Taliban | ಚಿನ್ನಕ್ಕೆ ಕಾವಲುಬಿದ್ದ ತಾಲಿಬಾನಿಗಳು; ಏನಿದು ಪುರಾತನ ಬ್ಯಾಕ್ಟ್ರಿಯನ್ ನಿಧಿ ರಹಸ್ಯ?

Bactrian Treasure- ಇಸ್ಲಾಮೀ ಪೂರ್ವ ಕಾಲದ ಸುಮಾರು 2 ಸಾವಿರ ವರ್ಷಗಳ ಹಿಂದಿನದ್ದೆನ್ನಲಾದ ಬ್ಯಾಕ್ಟ್ರಿಯನ್ ನಿಧಿ ಎಂದು ಕರೆಯುವ ಆರು ಸಮಾಧಿಗಳಲ್ಲಿನ ಸಂಪತ್ತನ್ನು ಗಟ್ಟಿ ಮಾಡಿಕೊಳ್ಳಲು ತಾಲಿಬಾನ್ ಪ್ರಯತ್ನಿಸಿದೆ.

ಬ್ಯಾಕ್​ಟ್ರಿಯನ್ ನಿಧಿ

ಬ್ಯಾಕ್​ಟ್ರಿಯನ್ ನಿಧಿ

 • News18
 • Last Updated :
 • Share this:
  ತಾಲಿಬಾನಿಗಳ ಅಟ್ಟಹಾಸದಿಂದ ಅಫ್ಘಾನಿಸ್ತಾನ (Taliban power in Afghanistan) ಅಕ್ಷರಶಃ ನಲುಗಿಹೋಗಿದೆ. ದಿನದಿಂದ ದಿನಕ್ಕೆ ತಾಲಿಬಾನಿ ರಕ್ಕಸರ ಕ್ರೌರ್ಯ ಮಿತಿಮೀರಿದೆ. ಕಂಡಿದ್ದೆಲ್ಲವನ್ನ ಕಬ್ಜ ಮಾಡಿಕೊಂಡಿರುವ ತಾಲಿಬಾನಿಗಳು, ಇದೀಗ 2000 ವರ್ಷಗಳ ಹಳೆಯದಾದ ಬ್ಯಾಕ್​ಟ್ರಿಯನ್ ಗೋಲ್ಡ್ (Bactrian Gold Treasure) ಎಂದು ಕರೆಯಲ್ಪಡುವ ನಿಧಿಯ ಹಿಂದೆ ಬಿದ್ದಿದ್ದಾರೆ.  ಈ ನಿಧಿಯನ್ನು ಟ್ರ್ಯಾಕ್ ಮಾಡಿ ರಕ್ಷಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸ್ವತಃ ಈ ಬಗ್ಗೆ ತಾಲಿಬಾನ್ ಹಂಗಾಮಿ ಕ್ಯಾಬಿನೆಟ್‌ನ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಸಿಕ್ (Ahmadulla Wasiq) ಮಾಹಿತಿ ಹಂಚಿಕೊಂಡಿದ್ದಾರೆ. ನಾಲ್ಕು ದಶಕಗಳ ಹಿಂದೆ ಉತ್ತರ ಜಾಜ್ಜಾನ್ (North Zowzjan Province of Afghanistan) ಪ್ರಾಂತ್ಯದ ಮಧ್ಯಭಾಗವಾದ ಶೆರ್ಬರ್ಗಾನ್ (Sheberghan) ಜಿಲ್ಲೆಯ ತೇಲಾ ತಪ ಪ್ರದೇಶದಲ್ಲಿ ಈ ನಿಧಿ ಪತ್ತೆಯಾಗಿತ್ತು.

  "ಈ ನಿಧಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ಕೂಡ ರಚಿಸಿದ್ದು, ಶೀಘ್ರದಲ್ಲಿ ಈ ನಿಧಿಯನ್ನು ಪತ್ತೆ ಹಚ್ಚಲಾಗುತ್ತದೆ. ಒಂದು ವೇಳೆ ಈ ನಿಧಿಯನ್ನು ಅಫ್ಘಾನಿಸ್ತಾನ ಬಿಟ್ಟು ಬೇರೆಡೆಗೆ ಸ್ಥಳಾಂತರ ಮಾಡಿದ್ದರೆ, ಅದು ದೇಶದ್ರೋಹ. ನಮ್ಮ ಸರ್ಕಾರದಿಂದ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಾಲಿಬಾನ್ ಹಂಗಾಮಿ ಕ್ಯಾಬಿನೆಟ್‌ನ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಸಿಕ್ ಹೇಳಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿ ಪ್ರಕಾರ‌ ಕ್ರಿಸ್ತಪೂರ್ವ ಮೊದಲ ಶತಮಾನದೆನ್ನಲಾದ 6 ಸಮಾಧಿ ಗೋಪುರಗಳ ಒಳಗೆ ಈ ನಿಧಿ ಪತ್ತೆಯಾಗಿದ್ದು ಅಂತ ಹೇಳಲಾಗಿದೆ. ಈ ನಿಧಿಯಲ್ಲಿ 20 ಸಾವಿರಕ್ಕೂ ಹೆಚ್ಚು ಚಿನ್ನದ ವಸ್ತುಗಳು ಇದೆ ಅಂತ ಹೇಳಲಾಗುತ್ತಿದೆ. ಚಿನ್ನದ ಉಂಗುರ, ನಾಣ್ಯಗಳು, ಆಯುಧಗಳು, ಕಿವಿ ಓಲೆಗಳು, ಬಳೆಗಳು, ನೆಕ್ಲೇಸ್ ಹಾಗೂ ಕಿರೀಟಗಳು ಈ ಬ್ಯಾಕ್ಟ್ರಿಯನ್ ನಿಧಿಯಲ್ಲಿ ಇವೆ. ಇದಿಷ್ಟೇ ಅಲ್ಲದೆ ಮತ್ತಷ್ಟು ಪುರಾತನ ವಸ್ತುಗಳು ಇದರಲ್ಲಿ ಇದೆ ಅಂತ ಹೇಳಲಾಗುತ್ತಿದೆ.

  ವರದಿಯ ಪ್ರಕಾರ ಈ ಸಮಾಧಿಗಳು 5 ಮಹಿಳೆಯರು ಹಾಗೂ ಒಬ್ಬ ಪುರುಷನಿಗೆ ಸೇರಿದ್ದಾಗಿವೆ. ಇನ್ನು ಈ ನಿಧಿಯನ್ನು ಅಫ್ಘಾನಿಸ್ತಾನದ ಹಿಂದಿನ ಸರ್ಕಾರ ಇದೇ ಫೆಬ್ರವರಿ 21ರಂದು ಅಧ್ಯಕ್ಷರ ಅರಮನೆಗೆ ಈ ನಿಧಿಯನ್ನ ತಂದು ಸಾರ್ವಜನಿಕ ವೀಕ್ಷಣೆಗೆ ಪ್ರದರ್ಶನಕ್ಕೆ ಇಡಲಾಗಿತ್ತು. ಹಿಂದಿನ ಸರ್ಕಾರದ ಪತನದ ನಂತರ ಅದರ ಸುರಕ್ಷತೆಯ ಬಗ್ಗೆ ಕಾಳಜಿ ಹೆಚ್ಚಾಗಿತ್ತು. ಇದನ್ನ ರಕ್ಷಿಸಲು ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಸಹಿಮಾಡಿ ಇದನ್ನ ಸುರಕ್ಷಿತ ಸ್ಥಳದಲ್ಲಿ ಇಡಲಾಗಿದೆ ಅಂತ ಹೇಳಲಾಗಿದೆ.

  ಇದನ್ನೂ ಓದಿ: Captain Amarinder Singh: 'ನಾನು ಅವಮಾನಿತನಾಗಿದ್ದೇನೆ ...' ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಕ್ಯಾ. ಅಮರೀಂದರ್ ಸಿಂಗ್ ನೋವಿನ ನುಡಿ!

  ಬ್ಯಾಕ್ಟ್ರಿಯನ್ ನಿಧಿ ಅಫ್ಘಾನಿಸ್ತಾನದ ಸ್ವತ್ತು. ಅದು ನಮಗೆ ಸೇರಬೇಕು. ಅದನ್ನು ಬೇರೆ ದೇಶಗಳಿಗೆ ಸ್ಥಳಾಂತರಿಸಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅದು ನಮ್ಮ ದೇಶದಲ್ಲಿಯೇ ಇರಬೇಕು ಎಂದು ತಾಲಿಬಾನ್ ಸಚಿವ ಅಹ್ಮದುಲ್ಲಾ ವಸಿಕ್ ತಿಳಿಸಿದ್ದಾರೆ. ಕಳೆದ 13 ವರ್ಷದಲ್ಲಿ 13 ದೇಶಗಳಲ್ಲಿ ಈ ಬ್ಯಾಕ್ಟೀರಿಯನ್ ನಿಧಿ ಪ್ರದರ್ಶನಕ್ಕಿಡಲಾಗಿತ್ತು. ಇದರಿಂದ 350 ಮಿಲಿಯನ್ ಅಫ್ಘಾನಿಸ್ (ಸುಮಾರು 33 ಕೋಟಿ ರೂಪಾಯಿ) ಹಣ ಅಫ್ಘಾನಿಸ್ತಾನದ ಖಜಾನೆ ಸೇರಿದಂತಾಗಿದೆ.

  ಇದನ್ನೂ ಓದಿ: Explainer: ಚೀನಾವನ್ನು ಎದುರಿಸಲು ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾದಿಂದ ಐತಿಹಾಸಿಕ ಭದ್ರತಾ ಒಪ್ಪಂದ: ಏನಿದು Aukus..? ಇಲ್ಲಿದೆ ವಿವರ..

  ಬ್ಯಾಕ್ಟ್ರಿಯಾದ ಸಂಪತ್ತು ಇಸ್ಲಾಮ್ ಪೂರ್ವ ಕಾಲಕ್ಕೆ ಸೇರಿದ್ಧಾಗಿದೆ. ಅಫ್ಘಾನಿಸ್ತಾನದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ್ದ ಪಾರ್ಥಿಯನ್ನರೋ, ಸ್ಕೈಥಿಯನ್ನರಿಗೋ ಅಥವಾ ಕುಶಾನರಿಗೆ ಮುಂಚಿನ ಯೂಝಿ ಅರಸರಿಗೆ ಸೇರಿದ್ದು ಈ ಸಮಾಧಿಗಳು. ಒಂದು ಸಮಾಧಿಯಲ್ಲಿ ಬೌದ್ಧರ ಚಿನ್ನದ ನಾಣ್ಯ ಇದೆ.

  - ವಾಸುದೇವ್
  Published by:Vijayasarthy SN
  First published: