ನಿಮ್ಮ ಮಗು 2021ರಲ್ಲಿ ಹುಟ್ಟಿದ್ದಾ? ಹಾಗಿದ್ರೆ 3600 ಡಾಲರ್ ಬೆನಿಫಿಟ್ ಕೊಡ್ತೀವಿ ಅಂತಿದ್ದಾರೆ ನೋಡಿ!

ತೆರಿಗೆ ಕ್ರೆಡಿಟ್ ಅನ್ನು ಎರಡು ವಿಧಾನಗಳಲ್ಲಿ ಕಳುಹಿಸಬಹುದಾಗಿದೆ. ಮಗುವಿನ ತೆರಿಗೆ ಕ್ರೆಡಿಟ್‌ನ ಅರ್ಧ ಭಾಗವು ಮಾಸಿಕ ಚೆಕ್‌ಗಳ ರೂಪದಲ್ಲಿ ಬರುತ್ತದೆ. ಇನ್ನರ್ಧ ಮೊತ್ತವನ್ನು ನಿಮ್ಮ 2021ರ ತೆರಿಗೆ ರಿಟರ್ನ್ ಅನ್ನು ನೀವು 2022ರಲ್ಲಿ ಕ್ಲೈಮ್ ಮಾಡಿದಾಗ ನೀಡಲಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  ಅಮೆರಿಕದ ಪ್ರಜೆಗಳಾಗಿರುವ ತಂದೆ ತಾಯಿ ಹಾಗೂ 2021ರ ಇಸವಿಯಲ್ಲಿ ಹುಟ್ಟಿದ ಮಗುವಿಗಾಗಿ ಅಲ್ಲಿನ ಸರಕಾರವು ವಿಶೇಷ ಯೋಜನೆಯನ್ನು ಒದಗಿಸಿದ್ದು, ಮಗುವಿನ ಲಾಲನೆ ಪಾಲನೆ ಹಾಗೂ ಇನ್ನಿತರ ಖರ್ಚುವೆಚ್ಚಗಳನ್ನು ಭರಿಸಲು ತೆರಿಗೆ ಕ್ರೆಡಿಟ್ ಸೇವೆಯನ್ನು ಒದಗಿಸಲಾಗುತ್ತದೆ.2021ರಲ್ಲಿ ಹುಟ್ಟಿದ ಕಂದನ ಪೋಷಕರಿಗೆ ಹೆಚ್ಚುವರಿ ಹಣ ದೊರೆಯುವ ಅವಕಾಶವಿದ್ದು ಮಗುವಿನ ಖರ್ಚುವೆಚ್ಚಗಳಿಗೆ ಈ ಹಣ ನೀಡಲಾಗುತ್ತದೆ. ಇದೀಗ ತಾನೇ ಜನಿಸಿದ ಮಗುವಿನ ಖರ್ಚುವೆಚ್ಚಗಳ ತ್ವರಿತವಾಗಿ ಏರಿಕೆಯಾಗುವುದು ಸಹಜವಾಗಿದೆ. ಈ ಸಮಯದಲ್ಲಿ ಹೆಚ್ಚಿನ ದುಡ್ಡು ಮಗುವಿನ ತಂದೆ ತಾಯಿಯ ಕೈ ಸೇರುವುದರಿಂದ ಕೊಂಚ ಅನುಕೂಲವಾಗಲಿದೆ. ಸಾಂಕ್ರಾಮಿಕದ ಈ ಅವಧಿಯಲ್ಲಿ ಮಗುವಿನ ತೆರಿಗೆ ಕ್ರೆಡಿಟ್ ಯೋಜನೆಯು ಪೋಷಕರಿಗೆ ವರದಾನವಾಗಲಿದೆ.


  ಕಳೆದ ವರ್ಷಗಳಲ್ಲಿ ಪೋಷಕರು ಮಗುವಿನ ತೆರಿಗೆ ರಿಟರ್ನ್‌ಗಳನ್ನು ಕ್ಲೈಮ್ ಮಾಡಿದ್ದು ರಿಫಂಡ್‌ನ ಭಾಗವಾಗಿ $2000 (ರೂ 1,48,489.00) ಅನ್ನು ಮಗುವಿನ ಕ್ರೆಡಿಟ್ ತೆರಿಗೆಯಾಗಿ ಸ್ವೀಕರಿಸಿದ್ದಾರೆ. ಆದರೆ ಈ ವರ್ಷ ಕೊಂಚ ಬದಲಾವಣೆಯಾಗಲಿದ್ದು ಮಗುವಿನ ತೆರಿಗೆ ಕ್ರೆಡಿಟ್ ಚೆಕ್ ಈಗ $3,600 ಆಗಿದ್ದು ಇದರ ಪ್ರಯೋಜನವನ್ನು 6 ವರ್ಷದೊಳಗಿನ ಮಕ್ಕಳು ಪಡೆದುಕೊಳ್ಳಬಹುದಾಗಿದೆ. ಇನ್ನು 6 ಹಾಗೂ 17 ವರ್ಷದೊಳಗಿನ ಮಕ್ಕಳು $3000 ಅನ್ನು ಪಡೆಯಬಹುದಾಗಿದೆ.


  ಇನ್ನೊಂದು ಪ್ರಮುಖ ಬದಲಾವಣೆಯೆಂದರೆ ಪಾವತಿಯು ಬಂದಾಗ ಐಆರ್‌ಎಸ್ ಅರ್ಹ ಕುಟುಂಬಗಳಿಗೆ ಮುಂಗಡ ಮಾಸಿಕ ಭಾಗಶಃ ಪಾವತಿಯನ್ನು ಕಳುಹಿಸುತ್ತದೆ. 2021ರ ಮಕ್ಕಳ ಪೋಷಕರು ಈ ಮುಂಗಡ ತೆರಿಗೆ ಕ್ರೆಡಿಟ್ ಪಾವತಿಗಳನ್ನು ಸ್ವೀಕರಿಸಲು ಒಂದು ಹೆಚ್ಚಿನ ಹಂತ ಪೂರ್ಣಗೊಳಿಸಬೇಕಾಗುತ್ತದೆ.


  2021 ರಲ್ಲಿ ಜನಿಸಿದ ಮಗುವಿನ ಪೋಷಕರು ತೆರಿಗೆ ಕ್ರೆಡಿಟ್ ಪಾವತಿಗಳನ್ನು ಹೇಗೆ ಕ್ಲೈಮ್ ಮಾಡಬಹುದು?


  ಈ ಸೇವೆಯನ್ನು ಪಡೆಯಲು ಎರಡು ವಿಧಾನಗಳಿವೆ. ಮೊದಲನೆಯದ್ದು, ಮುಂದಿನ ವಸಂತ ಋತುವಿನಲ್ಲಿ ನಿಮ್ಮ ರಿಟರ್ನ್ ಸಲ್ಲಿಸುವವರೆಗೆ ಮತ್ತು ಇಡೀ ಮಕ್ಕಳ ತೆರಿಗೆ ಸಾಲವನ್ನು ಒಂದೇ ಮೊತ್ತದಲ್ಲಿ ಸ್ವೀಕರಿಸುವವರೆಗೆ ನೀವು ಕಾಯಬಹುದು ಎರಡನೆಯ ವಿಧಾನವೆಂದರೆ ಮುಂದಿನ ವರ್ಷದ ತೆರಿಗೆ ಋತುವಿನ ಮುನ್ನ ಮಾಸಿಕ ಪಾವತಿಗಳನ್ನು ನೀವು ಸ್ವೀಕರಿಸಬಹುದು.


  ಐಆರ್‌ಎಸ್ ಇಂತಹ ವಿಶೇಷ ಸನ್ನಿವೇಶಗಳಿಗಾಗಿ ಎರಡು ಆನ್‌ಲೈನ್ ಪೋರ್ಟಲ್‌ಗಳಿವೆ. ಚೈಲ್ಡ್ ಟ್ಯಾಕ್ಸ್ ಕ್ರೆಡಿಟ್ ಅಪ್‌ಡೇಟ್ ಪೋರ್ಟಲ್ ವರ್ಷಪೂರ್ತಿ ಯಾವುದೇ ಬದಲಾವಣೆಗಳನ್ನು ಸಲ್ಲಿಸಲು ತೆರಿಗೆ ಪಾವತಿದಾರರನ್ನು ಅನುಮತಿಸುತ್ತದೆ. ಮುಂಬರುವ ದಿನಗಳಲ್ಲಿ ಪೋರ್ಟಲ್ ಬಳಸಲು ಕುಟುಂಬಗಳಿಗೆ ಸಾಧ್ಯವಾಗಲಿದ್ದು ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಪೋರ್ಟಲ್ ಮೂಲಕ ಕಂಡುಕೊಳ್ಳಬಹುದಾಗಿದೆ.


  2021ರ ಪೋಷಕರಿಗೆ ನಿಯಮಗಳು ಹೇಗೆ ಅನ್ವಯವಾಗುತ್ತವೆ?


  2021ರ ತೆರಿಗೆ ಕ್ರೆಡಿಟ್ ಮೊತ್ತವು ಪ್ರತಿ ಅರ್ಹ ಮಗುವಿಗೆ $3600 (ರೂ 2,67,417.00) ಆಗಿದೆ. ನಿಮ್ಮ ಮಾಸಿಕ ಪಾವತಿಯನ್ನು ಆಧರಿಸಿ ಮಗುವಿಗೆ ಈ ಮೊತ್ತ ನೀಡಲಾಗುತ್ತದೆ. ಅದಕ್ಕಾಗಿ ಐಆರ್‌ಎಸ್ ಬೇರೆ ಬೇರೆ ಮಾನದಂಡಗಳನ್ನು ಅನುಸರಿಸುತ್ತದೆ.


  ಮುಂದಿನ ತೆರಿಗೆ ಕ್ರೆಡಿಟ್ ಪಾವತಿಯನ್ನು ಯಾವಾಗ ಕಳುಹಿಸಲಾಗುತ್ತದೆ?


  ತೆರಿಗೆ ಕ್ರೆಡಿಟ್ ಅನ್ನು ಎರಡು ವಿಧಾನಗಳಲ್ಲಿ ಕಳುಹಿಸಬಹುದಾಗಿದೆ. ಮಗುವಿನ ತೆರಿಗೆ ಕ್ರೆಡಿಟ್‌ನ ಅರ್ಧ ಭಾಗವು ಮಾಸಿಕ ಚೆಕ್‌ಗಳ ರೂಪದಲ್ಲಿ ಬರುತ್ತದೆ. ಇನ್ನರ್ಧ ಮೊತ್ತವನ್ನು ನಿಮ್ಮ 2021ರ ತೆರಿಗೆ ರಿಟರ್ನ್ ಅನ್ನು ನೀವು 2022ರಲ್ಲಿ ಕ್ಲೈಮ್ ಮಾಡಿದಾಗ ನೀಡಲಾಗುತ್ತದೆ.
  ನೂತನ ಪೋಷಕರಿಗೆ ಮಗುವಿನ ತೆರಿಗೆ ಕ್ರೆಡಿಟ್ ಅರ್ಹತೆಯ ಅಗತ್ಯಗಳೇನು?


  ನೀವು ಹಾಗೂ ನಿಮ್ಮ ಮಗು ಅಮೆರಿಕದ ಪ್ರಜೆಗಳಾಗಿರಬೇಕು ಹಾಗೂ ನಿಮ್ಮ ಮಗುವು ಸಾಮಾಜಿಕ ಭದ್ರತಾ ಸಂಖ್ಯೆಯನ್ನು ಹೊಂದಿರಬೇಕು. ಹಾಗೂ ಮಗುವಿನ ವಯಸ್ಸು ಡಿಸೆಂಬರ್ 2021ರ ವರ್ಷವನ್ನು ಆಧರಿಸಿರಬೇಕು. ಇನ್ನು ತೆರಿಗೆ ಕ್ರೆಡಿಟ್ ಪೋರ್ಟಲ್‌ನಲ್ಲಿ ಈ ಮೊತ್ತ ಪಡೆಯುವ ಅರ್ಹತೆಯನ್ನು ನೀವು ಪರಿಶೀಲಿಸಿಕೊಳ್ಳಬಹುದಾಗಿದೆ.

  Published by:Soumya KN
  First published: