Maharashtra Crisis: ಕಾಂಗ್ರೆಸ್ ಬೆನ್ನಿಗೆ ಇರಿದ ಶರದ್ ಪವಾರ್ ಶಿವಸೇನೆಗೆ ಗುರುವಾಗಲು ಸಾಧ್ಯವಿಲ್ಲ; ಅನಂತ್ ಗೀತೆ

ಶರದ್ ಪವಾರ್ ಎಂದಿಗೂ ನಮ್ಮ ನಾಯಕರಾಗಲು ಸಾಧ್ಯವಿಲ್ಲ ಏಕೆಂದರೆ ಈ ಸರ್ಕಾರ (ಎಂವಿಎ) ಕೇವಲ ಹೊಂದಾಣಿಕೆಯಾಗಿದೆ. ಜನರು ಶರದ್ ಪವಾರ್‌ ಕುರಿತು ಅನೇಕ ಗೌರವಾರ್ಥಕ ಪದಗಳನ್ನು ಬಳಸಲಿ, ಆದರೆ ನಮ್ಮ 'ಗುರು' ಮಾತ್ರ ದಿವಂಗತ ಬಾಳಾಸಾಹೇಬ್ ಠಾಕ್ರೆ (Late Balasaheb Thackeray) ಎಂದು ಹೇಳಿದ್ದಾರೆ.

ಅನಂತ್ ಗೀತೆ

ಅನಂತ್ ಗೀತೆ

  • Share this:
ಮುಂಬೈ(ಸೆ. 21): ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆಯ ಮಹಾರಾಷ್ಟ್ರದ ಮಹಾ ವಿಕಾಸ ಅಘಡಿ ಸರ್ಕಾರದಲ್ಲಿ‌ (Maha Vikas Aghadi (MVA) government of Shiv Sena, NCP and Congress) ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಆಗಾಗ ಸ್ವಪಕ್ಷೀಯರು ಅಥವಾ ಮೈತ್ರಿಕೂಟದ 'ಮಿತ್ರರು' ಸಾಬೀತು ಪಡಿಸುತ್ತಲೇ ಇದ್ದಾರೆ. ಸದ್ಯದ ಸರದಿ ಮಾಜಿ ಕೇಂದ್ರ ಸಚಿವ ಮತ್ತು ಶಿವಸೇನಾ ನಾಯಕ ಅನಂತ್ ಗೀತೆ (Former Union minister and Shiv Sena leader Anant Geete) ಅವರದು.‌ ಕಾಂಗ್ರೆಸ್ ಪಕ್ಷದ ಬೆನ್ನಿಗೆ ಇರಿದು ತಮ್ಮದೇ ಪಕ್ಷ ಕಟ್ಟಿಕೊಂಡಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ (NCP chief Sharad Pawar) ಎಂದಿಗೂ ಶಿವಸೈನಿಕರಿಗೆ (Shivsainiks) 'ಗುರು' ಆಗಲು ಸಾಧ್ಯವಿಲ್ಲ ಎಂದಿರುವ ಅನಂತ ಗೀತೆ, 'ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮಹಾ ವಿಕಾಸ ಅಘಡಿ (ಎಂವಿಎ) ಸರ್ಕಾರವು ಕೇವಲ 'ಹೊಂದಾಣಿಕೆ' (Adjustment) ಎಂದು ವ್ಯಾಖ್ಯಾನಿಸಿದ್ದಾರೆ‌. ಸಹಜವಾಗಿಯೇ ಶಿವಸೇನೆಯ ನಾಯಕ ಅನಂತ್ ಗೀತೆ ಅವರ ಹೇಳಿಕೆ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ‌ ಮೂಡಿಸಿದೆ.

2014ರಿಂದ 2019ರವರೆಗೆ ಅಧಿಕಾರ ಹಂಚಿಕೊಂಡಿದ್ದ ಶಿವಸೇನೆ (Shivasene) ಮತ್ತು ಬಿಜೆಪಿ (BJP) ನಡುವಿನ ಬಿರುಕನ್ನು ಸದುಪಯೋಗ ಮಾಡಿಕೊಂಡು 2019ರ ವಿಧಾನಸಭಾ ಚುನಾವಣೆಯ ನಂತರ ಮಹಾರಾಷ್ಟ್ರದಲ್ಲಿ ರಚನೆಯಾದ ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆಗಳ ಮಹಾ ವಿಕಾಸ ಅಘಡಿ ಸರ್ಕಾರದ ವಾಸ್ತುಶಿಲ್ಪಿ ಮತ್ತು ಆಂಕರ್ ಎಂದು ಶರದ್ ಪವಾರ್ ಅವರ ಬಗ್ಗೆ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಶಿವಸೇನೆಯ ನಾಯಕ ಅನಂತ ಗೀತೆ ಈಗ ನೀಡಿರುವ ಹೇಳಿಕೆ ನೇರವಾಗಿ ಶರದ್ ಪವಾರ್ ಅವರನ್ನೇ ಗುರಿಯಾಗಿರಿಸಿಕೊಂಡಿರುವುದರಿಂದ 'ಹೊಸ ಸಾಧ್ಯತೆಗಳ' ಬಗೆಗಿನ ಚರ್ಚೆಗಳು ಹುಟ್ಟುಕೊಂಡಿವೆ. ಅಂದರೆ ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆಗಳ ಮೈತ್ರಿಗೆ ಬದಲಾಗಿ ಮತ್ತೆ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ (Alliance of Shivasene and BJP) ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:Climate Change: ಹವಾಮಾನ ಬದಲಾವಣೆ ಸರಿ ಮಾಡೋಕೆ ವರ್ಷಕ್ಕೆ 100 ಬಿಲಿಯನ್ ಡಾಲರ್ ಹಣ ಬೇಕು!

ಇಲ್ಲಿನ ರಾಯಗಡದಲ್ಲಿ ನಡೆದ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಅನಂತ್ ಗೀತೆ ಅವರು, "ಶರದ್ ಪವಾರ್ ಎಂದಿಗೂ ನಮ್ಮ ನಾಯಕರಾಗಲು ಸಾಧ್ಯವಿಲ್ಲ ಏಕೆಂದರೆ ಈ ಸರ್ಕಾರ (ಎಂವಿಎ) ಕೇವಲ ಹೊಂದಾಣಿಕೆಯಾಗಿದೆ. ಜನರು ಶರದ್ ಪವಾರ್‌ ಕುರಿತು ಅನೇಕ ಗೌರವಾರ್ಥಕ ಪದಗಳನ್ನು ಬಳಸಲಿ, ಆದರೆ ನಮ್ಮ 'ಗುರು' ಮಾತ್ರ ದಿವಂಗತ ಬಾಳಾಸಾಹೇಬ್ ಠಾಕ್ರೆ (Late Balasaheb Thackeray) ಎಂದು ಹೇಳಿದ್ದಾರೆ.

ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆಯ ಮಹಾರಾಷ್ಟ್ರದ ಮಹಾ ವಿಕಾಸ ಅಘಡಿ ಸರ್ಕಾರ ಮುಂದುವರೆಯುವ ಬಗ್ಗೆ ಮಾತನಾಡಿ "ಈ ಸರ್ಕಾರವು ಕಾರ್ಯನಿರ್ವಹಿಸುವವರೆಗೂ, ಅದು ಮುಂದುವರಿಯುತ್ತದೆ. ನಾವು ಬೇರೆಯಾದರೆ, ನಮ್ಮ ಮನೆ ಶಿವಸೇನೆ ಮತ್ತು ನಾವು ಯಾವಾಗಲೂ ನಮ್ಮ ಪಕ್ಷದ ಜೊತೆ ಇರುತ್ತೇವೆ' ಎಂದು ಹೇಳುವ ಮೂಲಕ 'ಮಿತೃಪಕ್ಷಗಳ ನಡುವೆ ಎಲ್ಲವೂ ಸರಿ ಇಲ್ಲ' ಎಂಬುದನ್ನು ಅನಂತ ಗೀತೆ ಬಹಿರಂಗ ಪಡಿಸಿದ್ದಾರೆ.

ರಾಯಗಡದ ಮಾಜಿ ಸಂಸದರೂ ಆಗಿರುವ ಅನಂತ ಗೀತೆ ಅವರು, ತಾವು ಶಿವಸೇನೆ ನೇತೃತ್ವದ ಸರ್ಕಾರದ ಬಗ್ಗೆ ಯಾವುದೇ ಕೆಟ್ಟ ಉದ್ದೇಶ ಹೊಂದಿಲ್ಲ. ಅದು ಯಶಸ್ವಿ ಆಗಬೇಕೆಂದು ಬಯಸುವವನೇ ಆಗಿದ್ದೇನೆ. ಆದರೆ ಶರದ್ ಪವಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ತಮ್ಮದೇ ಪಕ್ಷವನ್ನು ಸ್ಥಾಪಿಸಿದರು.‌ 1999ರ ಮೇ 25ರಂದು ಶರದ್ ಪವಾರ್, ಪಿಎ ಸಂಗ್ಮಾ (PA Sangma) ಮತ್ತು ತಾರೀಕ್ ಅನ್ವರ್ (Tariq Anwar) ಅವರು ಕಾಂಗ್ರೆಸ್ ಪಕ್ಷವನ್ನು ಸೋನಿಯಾ ಗಾಂಧಿ ಅವರು (Sonia Gandhi) ಮುನ್ನಡೆಸಬಾರದೆಂದು ಸಿಡಿದು ಎನ್‌ಸಿಪಿ ರಚಿಸಿದರು.‌‌‌

ಇದನ್ನೂ ಓದಿ:Punjab Political Crisis| ರಾಷ್ಟ್ರೀಯವಾದಿ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಅವರನ್ನು ಬಿಜೆಪಿ ಸ್ವಾಗತಿಸುತ್ತದೆ; ಅಶ್ವನಿ ಶರ್ಮಾ

ಹಾಗಾಗಿ‌ ಕಾಂಗ್ರೆಸ್ ಮತ್ತು ಎನ್‌ಸಿಪಿ ಯಾವಾಗಲೂ ಸೌಹಾರ್ದಯುತವಾಗಿರಲು ಸಾಧ್ಯವಿಲ್ಲ. ನಂತರ ಎನ್‌ಸಿಪಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ (UPA Government) ಭಾಗವಾಯಿತು. ಅದರಲ್ಲಿ ಶರದ್ ಪವಾರ್ ಕೃಷಿ ಮಂತ್ರಿಯಾದರು (Agriculture Minister). ಇವರನ್ನು ಗುರು ಎಂದು‌ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಶರದ್ ಪವಾರ್ ವಿರುದ್ಧ ಕಿಡಿಕಾರಿದ್ದಾರೆ.
Published by:Latha CG
First published: