ಮೋದಿ ಕರೆಗೆ ಓಗೊಟ್ಟ ಅಂಬಾನಿ; ಕಾಶ್ಮೀರ, ಲಡಾಕ್ ಅಭಿವೃದ್ಧಿಗೆ ಟ್ಯಾಸ್ಕ್ ಫೋರ್ಸ್ ರಚಿಸಲು ರಿಲಾಯನ್ಸ್ ಚಿಂತನೆ

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವಂತಹ ಅಭಿವೃದ್ಧಿ ಕಾರ್ಯಗಳನ್ನ ಕೈಗೊಳ್ಳುವ ಉದ್ದೇಶದಿಂದ ರಿಲಾಯನ್ಸ್ ಸಂಸ್ಥೆಯು ಸ್ಪೆಷಲ್ ಟ್ಯಾಸ್ಕ್ ಫೋರ್ಸ್ ರಚಿಸುವ ಸಾಧ್ಯತೆ ಇದೆ.

news18
Updated:August 13, 2019, 10:42 AM IST
ಮೋದಿ ಕರೆಗೆ ಓಗೊಟ್ಟ ಅಂಬಾನಿ; ಕಾಶ್ಮೀರ, ಲಡಾಕ್ ಅಭಿವೃದ್ಧಿಗೆ ಟ್ಯಾಸ್ಕ್ ಫೋರ್ಸ್ ರಚಿಸಲು ರಿಲಾಯನ್ಸ್ ಚಿಂತನೆ
ಮುಕೇಶ್ ಅಂಬಾನಿ
  • News18
  • Last Updated: August 13, 2019, 10:42 AM IST
  • Share this:
ಮುಂಬೈ(ಆ. 12): ಜಮ್ಮು-ಕಾಶ್ಮೀರದ ಅಭಿವೃದ್ಧಿ ದೃಷ್ಟಿಯಲ್ಲಿ 370ನೇ ವಿಧಿಯನ್ನು ಸಂವಿಧಾನದಿಂದ ತೆಗೆದುಹಾಕಲಾಗಿದೆ. ದೊಡ್ಡ ದೊಡ್ಡ ಸಂಸ್ಥೆಗಳು ಕಣಿವೆ ರಾಜ್ಯದಲ್ಲಿ ಬಂಡವಾಳ ಹೂಡಿ ಉದ್ಯೋಗ ಸೃಷ್ಟಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಕರೆ ನೀಡಿದ್ದರು. ಇದೀಗ ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರಿಸ್ ಸಂಸ್ಥೆ ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿರಿಸಲು ನಿರ್ಧರಿಸಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಕ್ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನ ನಡೆಸಲು ತನ್ನದೇ ವಿಶೇಷ ಕಾರ್ಯಪಡೆ ರಚಿಸಲು ಯೋಜಿಸುತ್ತಿರುವುದಾಗಿ ಮುಕೇಶ್ ಅಂಬಾನಿ ಹೇಳಿದ್ದಾರೆ.

ಇವತ್ತು ನಡೆದ ರಿಲಾಯನ್ಸ್ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ಇಂಥದ್ದೊಂದು ಪ್ರಸ್ತಾವ ಮುಂದಿಟ್ಟರು.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಜಿಯೋಫೈಬರ್​​ ಲೋಕಾರ್ಪಣೆ; ಸೌದಿಯೊಂದಿಗೆ ರಿಲಾಯನ್ಸ್​ ಅತಿದೊಡ್ಡ ವಿದೇಶಿ ಹೂಡಿಕೆ ಒಪ್ಪಂದ; ಮುಖೇಶ್​ ಅಂಬಾನಿ

“ಪ್ರಧಾನಿ ಮೋದಿ ಅವರ ಮನವಿಗೆ ಓಗೊಟ್ಟು ನಾವು ಜಮ್ಮು-ಕಾಶ್ಮೀರ ಮತ್ತು ಲಡಾಕ್ ಜನರ ಅಭಿವೃದ್ಧಿ ಅಗತ್ಯಗಳಿಗೆ ಬೆಂಬಲವಾಗಿ ನಿಲ್ಲಲು ನಾವು ಬದ್ಧರಾಗಿದ್ದೇವೆ. ಈ ಎರಡು ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆ ನಡೆಸಲು ಆರ್​ಐಎಲ್​ನಿಂದ ಸ್ಪೆಷಲ್ ಟ್ಯಾಸ್ಕ್ ಫೋರ್ಸ್ ರಚನೆಯಾಗಲಿದೆ” ಎಂದು ಅಂಬಾನಿ ತಿಳಿಸಿದರು.

ರಿಲಾಯನ್ಸ್​ನ ಈ ವಾರ್ಷಿಕ ಮಹಾಸಭೆಯಲ್ಲಿ ಅಂಬಾನಿ ಅವರು ಇನ್ನೂ ಹಲವು ಮಹತ್ತ ಯೋಜನೆಗಳನ್ನ ಪ್ರಕಟಿಸಿದರು. ತೈಲವನ್ನು ರಾಸಾಯನಿಕವಾಗಿ ಪರಿವರ್ತಿಸುವ ತನ್ನ ವ್ಯವಹಾರದಲ್ಲಿ ಸುಮಾರು 75 ಬಿಲಿಯನ್ ಡಾಲರ್​ನಷ್ಟು ಪಾಲನ್ನು ಸೌದಿ ಅರಾಮ್ಕೋ ಎಂಬ ಸಂಸ್ಥೆಗೆ ಮಾರಾಟ ಮಾಡುವುದು ಅಂಬಾನಿಯವರ ಪ್ರಮುಖ ಘೋಷಣೆಗಳಲ್ಲಿ ಒಂದಾಗಿದೆ. ಹಾಗೆಯೇ, ಜಿಯೋ ಫೈಬರ್ ಯೋಜನೆಯು ಅವರ ಇನ್ನೊಂದು ಪ್ರಮುಖ ಘೋಷಣೆಯಾಗಿದೆ. ಇದರ ಜೊತೆಗೆ ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗುವ ಅಂಬಾನಿ ಅವರ ನಿರ್ಧಾರ ಸದ್ಯದ ಸ್ಥಿತಿಯಲ್ಲಿ ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ಲಡಾಕ್ ಗಡಿಭಾಗದಲ್ಲಿ ಪಾಕಿಸ್ತಾನದ ಫೈಟರ್ ವಿಮಾನಗಳ ಜಮಾವಣೆ? ಕಟ್ಟೆಚ್ಚರದಲ್ಲಿ ಭಾರತ

ಸಂವಿಧಾನದ 370 ಮತ್ತು 35ಎ ಪರಿಚ್ಛೇದಗಳನ್ನ ತೆಗೆದುಹಾಕುವ ಮೂಲಕ ಜಮ್ಮು-ಕಾಶ್ಮೀರದ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ರದ್ದುಗೊಳಿಸಿದೆ. ಈ ಕಣಿವೆ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಕೂಡ ಮಾಡಿದೆ. ವಿಶೇಷಾಧಿಕಾರದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ವಂಶಪಾರಂಪರ್ಯ ದುರಾಡಳಿತ ನಡೆಯುತ್ತಿದೆ. ಈ ಕಾರಣದಿಂದಾಗಿ 370ನೇ ವಿಧಿಯನ್ನು ರದ್ದುಗೊಳಿಸಬೇಕಾಯಿತು ಎಂಬುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿದೆ. ಕೇಂದ್ರದ ಈ ಕ್ರಮಕ್ಕೆ ಜಮ್ಮು-ಕಾಶ್ಮೀರದ ಸ್ಥಳೀಯ ರಾಜಕೀಯ ಪಕ್ಷಗಳು ಬಲವಾಗಿ ವಿರೋಧಿಸಿವೆ. ಅಸಾಂವಿಧಾನಿಕ ರೀತಿಯಲ್ಲಿ ವಿಶೇಷಾಧಿಕಾರ ರದ್ದುಗೊಳಿಸಲಾಗಿದೆ ಎಂಬುದು ಪ್ರಮುಖ ವಿಪಕ್ಷ ಕಾಂಗ್ರೆಸ್​ನ ಆರೋಪ.
Loading...

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...