HOME » NEWS » National-international » BADAUN GANGRAPE VICTIM SHOULD NOT STEPED OUT IN EVENING SAYS NCW MEMBER SESR

Badaun Gangrape: ಸಂಜೆ ವೇಳೆ ಸಂತ್ರಸ್ತೆ ಮನೆಯಿಂದ ಹೊರ ಹೋಗಬಾರದಿತ್ತು; ಮಹಿಳಾ ಆಯೋಗ ಸದಸ್ಯೆ

ಸಂತ್ರಸ್ತೆ ಸಂಜೆ ಏಕಾಂಗಿಯಾಗಿ ಹೊರಗೆ ಹೋಗದಿದ್ದರೆ ಅಥವಾ ಕುಟುಂಬ ಸದಸ್ಯರೊಂದಿಗೆ ಹೋಗಿದ್ದರೆ, ಆಕೆಯನ್ನು ರಕ್ಷಿಸಬಹುದಿತ್ತು

news18-kannada
Updated:January 7, 2021, 8:14 PM IST
Badaun Gangrape: ಸಂಜೆ ವೇಳೆ ಸಂತ್ರಸ್ತೆ ಮನೆಯಿಂದ ಹೊರ ಹೋಗಬಾರದಿತ್ತು; ಮಹಿಳಾ ಆಯೋಗ ಸದಸ್ಯೆ
ಮಹಿಳಾ ಆಯೋಗ ಸದಸ್ಯೆ
  • Share this:
ಲಕ್ನೋ (ಜ. 7): ಉತ್ತರ ಪ್ರದೇಶದ ಬುಡಾನ್​ನಲ್ಲಿ ಅರ್ಚಕ ಮತ್ತು ಇಬ್ಬರು ಸಹಚರರಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆಯ ಕುಟುಂಬವನ್ನು ರಾಷ್ಟ್ರೀಯ ಮಹಿಳಾ ಆಯೋಗ (ಎನ್​ಸಿಡಬ್ಲ್ಯೂ) ಸದಸ್ಯರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಬಳಿಕ ಮಾತನಾಡಿರುವ ಅವರು, ಮಹಿಳೆ ಸಂಜೆ ಸಮಯದಲ್ಲಿ ಮನೆಯಿಂದ ಹೊರಬರದಿದ್ದರೆ, ಇಂತಹ ಕೃತ್ಯ ನಡೆಯುತ್ತಲೇ ಇರಲಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಸಂತ್ರಸ್ತ ಕುಟುಂಬವನ್ನು ಭೇಟಿಯಾಗುವಂತೆ ಎನ್​ಸಿಡಬ್ಲ್ಯೂ ಸದಸ್ಯೆ ಚಂದ್ರಮುಖಿ ದೇವಿ ಮತ್ತಿಬ್ಬರ ಸದಸ್ಯರನ್ನು ಸಮಿತಿ ಕಳುಹಿಸಿಕೊಟ್ಟಿದೆ. ಅಪರಾಧ ನಡೆದ ಸ್ಥಳ ಮತ್ತು ಸಂತ್ರಸ್ತೆಯ ಕುಟುಂಬವನ್ನು ಈ ತಂಡ ಭೇಟಿಯಾಗಿದೆ. ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಚಂದ್ರಮುಖಿ ದೇವಿ, ಆಕೆ ಯಾರೊಬ್ಬರ ಒತ್ತಡಕ್ಕೆ ಒಳಗಾಗಿದ್ದರೂ ಸಹ ಸಮಯದ ಬಗ್ಗೆ ನಿಗಾ ಇಡಬೇಕಿತ್ತು. ಈ ರೀತಿ ಸಂಜೆ ಹೊತ್ತಿನಲ್ಲಿ ತಡವಾಗಿ ಹೊರ ಹೋಗಬಾರದು. ಸಂತ್ರಸ್ತೆ ಸಂಜೆ ಏಕಾಂಗಿಯಾಗಿ ಹೊರಗೆ ಹೋಗದಿದ್ದರೆ ಅಥವಾ ಕುಟುಂಬ ಸದಸ್ಯರೊಂದಿಗೆ ಹೋಗಿದ್ದರೆ, ಆಕೆಯನ್ನು ರಕ್ಷಿಸಬಹುದಿತ್ತು ಎಂದಿದ್ದಾರೆ.

ಇದೇ ವೇಳೆ ಪೊಲೀಸರ ಕಾರ್ಯಾಚರಣೆ ಬಗ್ಗೆ ಕೂಡ ದೇವಿ ಅಸಮಾಧಾನ ಹೊರಹಾಕಿದ್ದಾರೆ. ಘಟನೆ ಕುರಿತು ಪೊಲೀಸರು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಆಕೆಯನ್ನು ಉಳಿಸಬಹುದಿತ್ತು ಎಂದಿದ್ದಾರೆ.

ಭಾನುವಾರ ದೇವಸ್ಥಾನಕ್ಕೆ ಹೋಗಿದ್ದ 50 ವರ್ಷದ ಮಹಿಳೆ ಶವವಾಗಿ ಪತ್ತೆಯಾಗಿದ್ದರು. ಆಕೆಯನ್ನು ದೇವಸ್ಥಾನದ ಅರ್ಚಕರು ಮತ್ತು ಆತನ ಇಬ್ಬರು ಸಹಚರರು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಸಹಚರರನ್ನು ಮಂಗಳವಾರ ಬಂಧಿಸಲಾಗಿದೆ. ಅರ್ಚಕ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ. ಪೊಲೀಸರ ಈ ಕಾರ್ಯ ನನಗೆ ತೃಪ್ತಿ ನೀಡಿಲ್ಲ ಎಂದಿದ್ದಾರೆ ಚಂದ್ರಮುಖಿ ದೇವಿ.

ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯ ಜೀವ ಉಳಿಸಬಹುದಾಗಿತ್ತು ಎಂದು ಎಸ್​ಎಸ್​ಪಿ ತಿಳಿಸಿದ್ದಾರೆ. ಎಫ್​ಐಆರ್​ ಅನ್ನು ಕೂಡ ತಡವಾಗಿ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ಕೂಡ ವಿಳಂಬ ಮಾಡಲಾಗಿದೆ ಎಂದರು.

ಇದನ್ನು ಓದಿ: ಅಮಿತಾಬ್​ ಬಚ್ಚನ್​ರ ಕೋವಿಡ್​ ಜಾಗೃತಿ ಮೊಬೈಲ್​ ಕಾಲರ್​ಟ್ಯೂನ್​ ತೆಗೆಯುವಂತೆ ಪಿಐಎಲ್​ ಸಲ್ಲಿಕೆ

ಮರಣೋತ್ತರ ವರದಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ, ಅಲ್ಲದೇ ಸಂತ್ರಸ್ತೆಯ ಖಾಸಗಿ ಭಾಗಗಳಲ್ಲಿ ಗಾಯಗಳಾಗಿದ್ದು, ಕಾಲು ಮುರಿದಿದೆ ಎಂದು ಬುಧವಾರ ಎಸ್​ಎಸ್​ಪಿ ಸಂಕಲ್ಪ ಶರ್ಮಾ ತಿಳಿಸಿದ್ದರು. ಪ್ರಕರಣದಲ್ಲಿ ನಿಷ್ಕಾಳಜಿ ತೋರಿದ ಆರೋಪದ ಮೇಲೆ ಉಘೈತಿ ಪೊಲೀಸ್​ ಠಾಣಾ ಸ್ಟೇಷನ್​ ಹೌಸ್​ ಅಧಿಕಾರಿಯನ್ನು ಅಮಾನತು ಮಾಡಾಗಿದೆ ಎಂದರು.

ಇಂತಜ ಘಟನೆಗಳ ವಿರುದ್ಧ ಕಠಿಣ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ಸರ್ಕಾರ ಇಂತಹ ವಿಷಯಗಳಲ್ಲಿ ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಆದರೂ ಇಂತಹ ಘಟನೆ ನಡೆಯುತ್ತಿದೆ ಎಂದು ಎನ್​ಸಿಡಬ್ಲ್ಯೂ ಸದಸ್ಯೆ ತಿಳಿಸಿದರು.ಅಂಗನವಾಡಿ ಕಾರ್ಯಕರ್ತೆಯಾಗಿ ಕುಟುಂಬಕ್ಕೆ ಸಂತ್ರಸ್ತೆ ಆಧಾರವಾಗಿದ್ದರು. ಆರೋಪಿಗಳು ಯೋಜನೆ ರೂಪಿಸಿ ಆಕೆಯನ್ನು ಕರೆ ಮಾಡಿ ದೇವಸ್ಥಾನಕ್ಕೆ ಕರೆದಿದ್ದಾರೆ ಈ ಘಟನೆಯಲ್ಲಿ ಸ್ಟೇಷನ್​ ಅಧಿಕಾರಿಯನ್ನು ಅಮಾನತು ಮಾಡಿದರೆ ಸಾಲದು, ಇದರಲ್ಲಿ ಭಾಗಿಯಾರುವವರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಎಸ್​ಎಸ್​ಪಿಗೆ ತಿಳಿಸಿದ್ದೇನೆ ಎಂದು ದೇವಿ ಹೇಳಿದರು.
Published by: Seema R
First published: January 7, 2021, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories