OMG: ಒಂದೇ ವಾರದಲ್ಲಿ 10 ಬಾರಿ ಮಾರಾಟವಾಯ್ತು ಈ ಕಂದಮ್ಮ! 11ನೇ ಬಾರಿ ಅಮ್ಮನ ಮಡಿಲು ಸೇರಿದ್ದು ಹೇಗೆ?

3 ತಿಂಗಳ ಹೆಣ್ಣು ಮಗುವೊಂದು ಕೇವಲ 1 ವಾರದಲ್ಲಿ 10 ಬಾರಿ ಮಾರಾಟವಾಗಿ, 11ನೇ ಬಾರಿ ಅಮ್ಮನ ಮಡಿಲು ಸೇರಿದೆ. ಮೊದಲು 70 ಸಾವಿರಕ್ಕೆ ಮಾರಾಟವಾದ ಕಂದಮ್ಮ, ಕೊನೆಯದಾಗಿ ಎರಡೂವರೆ ಲಕ್ಷಕ್ಕೆ ಸೇಲ್ ಆಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಂಧ್ರ ಪ್ರದೇಶ: ‘ಬೇಟಿ ಬಚಾವೋ, ಬೇಟಿ ಪಡಾವೋ‘ (Beti Bachao Beti Padhao) ಅಂತ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಕರೆ ನೀಡಿದ್ದರು. ಅದರ ಉದ್ದೇಶ ಹೆಣ್ಣು ಮಗುವಿನ (Baby Girl) ಹತ್ಯೆ ತಡೆಗಟ್ಟುವುದು, ಹೆಣ್ಣು ಮಗುವಿನ ಶಿಕ್ಷಣಕ್ಕೆ (Education) ಉತ್ತೇಜನ ಕೊಡುವುದು ಆಗಿತ್ತು. ಪ್ರಧಾನಿಯವರೇ ಹೇಳಲಿ, ಯಾರೇ ಹೇಳಲಿ. ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಹೆಣ್ಣು ಶಿಶುಗಳ ಹತ್ಯೆ, ಹೆಣ್ಣು ಎಂಬ ತಾತ್ಸಾರ ಮಾತ್ರ ನಿಂತಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಆಂಧ್ರ ಪ್ರದೇಶ (Andhra Pradesh) ರಾಜ್ಯದ ಗುಂಟೂರಿನಲ್ಲಿ (Guntur) ಘಟನೆಯೊಂದು ನಡೆದಿದೆ.

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಘಟನೆ

ಯಾರೂ ಊಹಿಸಲೂ ಆಗದ ಘಟನೆಯೊಂದು ಆಂಧ್ರ ಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ ನಡೆದಿದೆ. ಹುಟ್ಟಿ ಕೇವಲ ಮೂರು ತಿಂಗಳು ಅಷ್ಟೇ ಕಳೆದಿದ್ದ ಪುಟ್ಟ ಕಂದಮ್ಮನನ್ನು ಹಣಕ್ಕಾಗಿ ಮಾರಾಟ ಮಾಡಲಾಗಿದೆ. ಅಂದು ಒಂದಲ್ಲ, ಎರಡಲ್ಲ, ಬರೋಬ್ಬರಿ 10 ಬಾರಿ.

ಒಂದೇ ವಾರದಲ್ಲಿ 10ಕ್ಕೂ ಹೆಚ್ಚು ಬಾರಿ ಸೇಲ್

ಮತ್ತೊಂದು ಆಘಾತಕಾರಿ ವಿಚಾರ ಅಂದ್ರೆ ಆ ಪುಟ್ಟ ಮಗುವನ್ನು ಒಂದೇ ವಾರದೊಳಗೆ 10ಕ್ಕೂ ಹೆಚ್ಚು ಬಾರಿ ಸೇಲ್ ಮಾಡಲಾಗಿದೆ. ಖುದ್ದು ಆ ಪುಟ್ಟ ಮಗುವಿನ ತಂದೆಯೇ ಸೇಲ್ ಮಾಡಿದ್ದಾನೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ಪ್ರದೇಶಗಳಿಗೆ ಸೇರಿದವರಿಂದ ಮಗು ಕೈ ಬದಲಾಗಿದೆ.

ಇದನ್ನೂ ಓದಿ: Murder Case: ಗುರಾಯಿಸಿದ ಎಂಬ ಕಾರಣಕ್ಕೆ ಯುವಕನನ್ನೇ ಕೊಂದಿದ್ದ ಪಾಪಿಗಳು! ಹಂತಕರಿಗೆ ಈಗ ಜೀವಾವಧಿ ಶಿಕ್ಷೆ

 ಮಾರಾಟವಾಗಿದ್ದ ಕಂದಮ್ಮ ಯಾರದ್ದು?

ಗಣಲಯ್ಯಪೇಟೆಯ ದಿನಗೂಲಿ ಕೆಲಸಗಾರ ಎಂ.ಮನೋಜ್‌ ಎಂಬುವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಈತ ಕುಡಿತದ ಚಟ ಹೊಂದಿದ್ದ. ತನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕಲಾಗದೆ ತನ್ನ ಕಿರಿಯ ಮಗುವನ್ನು ಮಾರಲು ನಿರ್ಧರಿಸಿದ್ದ.

70 ಸಾವಿರಕ್ಕೆ ಸೇಲ್ ಆಯ್ತು ಹೆಣ್ಣು ಮಗು

ಮೊದಲು ನಾಗಲಕ್ಷ್ಮಿ ಎಂಬುವವರ ಮೂಲಕ ಮಗುವನ್ನು ನಲ್ಗೊಂಡದ ಗಾಯತ್ರಿ ಎಂಬುವವರಿಗೆ 70 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಇದನ್ನು ಅರಿಯದ ಮಗುವಿನ ಅಜ್ಜಿ ನಾಪತ್ತೆ ದೂರು ದಾಖಲಿಸಿದ್ದಾರೆ. ಮಗುವಿನ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.

ಒಬ್ಬರಿಂದ ಮತ್ತೊಬ್ಬರ ಕೈ ಸೇರಿದ ಕಂದಮ್ಮ

ಅಲ್ಲಿಂದ ಮಗುವನ್ನು ಮತ್ತೆ ಕೆಲವರಿಗೆ ಮಾರಾಟ ಮಾಡಲಾಗಿದೆ. 2.50 ಲಕ್ಷಕ್ಕೆ ಮಗುವನ್ನು ಖರೀದಿಸಿದ ಕೊನೆಯ ವ್ಯಕ್ತಿ ವಿ ರಮೇಶ್ ಅಂತ ಗುರುತಿಸಲಾಗಿದೆ. ಕೊನೆಗೆ ಮಗುವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.  ಕೊನೆಗೂ ಪೊಲೀಸರು ಪಶ್ಚಿಮ ಗೋದಾವರಿ ಜಿಲ್ಲೆಯ ವ್ಯಕ್ತಿಯೊಬ್ಬನಿಂದ ಶಿಶುವನ್ನು ರಕ್ಷಿಸಿ ಬಾಲಕಿಯನ್ನು ತಾಯಿಯೊಂದಿಗೆ ಸೇರಿಸಿದ್ದಾರೆ.

ಪೊಲೀಸರ ತನಿಖೆ ವೇಳೆ ಗೊತ್ತಾಗಿದ್ದು ಏನು?

ಮಗುವಿನ ಮಾರಾಟದಲ್ಲಿ ತೊಡಗಿರುವ ಎಲ್ಲರೂ ಯಾವುದೇ ಸಂಘಟಿತ ಮಕ್ಕಳ ಕಳ್ಳಸಾಗಣೆ ದಂಧೆಯ ಭಾಗವಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚು ಹಣ ಗಳಿಸಲು ಹೀಗೆ ಮಾಡಿದ್ದಾರೆ ಎಂದು ಡಿಎಸ್ಪಿ ವಿವರಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬಾಲಕಿಯ ತಾಯಿ ತನ್ನ ಮಗುವನ್ನು ಮಾರಾಟ ಮಾಡುವ ವಿಷಯ ತಿಳಿದಿದ್ದರೂ, ಮನೋಜ್ ಅದನ್ನು ಬಹಿರಂಗಪಡಿಸಿದರೆ ತನಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಮೌನವಾಗಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: Murder Case: ಪ್ರೇಯಸಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿದ ಪಾಪಿ ಪ್ರಿಯಕರ! ಎಸ್ಕೇಪ್ ಆಗುತ್ತಿದ್ದವ ಸಿಕ್ಕಿಬಿದ್ದಿದ್ದೇ ರೋಚಕ ಕಥೆ

ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಅರೆಸ್ಟ್

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಮಗುವನ್ನು ಮಾರಾಟ ಮಾಡಿದ್ದ ನಾಗಲಕ್ಷ್ಮಿ, ಗಾಯತ್ರಿ, ಬಿ. ನಂದು, ಬಿ. ಬಾಲ ವರ್ಧಿ ರಾಜು ನಾಯ್ಕ್, ಎಸ್‌.ಕೆ. ನೂರ್ಜಹಾನ್, ಎ. ಉದಯ್ ಕಿರಣ್, ಬಿ. ಉಮಾದೇವಿ, ಪಿ. ಶ್ರಾವಣಿ, ಜಿ. ವಿಜಯಲಕ್ಷ್ಮಿ ಮತ್ತು ವಿ. ರಮೇಶ್ ಎಂಬುವರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 372 ಮತ್ತು ಜುವೆನೈಲ್ ಜಸ್ಟೀಸ್ ಆಕ್ಟ್, 2015 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published by:Annappa Achari
First published: