Baby Elephant Viral Video: ಬಾಲ್ಯ ನೆನಪು ಮಾಡುತ್ತಿರುವ ಆನೆ - ಕ್ಯೂಟ್ ವಿಡಿಯೋ ಮಿಸ್ ಮಾಡ್ಕೊಬೇಡಿ

ಕಿನಿ ನಿದ್ದೆ ಮಾಡಲು ಸಿದ್ಧವಿಲ್ಲ. ಆಕೆ ಜೊತೆಯಲ್ಲಿ ಹಾಲಿನ ಬಾಟೆಲ್ ಗಳಿವೆ. ಆಕೆಯ ಸ್ನೇಹಿತ ಪಕ್ಕದಲ್ಲಿಯೇ ನಿದ್ದೆಗೆ ಜಾರಿದ್ರೂ ಕಿನಿಯ ತುಂಟಾಟ ನಿಂತಿಲ್ಲ. ಇಡೀ ನರ್ಸರಿ ನಿಶ್ಯಬ್ದ ಆಗಿದ್ರೂ ಮೋಜಿನ ಹುಡುಗಿ ಆಟ ಇನ್ನು ಮುಗಿದಿಲ್ಲ.

ತುಂಟ ಆನೆಯ ಹೆಸರು ಕಿನಿ

ತುಂಟ ಆನೆಯ ಹೆಸರು ಕಿನಿ

  • Share this:
ಬಾಲ್ಯದಲ್ಲಿ ತಾಯಂದಿರು ಮಕ್ಕಳನ್ನು (Children) ಮಲಗಿಸುವ ಕಷ್ಟ  ಎಲ್ಲರಿಗೂ ಗೊತ್ತಿರುತ್ತದೆ. ಒಮ್ಮೊಮ್ಮೆ ಮಕ್ಕಳು ರಾತ್ರಿ ಒಂದು ಗಂಟೆಯಾದ್ರೂ ನಿದ್ದೆ ಮಾಡದೇ ಹಠ ಮಾಡುತ್ತೇವೆ. ಮಕ್ಕಳಿಂದಾಗಿ ಅಮ್ಮಂದಿರು (Mother)ಜಾಗರಣೆ ಮಾಡುವಂತಾಗುತ್ತದೆ. ಕೆಲವರಿಗೆ ತಮ್ಮಂದಿರು ಅಥವಾ ತಮ್ಮ ಮಕ್ಕಳೇ ಈ ರೀತಿ ಹಠ ಮಾಡಿರುವ ದೃಶ್ಯಗಳು ಕಣ್ಮುಂದೆಯೇ ಬರುತ್ತವೆ. ಇದೀಗ ಅಂತಹವುದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಅಗುತ್ತಿದೆ. ಆದ್ರೆ ಈ ವಿಡಿಯೋ ಯಾವುದೇ ಮಕ್ಕಳದ್ದು ಅಲ್ಲ. ಬದಲಾಗಿ ಪುಟ್ಟ ಆನೆ ಮರಿಯ ವಿಡಿಯೋ.  ಈ ಆನೆ ಮರಿ (Baby Elephant) ನಿದ್ದೆ ಮಾಡುತ್ತಿರುವ ದೃಶ್ಯ ಹಲವರಿಗೆ ತಮ್ಮ ಬಾಲ್ಯದ ದಿನಗಳನ್ನು ಕಣ್ಮುಂದೆ ತಂದಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಮನೆಯಲ್ಲಿಯ ಮಕ್ಕಳ ತುಂಟ ವಿಡಿಯೋಗಳನ್ನು ಕಮೆಂಟ್ (Comment) ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ಆನೆ ತನ್ನ ಕೆಲಸ ಮುಗಿದ್ರೂ ನಿದ್ದೆ ಮಾಡದೇ ತುಂಟತನ ಮಾಡಿದೆ.

ಕಿನಿಯ ತುಂಟ ವಿಡಿಯೋ ವೈರಲ್:

ಈ ತುಂಟ ಆನೆಯ ಹೆಸರು ಕಿನಿ. ಶೆಲ್ಡ್ರಿಕ್ ವೈಲ್ಡ್ ಲೈಫ್ (Sheldrick Wildlife Trust) ಇನ್ ಸ್ಟಾಗ್ರಾಂನಲ್ಲಿ ಕಿನಿಯ (Kinyei ) ವಿಡಿಯೋ ಹಂಚಿಕೊಳ್ಳಲಾಗಿದೆ. ಕಿನಿಗೆ ಅಲ್ಲಿಯ ಸಿಬ್ಬಂದಿ ಉಳಿದು ಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಆದ್ರೆ ನಿದ್ದೆ ಮಾಡದ ಕಿನಿ, ಮುಂದಿನಿಂದ ಹೊರಗೆ ಇಣುಕಿ ನೋಡುತ್ತಿದೆ. ಸಿಬ್ಬಂದಿಗೆ ಒಳಗೆ ಹೋಗು ಅಂತ ಹೇಳಿದ್ರೂ ಕಾಲು ಆಚೆ ಹಾಕಿ ಹೊರಗೆ ಬರಲು ಪ್ರಯತ್ನಿಸುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ ಸ್ಟಾಗ್ರಾಂನಲ್ಲಿ ಕಿನಿಯ ವಿಡಿಯೋ(Kinyei  Video)ಗೆ 71 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಒಂದು ಸಾವಿರಕ್ಕೂ ಅಧಿಕ ಕಮೆಂಟ್ ಗಳನ್ನು ಕಿನಿ ಪಡೆದುಕೊಂಡಿದ್ದಾಳೆ.  ನೆಟ್ಟಿಗರು ಪ್ರೀತಿ ಸೂಚಕ ಎಮೋಜಿ ಹಾಕುವ ಮೂಲಕ ಕಿನಿಗೆ ತಮ್ಮ ಪ್ರೇಮವನ್ನು  ವ್ಯಕ್ತಪಡಿಸಿದ್ದಾರೆ.




ಇದನ್ನೂ ಓದಿ:  New Rules: ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ ಜೋಪಾನ!

ಯಾರು ಈ ಕಿನಿ?:

ಕಿನಿ ಮೂರು ವರ್ಷದವಳಿದ್ದಾಗ ಅನಾಥವಾಗಿ ಅರಣ್ಯದಲ್ಲಿ ತಿರುಗಾಡುತ್ತಿದ್ದಳು. ಒಮ್ಮೆ ಸಿಂಹದ ಗುಂಪುಗಳಲ್ಲಿ ಆನೆ ಒಂಟಿಯಾಗಿ ಓಡಾಡುತ್ತಿರೋವ ದೃಶ್ಯ ಸಿಬ್ಬಂದಿಗೆ ಕಂಡು ಬಂದಿತ್ತು. ಆದ್ರೆ ಕಿನಿ ಅಂದೇ ಸಿಂಹಗಳ ಆಹಾರವಾಗುತ್ತಿದ್ದಳು. ಆದ್ರೆ ಕಿನಿಯ ಅದೃ ಷ್ಟ ಚೆನ್ನಾಗಿದ್ದರಿಂದ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ.  ಅಂದು ಆಕೆಯ ಅದೃಷ್ಟ ಮಧ್ಯ ಪ್ರವೇಶಿಸಿದ್ದರಿಂದ ಕಿನಿ ವೈಲ್ಡ್ ಲೈಫ್ ನಲ್ಲಿ ಎಲ್ಲರನ್ನು ತನ್ನ ತುಂಟಾಟಗಳಿಂದ ರಂಜಿಸುತ್ತಿದ್ದಾಳೆ ಎಂದು ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ:  Sneha - Prasanna: ಜಾಹೀರಾತುಗಳಿಂದಲೇ ಕೋಟಿ ಕೋಟಿ ಗಳಿಸುತ್ತಿದ್ದಾರೆ ಈ ಸ್ಟಾರ್​ ದಂಪತಿ..!

ಪ್ರತಿನಿತ್ಯ ಕಿನಿಯ ತುಂಟಾಟ:

ಇದೇ ಪೋಸ್ಟ್ ನಲ್ಲಿ ಕಿನಿಯ ತುಂಟತನದ ಬಗ್ಗೆಯೂ ಬರೆಯಲಾಗಿದೆ. ಕಿನಿ ನಿದ್ದೆ ಮಾಡಲು ಸಿದ್ಧವಿಲ್ಲ. ಆಕೆ ಜೊತೆಯಲ್ಲಿ ಹಾಲಿನ ಬಾಟೆಲ್ ಗಳಿವೆ. ಆಕೆಯ ಸ್ನೇಹಿತ ಪಕ್ಕದಲ್ಲಿಯೇ ನಿದ್ದೆಗೆ ಜಾರಿದ್ರೂ ಕಿನಿಯ ತುಂಟಾಟ ನಿಂತಿಲ್ಲ. ಇಡೀ ನರ್ಸರಿ ನಿಶ್ಯಬ್ದ ಆಗಿದ್ರೂ ಮೋಜಿನ ಹುಡುಗಿ ಆಟ ಇನ್ನು ಮುಗಿದಿಲ್ಲ. ಪ್ರತಿದಿನ ಮಲಗಲು ಹಠ ಮಾಡುವ ಕಿನಿ, ಸೊಂಡಿಲನ್ನು ಕಿಟಕಿಯ ಹೊರಗೆ ಹಾಕಿ ಇಣುಕಿ ನೋಡುತ್ತಾಳೆ.

ನೆಟ್ಟಿಗರ ಕಮೆಂಟ್ :

ಕಿನಿಗೆ ಮಲಗುವ ಮುನ್ನ ಆಟ ಆಡುವ ಹಾಗೆ ಆಗಿರಬೇಕು. ತುಂಬಾ ಮುದ್ದಾದ ಕಿನಿ, ಬೇಕಾದ್ರೆ ನಾನು ಆಕೆಯ ಜೊತೆ ಆಟ  ಆಡಲು ಸಿದ್ಧನಿದ್ದೇನೆ.  ಸಿಲ್ಲಿ ಹುಡುಗಿ ಆಗಿದ್ದರಿಂದ ಅಕೆ ತುಂಟತನ ಮಾಡುತ್ತಿದ್ದಾಳೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಹಲವರು  ಕ್ಯೂಟ್, ಸೂಪರ್ ಬೇಬಿ ಅಂತೆಲ್ಲ ಬರೆದುಕೊಂಡಿದ್ದಾರೆ. ತನ್ನ ತುಂಟಾದಿಂದಲೇ ಕಿನಿ ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿದ್ದಾಳೆ.
Published by:Mahmadrafik K
First published: