ಕೋವಿಡ್ ಸಾಂಕ್ರಾಮಿಕತೆ ಎಷ್ಟರ ಮಟ್ಟಿಗೆ ಜನರಲ್ಲಿ ಭಯ ಆವರಿಸಿದರೆ ಎಂದರೇ ಕೆಲವೊಮ್ಮೆ ಮಾನವೀಯತೆ ಮರೆತು ಹೋಗುತ್ತದೆ. ಅದೇ ರೀತಿಯ ಘಟನೆಯೊಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಮಗುವೊಂದು ತಾಯಿ ಶವದೊಂದಿಗೆ ಎರಡು ದಿನಗಳ ಕಳೆದು ಹಸಿವಿನಿಂದ ಕಂಗೆಟ್ಟಿದ್ದರೂ ಕೊರೋನಾ ಸೋಂಕಿನ ಆತಂಕದಿಂದ ಜನರು ಮಗುವನ್ನು ಎತ್ತಿಕೊಳ್ಳಲು ಹಿಂದೆ ಮುಂದೆ ನೋಡಿದ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆಯಲ್ಲಿ ಮಗುವಿನೊಂದಿಗೆ ವಾಸವಾಗಿದ್ದ ತಾಯಿ ಕಳೆದ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ. ಈಕೆ ಸಾವನ್ನಪ್ಪಿರುವುದು ಯಾರ ಗಮನಕ್ಕೂ ಬಂದಿಲ್ಲ. ಈ ವೇಳೆ ಮನೆಯಿಂದ ದುರ್ವಾಸನೆ ಬಂದ ಕಾರಣ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ವೇಳೆ ತಾಯಿ ಪಕ್ಕದಲ್ಲಿಯೇ ಮಗು ಹಸುವಿನಿಂದ ಅತ್ತು ಅತ್ತು ಕಂಗಲಾಗಿರುವ ಮನಕಲಕುವ ದೃಶ್ಯ ಕಂಡು ಬಂದಿದೆ.
ತಾಯಿ ಶವದ ಪಕ್ಕದಲ್ಲಿದ್ದ ಮಗುವನ್ನು ಯಾರು ಕೂಡ ಎತ್ತಿಕೊಳ್ಳಲು ಮುಂದಾಗಿಲ್ಲ. ಕಡೆಗೆ ಮಹಿಳಾ ಪೊಲೀಸರೇ ಮಗುವಿನ ಆರೈಕೆಗೆ ಮುಂದಾಗಿದ್ದಾರೆ. 18 ತಿಂಗಳ ಮಗುವು ನೀರು, ಆಹಾರ ಇಲ್ಲದೇ 48 ಗಂಟೆ ಕಳೆದಿದೆ.
ಇದನ್ನು ಓದಿ: ಚುನಾವಣಾ ಅಬ್ಬರ ಮುಗಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಲಾಕ್ಡೌನ್; ಫಲಿತಾಂಶದ ದಿನವೂ ಇಲ್ಲ ಸಂಭ್ರಮ
ಪೊಲೀಸ್ ಕಾನ್ಸ್ಟೇಬಲ್ಗಳಾ ಸುಶೀಲ ಗಭಲೆ ಮತ್ತು ರೇಖಾ ವಾಜೆ ಸದ್ಯ ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ. ತಾಯಿ ಮಕ್ಕದಲ್ಲಿಯೇ ಕಣ್ಣಿರಾಕಿಕೊಂಡು ಮಲಗಿದ್ದ ಮಗುವೂ ನಿತ್ರಾಣಗೊಂಡಿರುವುದರ ಜೊತೆಗೆ ಜ್ವರದಿಂದ ಬಳಲುತ್ತಿತ್ತು. ಅದಕ್ಕೆ ಹಾಲು, ಬಿಸ್ಕೆಟ್ ತಿನ್ನಿಸಿ ವೈದ್ಯರ ಬಳಿ ಕರೆದುಕೊಂಡು ಹೋದೆವು. ಮಗುವಿಗೆ ಚೆನ್ನಾಗಿ ಊಟ ಮಾಡಿಸಿ ಎಲ್ಲವೂ ಸರಿಯಾಗುತ್ತದೆ ಎಂದು ವೈದ್ಯರು ತಿಳಿಸಿದರು. ಕೊರೋನಾ ಪರೀಕ್ಷೆಗೂ ಮಗುವನ್ನು ಒಳಪಡಿಸಲಾಗಿದ್ದು, ನೆಗೆಟಿವ್ ವರದಿ ಬಂದಿದೆ ಎಂದಿದ್ದಾರೆ ಪೊಲೀಸರು.
ಇನ್ನು ಮಗುವಿನ ತಾಯಿ ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿಲ್ಲ. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕ ಕೋವಿಡ್ ನಿಂದ ಸಾವನ್ನಪ್ಪಿದ್ದಾರಾ ಅಥವಾ ಬೇರೆಯಾವುದೋ ಕಾರಣದಿಂದಲೋ ಎಂಬುದು ತಿಳಿಯಲಿದೆ. ಇನ್ನು ಮಹಿಳೆಯ ಪತಿ ಉದ್ಯೋಗ ನಿಮಿತ್ತ ಉತ್ತರ ಪ್ರದೇಶಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ