುತಿಸುವ ಮತ್ತು ಸಂಭ್ರಮಿಸುವ ಸಮಯ ಇದಾಗಿದೆ” ಎಂದಿದ್ದಾರೆ.


ಈ ಉಪಕ್ರಮದಲ್ಲಿನ ನಿರಂತರ ಪಾಲುದಾರಿಕೆ ಮತ್ತು ಸಹಕಾರಕ್ಕಾಗಿ ಶ್ರೀ ಉತ್ತಮ್ ಟಿಬ್ರೆವಾಲ್ ಅವರು Network18 ಗೆ ತಮ್ಮ ಕೃತಜ್ಞತೆಯನ್ನು ಸಹ ಸಲ್ಲಿಸಿದ್ದಾರೆ.


ಇದು ಚೇಂಜ್‌ಮೇಕರ್‌ಗಳ ಯಶೋಗಾಥೆ!


ಶ್ರೀ ಎಸ್. ಶಿವಕುಮಾರ್, COO, ಬ್ರ್ಯಾಂಡೆಡ್ ಕಂಟೆಂಟ್, Network 18 ಇವರು ಸಹ ಈ ಅಭಿಯಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಈ ಉಪಕ್ರಮದ ಭಾಗವಾಗಲು Network18 ಹರ್ಷಿಸುತ್ತಿದ್ದು, ಅದರಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಿಂದ ಬಂದಿರುವ ಚೇಂಜ್‌ಮೇಕರ್‌ಗಳ ಯಶೋಗಾಥೆಯನ್ನು ಮುಖ್ಯವಾಗಿ ತೋರಿಸಲಿದ್ದೇವೆ ಹಾಗೂ ಸಂಬಂಧಿಸಿದ ಸಮಸ್ಯೆಗಳ ಚಿತ್ರಣವನ್ನು ಕಟ್ಟಿಕೊಡುತ್ತೇವೆ" ಎಂದಿದ್ದಾರೆ.


ಸಂಜೆ 6.30ಕ್ಕೆ ನೇರ ಪ್ರಸಾರ!


ಈ ಚೇಂಜ್‌ಮೇಕರ್‌ಗಳನ್ನು ಸಂಭ್ರಮಿಸಲು ಡಿಸೆಂಬರ್‌ 16 ರಂದು ಸಂಜೆ 6.30 ಕ್ಕೆ ಸೋಷಿಯಲ್ ಮೀಡಿಯಾ ಚಾನೆಲ್‌ಗಳಲ್ಲಿ ಈ ಈವೆಂಟ್‌ನ ನೇರಪ್ರಸಾರವಾಗಲಿದೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಜನಾದೇಶವನ್ನು ನಿರ್ಮಿಸಲು ದಾಪುಗಾಲು ಹಾಕಲು ಪ್ರತಿಜ್ಞೆ ಮಾಡೋಣ.


AU Small Finance Bank ಬಗ್ಗೆ ಮತ್ತಷ್ಟು ಮಾಹಿತಿ!


AU Small Finance Bank Limited (AU SFB) ಒಂದು ಶೆಡ್ಯೂಲ್ಡ್ ಕಮರ್ಶಿಯಲ್ ಬ್ಯಾಂಕ್ ಆಗಿದ್ದು, Fortune India 500 ಕಂಪೆನಿಯಾಗಿದೆ. ದೇಶದಲ್ಲಿರುವ ಅತಿ ದೊಡ್ಡ ಸ್ಮಾಲ್ ಫೈನಾನ್ಸ್ ಬ್ಯಾಂಕ್ (SFB) ಆಗಿದೆ. ಇದು ರಾಜಸ್ತಾನದ ಒಳನಾಡಿನಿಂದ ತನ್ನ ಪ್ರಯಾಣ ಆರಂಭಿಸಿದ್ದು, ಇಂದು AU SFB ಯು ಗ್ರಾಮೀಣ ಮತ್ತು ಅರೆ-ನಗರ ಮಾರುಕಟ್ಟೆಗಳನ್ನು ಆಳವಾಗಿ ಅರ್ಥ ಮಾಡಿಕೊಂಡಿದೆ.27+ ವರ್ಷಗಳ ಪರಂಪರೆಯೊಂದಿಗೆ ರಿಟೇಲ್ ಕೇಂದ್ರೀಕೃತ ಮತ್ತು ಗ್ರಾಹಕ-ಕೇಂದ್ರಿತ ಸಂಸ್ಥೆಯಾಗಿ, 2017ರ ಏಪ್ರಿಲ್‌ನಲ್ಲಿ AU ತನ್ನ ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಆರಂಭಿಸಿತು.


ಇದನ್ನೂ ಓದಿ: ಮುಂದಿನ ವರ್ಷ 1 ತಿಂಗಳು ಬ್ಯಾಂಕ್​ ರಜಾ! ಯಾವ್ಯಾವ ದಿನ ಅಂತ ಇಲ್ಲಿದೆ ನೋಡಿ ಕಂಪ್ಲೀಟ್​ ಡೀಟೆಲ್ಸ್​


ಬ್ಯಾಂಕಿಂಗ್ ಸೌಲಭ್ಯವಿರುವ 1,000ಕ್ಕಿಂತಲೂ ಹೆಚ್ಚು ಸ್ಥಳಗಳಲ್ಲಿ ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅಲ್ಲದೆ, ಇದು 28,677 ಉದ್ಯೋಗಿಗಳನ್ನು ಹೊಂದಿದ್ದು, 20 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 33.3 ಲಕ್ಷ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. 2022ರ ಸೆಪ್ಟೆಂಬರ್ 30ರ ಪ್ರಕಾರ ಈ ಬ್ಯಾಂಕ್ ₹10,114 ಕೋಟಿ ಶೇರುದಾರರ ನಿಧಿ, ₹58,335 ಕೋಟಿ ಠೇವಣಿ ಮತ್ತು ₹52,452 ಕೋಟಿ ನಿವ್ವಳ ಠೇವಣಿಯನ್ನು ಹೊಂದಿದೆ.

Published by:ವಾಸುದೇವ್ ಎಂ
First published: