ನಿಮಗೆ ಕೆಟ್ಟ ದಿನಗಳು ಬೇಗ ಬರಲಿವೆ: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಹಿಡಿಶಾಪ

Jaya Bachchan curse in Rajya Sabha: ಮಾದಕ ವಸ್ತು ತಿದ್ದುಪಡಿ ಮಸೂದೆ ಮೇಲೆ ನಡೆಯುತ್ತಿದ್ದ ಚರ್ಚೆಯ ವೇಳೆ ಜಯಾ ಬಚ್ಚನ್ ತಾಳ್ಮೆ ಕಳೆದುಕೊಂಡು ಆಡಳಿತ ಪಕ್ಷದವರಿಗೆ ಹಿಡಿಶಾಪ ಹಾಕಿದ ಘಟನೆ ರಾಜ್ಯಸಭೆ ಕಲಾಪದ ವೇಳೆ ನಡೆದಿದೆ.

ಜಯಾ ಬಚ್ಚನ್

ಜಯಾ ಬಚ್ಚನ್

 • News18
 • Last Updated :
 • Share this:
  ನವದೆಹಲಿ: ರಾಜ್ಯಸಭೆ ಕಲಾಪದಲ್ಲಿ (Rajya Sabha) ನಿನ್ನೆ ಬಿಸಿ ಬಿಸಿ ಚರ್ಚೆ ನಡೆಸುವ ವೇಳೆ ಆಡಳಿತ ಪಕ್ಷದವರ ಮಾತುಗಳಿಂದ ಸಂಸದೆ ಜಯ ಬಚ್ಚನ್ (Jaya Bachchan) ಅವರು ತಾಳ್ಮೆ ಕಳೆದುಕೊಂಡ ಘಟನೆ ನಡೆಯಿತು. ವಿವಿಧ ಘಟನೆಗಳಿಂದ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ಬಳಿಕ ಜಯಾ ಬಚ್ಚನ್ ಕೆರಳಿ ಕೆಂಡವಾಗಿ, ‘ನಿಮಗೆ ಕೆಟ್ಟ ದಿನಗಳು ಬೇಗನೇ ಬರಲಿವೆ’ ಎಂದು ಆಡಳಿತ ಪಕ್ಷದ ಸದಸ್ಯರಿಗೆ ಶಾಪ ಹಾಕಿದರು.

  ಮಾದಕ ವಸ್ತು ತಿದ್ದುಪಡಿ ಮಸೂದೆ (Narcotic Drugs and Psychotropic Substances Amendment Bill 2021) ವಿಚಾರದ ಮೇಲೆ ಚರ್ಚೆ ನಡೆದ ಸಂದರ್ಭದಲ್ಲಿ ಈ ವಿದ್ಯಮಾನ ನಡೆದಿದೆ. ಮಸೂದೆ ಮೇಲೆ ಚರ್ಚೆ ನಡೆಯುತ್ತಿರುವಂತೆಯೇ ವಿಪಕ್ಷಗಳ ಸದಸ್ಯರು ಸಭೆಯಿಂದ 12 ಮಂದಿಯನ್ನ ಅಮಾನತುಗೊಳಿಸಿದ ಕ್ರಮದ ಬಗ್ಗೆ ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ಇದಕ್ಕೆ ರಾಜ್ಯಸಭೆ ಕಲಾಪದ ಉಸ್ತುವಾರಿ ಇದ್ದ ಭುವನೇಶ್ವರ್ ಕಾಲಿತ (Rajya Sabha Chairman Bhuwaneswar Kalitha) ಅವರು ಆಸ್ಪದ ಕೊಡಲಿಲ್ಲ. ಈ ವೇಳೆ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಕಾಲಿತ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

  ಸಭಾಧ್ಯಕ್ಷರನ್ನೇ ಟೀಕಿಸಿದ ಜಯಾ:

  “ನಿಮಗೆ ಧನ್ಯವಾದ ಹೇಳುವುದಿಲ್ಲ. ನೀವು ಯಾವುದೇ ಒಂದು ಪಕ್ಷಕ್ಕೆ ಬೆಂಬಲ ನೀಡದೇ ಎಲ್ಲರಿಗೂ ನ್ಯಾಯಯುತವಾಗಿರಬೇಕು” ಎಂದು ಹೇಳಿದ ಜಯಾ ಬಚ್ಚನ್, ಈ ಹಿಂದೆ ನೀವು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಂಥವರು ಎಂದು ಭುವನೇಶ್ವರ್ ಕಾಲಿತಾ ಅವರನ್ನ ಹೀಯಾಳಿಸಿದರು.

  ಇದನ್ನೂ ಓದಿ: Parliament Session: ಮೋದಿ‌ ಎಚ್ಚರಿಕೆ ಬಳಿಕವೂ ತೇಜಸ್ವಿ ಸೂರ್ಯ ಸೇರಿ 9 ಸಂಸದರು ಸಂಸತ್ತಿಗೆ ಗೈರು

  ಆಗ ಬಿಜೆಪಿ ಸಂಸದ ರಾಕೇಶ್ ಸಿನ್ಹಾ (BJP MP Rakesh Sinha) ಮಧ್ಯ ಪ್ರವೇಶಿಸಿ, ಸದನದ ಅಧ್ಯಕ್ಷರಿಗೆ ಜಯಾ ಬಚ್ಚನ್ ಅಗೌರವ ಸಲ್ಲಿಸತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಜಯಾ ಬಚ್ಚನ್ ಮತ್ತು ಆಡಳಿತ ಪಕ್ಷ ಸದಸ್ಯರ ಮಧ್ಯೆ ವಾಗ್ಯುದ್ಧವೇ ಆಯಿತು.

  ನಮ್ಮ ಕತ್ತು ಹಿಸುಕಿಬಿಡಿ ಎಂದು ಜಯಾ ಆಕ್ರೋಶ:

  ನಂತರ, ಸಭಾಧ್ಯಕ್ಷರು ಜಯಾ ಬಚ್ಚನ್ ಅವರಿಗೆ ಮಾದಕ ವಸ್ತು ವಿಚಾರದ ಬಗ್ಗೆ ಮಾತನಾಡಲು ಅನುಮತಿ ನೀಡಿದರು. ಮತ್ತೆ ಮಾತನಾಡತೊಡಗಿದ ಜಯಾ ಬಚ್ಚನ್, “ನಮಗೆ ನ್ಯಾಯ ಬೇಕು. ನಮಗೆ ನ್ಯಾಯ ಸಿಗುತ್ತಾ? ಏನಾಗುತ್ತಿದೆ ಇಲ್ಲಿ? ತನ್ನ ತಪ್ಪನ್ನು ತಿದ್ದಿಕೊಳ್ಳಲು ಸರ್ಕಾರ ತಂದಿರುವ ಒಂದು ಮಸೂದೆ ಸುತ್ತ ಹಲವು ವಿಚಾರಗಳನ್ನ ನಾವು ಚರ್ಚಿಸುತ್ತಿದ್ದೇವೆ. ನೀವು ಬಂದು ನಮ್ಮ ಕತ್ತು ಹಿಸುಕಿಬಿಡಿ. ಇದು ನಿಜಕ್ಕೂ ಭಯಾನಕ” ಎಂದು ಜಯಾ ಬಚ್ಚನ್ ಗುಡುಗಿದರು.

  ಜಯಾ ಹಿಡಿಶಾಪ:

  ನಂತರ ಅವರು ಆಡಳಿತ ಪಕ್ಷಗಳ ಸದಸ್ಯರ ಕಡೆ ತಿರುಗಿ, “ನಿಮ್ಮ ಕೆಟ್ಟ ದಿನಗಳು ಬೇಗ ಬರುತ್ತಿವೆ. ನಾನೇ ನಿಮಗೆ ಶಾಪ ಹಾಕುತ್ತೇನೆ” ಎಂದು ಹಿಡಿಶಾಪ ಹಾಕಿದ ಜಯಾ ಬಚ್ಚನ್, ವಿಪಕ್ಷ ಸದಸ್ಯರ ಧ್ವನಿ ಅಡಗಿಸುವ ಪ್ರಯತ್ನ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಇದನ್ನೂ ಓದಿ: ವೋಟರ್​ ಐಡಿ ಜೊತೆ ಆಧಾರ್​ ಲಿಂಕ್​; ಲೋಕಸಭೆಯಲ್ಲಿ ಮಸೂದೆ ಪಾಸ್​

  ಸಭಾಧ್ಯಕ್ಷ ಭುವನೇಶ್ವರ್ ಕಾಲಿತಾ ಅವರು ಸದನದಲ್ಲಿ ಯಾರಾದರೂ ಅಸಂಸದೀಯ ಪದಬಳಕೆ (Unparliamentary word) ಮಾಡಿದ್ದರೆ ಅದನ್ನ ಕಡತದಿಂದ ತೆಗೆದುಹಾಕುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಯಾ ಬಚ್ಚನ್, ಸದನದ ಸದಸ್ಯರೊಬ್ಬರು ತನ್ನ ಮೇಲೆ ವೈಯಕ್ತಿಕ ಹೇಳಿಕೆ ನೀಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  ವೈಯಕ್ತಿಕ ನಿಂದನೆಯಿಂದ ನೋವು:

  “ನಾನು ಯಾರ ಮೇಲೂ ವೈಯಕ್ತಿಕ ಹೇಳಿಕೆ ಕೊಡಲು ಬಯಸುವುದಿಲ್ಲ. ಈಗ ಆಗಿರುವ ಘಟನೆ ದುರದೃಷ್ಟಕರ. ಅವರು ಆ ರೀತಿ ಮಾತನಾಡಬಾರದಿತ್ತು. ಇದರಿಂದ ನನಗೆ ಬಹಳ ನೋವಾಯಿತು” ಎಂದು ರಾಜ್ಯಸಭೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಜಯಾ ಬಚ್ಚನ್ ಹೇಳಿಕೊಂಡರು.
  Published by:Vijayasarthy SN
  First published: