Viral Video: ಮೃತ ತಾಯಿಯನ್ನು ತಬ್ಬಿ ಅಳುತ್ತಿದ್ದ ಕೋತಿಮರಿಗೆ ಹಾಲು ಕುಡಿಸಿದ ಸ್ವಯಂ ಸೇವಕರು

ತಾಯಿಯ ಹಾಲಿನಿಂದ ವಂಚಿತವಾಗಿರುವ ಆ ಮಂಗನ ಮರಿಗೆ , ಬಾಟಲಿ ಹಾಲನ್ನು ಕುಡಿಸುತ್ತಿರುವ ಆ ವಿಡಿಯೋ, ಸಾಮಾಜಿಕ ಮಾಧ್ಯಮದಲ್ಲಿ ಇದುವರೆಗೆ ಸುಮಾರು 18 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

ಮರಿ ಕೋತಿ

ಮರಿ ಕೋತಿ

  • Share this:
ಮುದ್ದಾದ ಪುಟ್ಟ ಮಂಗನ ಮರಿಯೊಂದಕ್ಕೆ (Baby Monkey) ಬಾಟಲಿಯಲ್ಲಿ ಹಾಲು ಕುಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ (Viral) ಆಗಿದೆ. ಮಗುವಾಗಿರಲಿ, ಮಂಗನ ಮರಿಯಾಗಿರಲಿ, ಹಸುಳೆಗಳಿಗೆ ಅಮ್ಮನ ಅಪ್ಪುಗೆ ಮತ್ತು ಎದೆ ಹಾಲಿಗಿಂತ ಬೇರೆ ಪ್ರಪಂಚವಿಲ್ಲ. ಕಣ್ಣಿನಿಂದ ಸುತ್ತಲಿನ ಪ್ರಪಂಚವನ್ನು ನೋಡಿದರೂ, ಅವುಗಳಿಗೆ ಅಮ್ಮನೇ ಎಲ್ಲ, ಅಮ್ಮನ ಮಡಿಲೇ ಪ್ರಪಂಚ. ವಿಡಿಯೋದಲ್ಲಿರುವ (Video) ಮಂಗನ ಮರಿಯೂ ಕೂಡ ಇದುವರೆಗೆ ತನ್ನ ಅಂತದ್ದೇ ಪ್ರಪಂಚದಲ್ಲಿ ಬದುಕಿತ್ತು. ಆದರೆ ಇಂದು ತಾಯಿ ಇಲ್ಲದೆ ತಬ್ಬಲಿಯಾಗಿದೆ. ಹೌದು, ತನ್ನ ತಾಯಿ ಸತ್ತಿರುವುದನ್ನು ಅರಿಯದೇ, ತಾಯಿಯನ್ನು ತಬ್ಬಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಆ ಮಂಗನ ಮರಿಯನ್ನು ಬೆಸೆಂಟ್ ಮೆಮೋರಿಯಲ್ ಅನಿಮಲ್ ಡಿಸ್ಪೆನ್ಸರಿಯ ಸ್ವಯಂ ಸೇವಕರು ರಕ್ಷಿಸಿ, ಆಶ್ರಯ ನೀಡಿದ್ದಾರೆ.

18 ಸಾವಿರಕ್ಕೂ ಹೆಚ್ಚು ವೀಕ್ಷಣೆ

ಈಗ ಆ ಮಂಗನ ಮರಿಗೆ ತಾಯಿಯೂ ಇಲ್ಲ, ಎದೆ ಹಾಲೂ ಇಲ್ಲ. ಬೆಸೆಂಟ್ ಮೆಮೋರಿಯಲ್ ಎನಿಮಲ್ ಡಿಸ್ಪೆನ್ಸರಿಯೇ ಸದ್ಯಕ್ಕೆ ಆಶ್ರಯ ತಾಣ. ತಾಯಿಯ ಹಾಲಿನಿಂದ ವಂಚಿತವಾಗಿರುವ ಆ ಮಂಗನ ಮರಿಗೆ , ಬಾಟಲಿ ಹಾಲನ್ನು ಕುಡಿಸುತ್ತಿರುವ ಆ ವಿಡಿಯೋ, ಸಾಮಾಜಿಕ ಮಾಧ್ಯಮದಲ್ಲಿ ಇದುವರೆಗೆ ಸುಮಾರು 18 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

ಮರಿ ಮಂಗನ ಜೀವ ಉಳಿಯಿತೆಂದು ಸಂಭ್ರಮ

ನೆಟ್ಟಿಗರಂತೂ ಆ ಮುಗ್ಧ ಮರಿ ಮಂಗನ ಜೀವ ಉಳಿಯಿತೆಂದು ಸಂಭ್ರಮ ಪಡುತ್ತಿದ್ದಾರೆ. ಪ್ರತಿಯೊಬ್ಬರೂ ಬೆಸೆಂಟ್ ಮೆಮೋರಿಯಲ್ ಎನಿಮಲ್ ಡಿಸ್ಪೆನ್ಸರಿ ಸ್ವಯಂ ಸೇವಕರನ್ನು ಹೊಗಳುತ್ತಿದ್ದಾರೆ.

ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋ

ಈಗ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋವನ್ನು, ಐಎಎಸ್ ಅಧಿಕಾರಿ, ಸುಪ್ರಿಯಾ ಸಾಹು ಅವರು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. 21 ಸೆಕೆಂಡುಗಳ ಅವಧಿಯ ಈ ವಿಡಿಯೋದಲ್ಲಿ ಆ ಪುಟ್ಟ ಮುದ್ದಾದ ಮಂಗನ ಮರಿ , ಅತ್ಯಂತ ತನ್ಮಯವಾಗಿ ಬಾಟಲಿಯಿಂದ ಹಾಲನ್ನು ಕುಡಿಯುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ: Japanese Children: ಹುಟ್ಟಿದ 2 ವರ್ಷದಲ್ಲೇ ಏಕಾಂಗಿಯಾಗಿ ಶಾಪಿಂಗ್ ಮಾಡುತ್ತಾರಂತೆ ಜಪಾನಿನ ಮಕ್ಕಳು! ಏನ್ ಗುರು ಇದು..

ಆ ಪುಟ್ಟ ಕಂದಮ್ಮನನ್ನು ರಕ್ಷಿಸಿದ ಸಂಸ್ಥೆಯವರಲ್ಲೇ ಒಬ್ಬರು, ತಮ್ಮ ಮಡಿಲಲ್ಲಿ ಇರಿಸಿಕೊಂಡು, ಆಹಾರ ನೀಡುತ್ತಿರುವ ದೃಶ್ಯ ನೋಡುಗರ ಹೃದಯವನ್ನು ತಟ್ಟುತ್ತದೆ. ಮಾನವೀಯತೆಯುಳ್ಳವರ ಕೈಗೆ ಸಿಕ್ಕಿ, ಜೀವ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಆ ಮಂಗನ ಮರಿಯ ಅದೃಷ್ಟವೆಂದೇ ಹೇಳಬಹುದು.





ಥ್ಯಾಂಕ್ಸ್ ಎಂದ ಐಎಎಸ್ ಅಧಿಕಾರಿ ಸುಪ್ರಿಯಾ

“ಮೃತಪಟ್ಟಿದ್ದ ತನ್ನ ತಾಯಿಯನ್ನು ತಬ್ಬಿಕೊಂಡ ಸ್ಥಿತಿಯಲ್ಲಿದ್ದ ಮರಿ ಕೋತಿಯನ್ನು ರಕ್ಷಿಸಿದ ಬೆಸೆಂಟ್ ಮೆಮೋರಿಯಲ್ ಅನಿಮಲ್ ಡಿಸ್ಪೆನ್ಸರಿಯ ಸ್ವಯಂ ಸೇವಕರಿಗೆ ವಂದನೆಗಳು. ನಿಮ್ಮ ಸೇವೆಗೆ ಧನ್ಯವಾದಗಳು” ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಆ ಪೋಸ್ಟ್‌ಗೆ ಅಡಿಬರಹವನ್ನು ನೀಡಿದ್ದಾರೆ.

ಬೆಸೆಂಟ್ ಮೆಮೋರಿಯಲ್ ಅನಿಮಲ್ ಡಿಸ್ಪೆನ್ಸರಿಯ ಸ್ವಯಂ ಸೇವಕರು

ಈ ವಿಡಿಯೋವನ್ನು ವೀಕ್ಷಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಬೆಸೆಂಟ್ ಮೆಮೋರಿಯಲ್ ಅನಿಮಲ್ ಡಿಸ್ಪೆನ್ಸರಿಯ ಸ್ವಯಂ ಸೇವಕರ ಕರುಣೆಯನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, ಈ ಟ್ವಿಟ್ಟರ್ ಪೋಸ್ಟ್‌ಗೆ ಅಂತಹ ಲೆಕ್ಕವಿಲ್ಲದಷ್ಟು ಹೊಗಳಿಕೆಯ ಪ್ರತಿಕ್ರಿಯೆಗಳು ಹರಿದು ಬಂದಿವೆ.

ಇದನ್ನೂ ಓದಿ: Snakes Video: ನಾನು ಕೊಡಲ್ಲ, ಎರಡು ನನಗೆ ಬೇಕೆಂದು ಕೋಳಿ ಮರಿಯನ್ನ ಹೊತ್ತೊಯ್ದ ನಾಗರಾಜ: ವಿಡಿಯೋ ನೋಡಿ

“ಅಮೂಲ್ಯವಾದ ಜೀವವನ್ನು ರಕ್ಷಿಸಿದಕ್ಕೆ ಸ್ವಯಂ ಸೇವಕರೇ ನಿಮಗಿದೋ ಹ್ಯಾಟ್ಸ್ ಆಫ್” ಎಂದು ಒಬ್ಬ ಬಳಕೆದಾರರು ಬರೆದಿದ್ದರೆ, “ಅತ್ಯಂತ ಶ್ಲಾಘನೀಯ. ದೇವರು ಸ್ವಯಂ ಸೇವಕರನ್ನು ಆಶೀರ್ವದಿಸಲಿ” ಎಂದು ಇನ್ನೊಬ್ಬ ನೆಟ್ಟಿಗ ಪ್ರತಿಕ್ರಿಯೆ ನೀಡಿದ್ದಾರೆ. “ಅದ್ಭುತ ಅಲ್ವಾ.. ಡಿಸ್ಪೆನ್ಸರಿಯ ಸಿಬ್ಬಂದಿಗಳಿಗೆ ಗೌರವ..” ಎಂದು ಇನ್ನೊಬ್ಬರು ಹೊಗಳಿದ್ದರೆ, “ಅಮೂಲ್ಯವಾದ ಜೀವವನ್ನು ರಕ್ಷಿಸಿದಕ್ಕೆ ಸ್ವಯಂ ಸೇವಕರೇ ವಂದನೆಗಳು. ಇದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಮೇಡಂ” ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಮಾದರಿ ಕಾರ್ಯ ಎಂದು ಪ್ರಶಂಸೆ

“ಇದನ್ನು ಯಾರು ಮಾಡಿದ್ದಾರೋ, ಅವರನ್ನು ಹೊಗಳಲು ಪದಗಳೇ ಸಿಗುತ್ತಿಲ್ಲ” ಎಂದು ಇನ್ನೊಬ್ಬ ನೆಟ್ಟಿಗ ಪ್ರಶಂಸಿಸಿದ್ದಾರೆ. “ಅತ್ಯುತ್ತಮ ಸೇವೆ, ಅಭಿನಂದನೆಗಳು” ಎಂದು ಮತ್ತೊಬ್ಬ ನೆಟ್ಟಿಗ ಬರೆದರೆ, “ ಮರಿ ಎಷ್ಟು ಮುದ್ದಾಗಿದೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಪ್ರಾಮಾಣಿಕ ಹೃದಯಗಳಿಗೆ ವಂದನೆಗಳು” ಎಂದು ಮತ್ತೊಬ್ಬ ನೆಟ್ಟಿಗರು ಸಂತೋಷದಿಂದ ಹೊಗಳಿದ್ದಾರೆ.
Published by:Divya D
First published: