9 ತಿಂಗಳ ಹೆಣ್ಣು ಮಗುವಿನ ಮೇಲೆ ಸಾಕಿದ ಬೆಕ್ಕು ಮಲಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಹಸುಗೂಸು

ಸಾಕಿದ ಬೆಕ್ಕಿನಿಂದ ಮಗು ಹೀಗೆ ಮೃತಪಟ್ಟಿರುವುದು ಇದೇ ಮೊದಲ ಪ್ರಕರಣ ಏನಲ್ಲ. 2000 ಡಿಸೆಂಬರ್​ನಲ್ಲಿ ಕಿಂಗ್​ಸ್ಟೈಟ್​ಗಾನ್​ನಲ್ಲಿ ಆರು ವಾರಗಳ ಮಗುವಿನ ಮುಖದ ಮೇಲೆ ಸಾಕಿದ ಬೆಕ್ಕು ಮಲಗಿದ ಪರಿಣಾಮ ಮಗು ಉಸಿರುಗಟ್ಟಿ ಸಾವನ್ನಪ್ಪಿತ್ತು. ಅದೇ ರೀತಿ ರಷ್ಯಾದ ಜ್ಲಟೋಸ್ಟ್​ನಲ್ಲಿ ಇದೇ ರೀತಿಯಾಗಿ ಒಂದು ತಿಂಗಳ ಮಗು ಮೃತಪಟ್ಟಿತ್ತು.

HR Ramesh | news18-kannada
Updated:December 3, 2019, 7:28 PM IST
9 ತಿಂಗಳ ಹೆಣ್ಣು ಮಗುವಿನ ಮೇಲೆ ಸಾಕಿದ ಬೆಕ್ಕು ಮಲಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಹಸುಗೂಸು
ಪ್ರಾತಿನಿಧಿಕ ಚಿತ್ರ
  • Share this:
ಮನೆಯಲ್ಲಿ ತೊಟ್ಟಿಲಲ್ಲಿ ಮಲಗಿದ್ದ ಒಂಭತ್ತು ತಿಂಗಳ ಹೆಣ್ಣು ಮಗುವಿನ ಮುಖದ ಮೇಲೆ ಸಾಕಿದ್ದ ಬೆಕ್ಕು ಮಲಗಿದ ಪರಿಣಾಮ ಮಗು ಉಸಿರುಗಟ್ಟಿ ಮೃತಪಟ್ಟ ಧಾರುಣ ಘಟನೆ ಉಕ್ರೇನ್​ನಲ್ಲಿ ನಡೆದಿದೆ.

ಅಲೆಗ್ಸಾಂಡ್ರಾ ಹೆಸರಿನ 9 ತಿಂಗಳ ಹೆಣ್ಣು ಮಗು ಮನೆಯೊಳಗೆ ಮಲಗಿತ್ತು. ಮಗುವಿನ ತಾಯಿ 22 ವರ್ಷದ ಸ್ನೇಝಾನಾ ಮನೆಕೆಲಸಗಳನ್ನು ಮುಗಿಸಿ, ಮನೆ ಹಿಂಭಾಗದ ಹಿತ್ತಲಿನಲ್ಲಿ ಇದ್ದಾಗ ಈ ಅವಘಡ ಸಂಭವಿಸಿದೆ.

ತಾಯಿಗೆ ಗೊತ್ತಾಗದ ಹಾಗೆ ಎರಡು ಬೆಕ್ಕುಗಳು ಮಗು ಮಲಗಿದ್ದ ತೊಟ್ಟಿಲಿನೊಳಗೆ ನುಗ್ಗಿವೆ. ಆನಂತರ ಬೆಕ್ಕು ಮಗುವಿನ ಮುಖದ ಮೇಲೆ ಕುಳಿತಿದೆ. ತಾಯಿ ಒಳಗೆ ಬಂದು ಮಗುವಿನ ತೊಟ್ಟಿಲು ನೋಡಿದಾಗ ಮಗುವಿನ ಮುಖದ ಮೇಲೆ ಬೆಕ್ಕು ಕುಳಿತಿರುವುದು ಕಂಡು ಬಂದಿದೆ. ಬಳಿಕ ಬೆಕ್ಕನ್ನು ಓಡಿಸಿ, ಮಗುವನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಆದರೆ ಮಗು ಎಚ್ಚರವಾಗಲಿಲ್ಲ. ಮಗು ಉಸಿರಾಡುತ್ತಿಲ್ಲ ಎಂಬ ವಾಸ್ತವ ಅರಿವಿಗೆ ಬಂದಿದೆ. ಡೈಲಿ ಮೇಲ್ ವರದಿ ಪ್ರಕಾರ, ತಾಯಿ ಅರೆ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅವರು ಸುಮಾರು 40 ನಿಮಿಷಗಳ ಕಾಲ ಮಗು ಮರು ಉಸಿರಾಟಕ್ಕೆ ಪ್ರಯತ್ನಿಸಿದ್ದಾರೆ. ಮಗುವನ್ನು ಆಸ್ಪತ್ರೆಗೆ ಸೇರಿಸುವ ಕೆಲಸಕ್ಕೂ ಮುಂದಾಗಿದ್ದಾರೆ. ಆದರೆ, ಮಗು ಅಷ್ಟು ಹೊತ್ತಿಗಾಗಲೇ ಪ್ರಾಣ ಬಿಟ್ಟಿದೆ.

ಇದನ್ನು ಓದಿ: ಮಧ್ಯಾಹ್ನದ ಬಿಸಿಯೂಟದಲ್ಲಿ ಇಲಿ; 9 ವಿದ್ಯಾರ್ಥಿಗಳು ಅಸ್ವಸ್ಥ

ಸಾಕಿದ ಬೆಕ್ಕಿನಿಂದ ಮಗು ಹೀಗೆ ಮೃತಪಟ್ಟಿರುವುದು ಇದೇ ಮೊದಲ ಪ್ರಕರಣ ಏನಲ್ಲ. 2000 ಡಿಸೆಂಬರ್​ನಲ್ಲಿ ಕಿಂಗ್​ಸ್ಟೈಟ್​ಗಾನ್​ನಲ್ಲಿ ಆರು ವಾರಗಳ ಮಗುವಿನ ಮುಖದ ಮೇಲೆ ಸಾಕಿದ ಬೆಕ್ಕು ಮಲಗಿದ ಪರಿಣಾಮ ಮಗು ಉಸಿರುಗಟ್ಟಿ ಸಾವನ್ನಪ್ಪಿತ್ತು. ಅದೇ ರೀತಿ ರಷ್ಯಾದ ಜ್ಲಟೋಸ್ಟ್​ನಲ್ಲಿ ಇದೇ ರೀತಿಯಾಗಿ ಒಂದು ತಿಂಗಳ ಮಗು ಮೃತಪಟ್ಟಿತ್ತು.

First published: December 3, 2019, 7:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading