26/11 ಉಗ್ರ ದಾಳಿಯಲ್ಲಿ ಪಾರಾದ ಇಸ್ರೇಲ್​ ಬಾಲಕನಿಗೆ ಕತ್ತಲೆಂದರೆ ಈಗಲೂ ಭಯ

26/11 ದಾಳಿಯಲ್ಲಿ ಪಾರಾದ ಇಸ್ರೇಲ್​ ಕಂದ

26/11 ದಾಳಿಯಲ್ಲಿ ಪಾರಾದ ಇಸ್ರೇಲ್​ ಕಂದ

ಇಸ್ರೇಲ್​ನ ಮೊಶೆ ಹಾಲ್ಟಜ್​ಬರ್ಕ್​ ಬಾಲಕನಿಗೆ ಇಂದಿಗೂ ಆ ಕರಾಳ ಘಟನೆಯ ನೆನಪು ಅಚ್ಚಳಿಯದಂತ ಭಯವನ್ನು ಮನಸ್ಸಲ್ಲಿ ಮೂಡಿಸಿದೆ. 12 ವರ್ಷದ ಮೊಶೆಗೆ ಇಂದಿಗೂ ಕತ್ತಲೆಂದರೆ ಭಯ.

 • News18
 • 2-MIN READ
 • Last Updated :
 • Share this:
  top videos

   ನವದೆಹಲಿ (ನ.26): 10 ವರ್ಷಗಳ ಹಿಂದೆ ಮುಂಬೈನ ಐಷಾರಾಮಿ ತಾಜ್​ ಹೋಟೆಲ್​ನಲ್ಲಿ ಅಪ್ಪ-ಅಮ್ಮನೊಂದಿಗೆ  ತನ್ನ ಎರಡನೇ ಹುಟುಹಬ್ಬ ಆಚರಿಸಿಕೊಂಡಿದ್ದ ಆ ಮಗುವಿಗೆ ಇದೇ ತನ್ನ ಕೊನೆಯ ಸಂತಸದ ಹುಟ್ಟುಹಬ್ಬವಾಗಿತ್ತು.

   ತಾಜ್​ ಹೋಟೆಲ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬದುಕಿದ  ಇಸ್ರೇಲ್​ನ ಮೊಶೆ ಹಾಲ್ಟಜ್​ಬರ್ಕ್​ ಬಾಲಕನಿಗೆ ಇಂದಿಗೂ ಆ ಕರಾಳ ಘಟನೆಯ ನೆನಪು ಅಚ್ಚಳಿಯದಂತ ಭಯವನ್ನು ಮನಸ್ಸಲ್ಲಿ ಮೂಡಿಸಿದೆ. 12 ವರ್ಷದ ಮೊಶೆಗೆ ಇಂದಿಗೂ ಕತ್ತಲೆಂದರೆ ಭಯ. ಈ ಬಗ್ಗೆ ಆತ ಏನನ್ನು ಹೇಳುವುದಿಲ್ಲ. ಆದರೆ, ರಾತ್ರಿ ಮಾತ್ರ ಆತ ಮಬ್ಬು ಬೆಳಕಲ್ಲೂ ಮಲಗುವುದಿಲ್ಲ. ಲೈಟ್​ ಆತನ ಕೋಣೆಯಲ್ಲಿ ಸದಾ ಇರಬೇಕು ಎನ್ನುತ್ತಾರೆ. ಆತನನ್ನು ರಕ್ಷಿಸಿದ ದಾದಿ ಸಾಮ್ಯೂಯಲ್​.   ಉಗ್ರರ ದಾಳಿ ನಡೆದ ಸಂದರ್ಭದಲ್ಲಿ ಮೊಶೆ ಅಪ್ಪ ರಾಬ್ಬಿ ಗವ್ರೀಯಲ್​ ಮತ್ತು ಗರ್ಭಿಣಿ ತಾಯಿ ರಿವ್ಕಾ ಮೂರನೇ ಅಂತಸ್ತಿನಲ್ಲಿದ್ದು ಉಗ್ರರ ಗುಂಡಿಗೆ ಬಲಿಯಾದರು. ಅದೃಷ್ಟವಶಾತ್​ ಮೊಶೆ  ದಾದಿ ಸಾಮ್ಯೂಯೆಲ್​ ಜೊತೆ 7ನೇ ಅಂತಸ್ತಿನಲ್ಲಿದ್ದು ಬದುಕುಳಿದ.

   ಮುಂಬೈ ದಾಳಿ ಬಗ್ಗೆ ಮಾತನಾಡಿದ​ 54 ವರ್ಷದ ಸ್ಯಾಮುಯೆಲ್​ಗೆ ಮೊಶೆ ಯಾಕೆ ಇಷ್ಟು ಭಯವನ್ನು ಎಂಬುದು ಅರ್ಥವಾಗುತ್ತಿಲ್ಲ. ಮೂರನೇ ಅಂತಸ್ತಿನವರೆಗೂ ನುಗ್ಗಿದ ಉಗ್ರರು ಎಲ್ಲವನ್ನು ನೆಲಸಮ ಮಾಡಿದ್ದರು. ಕಂಬಗಳ ಮೇಲೆ ಗುಂಡಿನ ದಾಳಿ ಗಳು ನಮ್ಮನ್ನು ಬೆಚ್ಚಿ ಬೀಳಿಸಿದ್ದವು ಎಂದು ನೆನಪು ಮಾಡಿಕೊಂಡಿದ್ದಾರೆ

   ಆ ದಾಳಿಯಲ್ಲಿ ನಾವು ಬದುಕುಳಿದಿದ್ದೆ ಒಂದು ಪವಾಡ. ದೇವರು ಎಲ್ಲವನ್ನು ಯೋಚಿಸಿ ರೂಪಿಸುತ್ತಾರೆ. ಈ ಬಗ್ಗೆ ನಾವು ಏನು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ.\

   ಇದನ್ನು ಓದಿ :  26/11 ಮುಂಬೈ ದಾಳಿಗೆ ಹತ್ತು ವರ್ಷ; ಭಯೋತ್ಪಾದನೆ ದಮನಕ್ಕೆ ಪಾಕಿಸ್ತಾನ ಸೇರಿ ಇತರೆ ದೇಶಗಳನ್ನು ಮಾತುಕತೆಗೆ ಕರೆದ ಅಮೆರಿಕ

   ಮುಂಬೈನ ಸ್ಯಾಮುಯೆಲ್​ಗೆ ಇಸ್ರೇಲ್​ 2010ರಲ್ಲಿ ಅಲ್ಲಿನ ಪೌರತ್ವವನ್ನು ನೀಡಿದೆ. ಆಕೆ ತನ್ನ ಮಕ್ಕಳನ್ನು ನೋಡಲು ಪ್ರತಿ ಎರಡು ವರ್ಷಕ್ಕೆ ಒಮ್ಮೆ ಮುಂಬೈಗೆ ಬಂದು ಹೋಗುತ್ತಾರೆ. ಸದ್ಯ ಇಸ್ರೇಲ್​ನಲ್ಲಿಯೇ ವಾಸವಿರುವ ಆಕೆ ಅಲ್ಲಿನ ಅಲೆಹ್​ ಜೆರುಸೆಲಮ್​ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸೇವೆಯನ್ನು ಮಾಡುತ್ತಿದ್ದಾರೆ. ಸದ್ಯ ಮೊಶೆ ತನ್ನ ತಾಯಿಯ ಅಜ್ಜನ ಜೊತೆ ಇದ್ದ, ಸಮಯ ಸಿಕ್ಕಾಗ ಸ್ಯಾಮುಯೆಲ್​ ಆತನನ್ನು ಭೇಟಿಯಾಗುತ್ತಾರಂತೆ.

   First published: