ಉತ್ತರ ವಿಯೆಟ್ನಾಂ: ತಾಯಿಯ ಗರ್ಭಾಶಯದ ಸಾಧನ ಕೈಯಲ್ಲೇ ಹಿಡಿದು ಜನಿಸಿದ ಮಗು

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಆಸ್ಪತ್ರೆ ಸಿಬ್ಬಂದಿ, ಮಗು ಜನಿಸಿದ ಕೂಡಲೇ ನಾವು ನೋಡಿದೆವು. ಮಗು ತಾಯಿಯ ಗರ್ಭಾಶಯದ ಸಾಧನ(ಐಯುಡಿ) ಹಿಡಿದುಕೊಂಡೇ ಜನಿಸಿತ್ತು ಎಂದರು.

Updated:July 15, 2020, 9:59 PM IST
ಉತ್ತರ ವಿಯೆಟ್ನಾಂ: ತಾಯಿಯ ಗರ್ಭಾಶಯದ ಸಾಧನ ಕೈಯಲ್ಲೇ ಹಿಡಿದು ಜನಿಸಿದ ಮಗು
ಮಗು
  • Share this:
ನವದೆಹಲಿ(ಜು.15): ಮಗುವೊಂದು ತಾಯಿಯ ಗರ್ಭಾಶಯದ ಸಾಧನವನ್ನು ತನ್ನ ಕೈಯಲ್ಲೇ ಹಿಡಿದುಕೊಂಡು ಜನಸಿದ ಅಚ್ಚರಿ ಘಟನೆಯೊಂದು ಉತ್ತರ ವಿಯೆಟ್ನಾಂನಲ್ಲಿ ನಡೆದಿದೆ. ಉತ್ತರ ವಿಯೆಟ್ನಾಂನಲ್ಲಿರುವ ಫೋಂಗ್ ಎನ್ನುವ ಅಂತರಾಷ್ಟ್ರೀಯ ಆಸ್ಪತ್ರೆಯೊಂದರಲ್ಲಿ ಈ ರೀತಿ ಅಚ್ಚರಿ ಘಟನೆ ನಡೆದಿದ್ದು, ವೈದ್ಯಕೀಯ ಸಿಬ್ಬಂದಿ ಈ ಮುಗುವಿನ ಫೋಟೋ ಶೇರ್​​ ಮಾಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಆಸ್ಪತ್ರೆ ಸಿಬ್ಬಂದಿ, ಮಗು ಜನಿಸಿದ ಕೂಡಲೇ ನಾವು ನೋಡಿದೆವು. ಮಗು ತಾಯಿಯ ಗರ್ಭಾಶಯದ ಸಾಧನ(ಐಯುಡಿ) ಹಿಡಿದುಕೊಂಡೇ ಜನಿಸಿತ್ತು ಎಂದರು.

ಹೀಗೆ ಮುಂದುವರಿದ ಅವರು, ಮಗುವನ್ನು ಹೀಗೆ ನೋಡಿದ ಕೂಡಲೇ ನಾನು ಫೋಟೋವನ್ನು ಕ್ಲಿಕ್ಕಿಸಿದೆ. ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದೆ. ಆದರೆ, ಈ ಫೋಟೋ ಇಷ್ಟು ವೈರಲ್​ ಆಗುತ್ತದೆ. ಹೀಗೆ ಇಡೀ ಪ್ರಪಂಚದ ಗಮನ ಸೆಳೆಯುತ್ತದೆ ಎಂದು ಭಾವಿಸಿರಲಿಲ್ಲ ಎಂದು ವೈದ್ಯರು ಹೇಳಿದ್ಧಾರೆ.

ಇದನ್ನೂ ಓದಿ: ಇನ್ನೆರಡು ತಿಂಗಳಲ್ಲಿ ಕೊರೋನಾ ಹೆಚ್ಚಳ, ಆ ದೇವರೆ ನಮ್ಮನ್ನು ಕಾಪಾಡಬೇಕು; ಸಚಿವ ಶ್ರೀರಾಮುಲು
Published by: Ganesh Nachikethu
First published: July 15, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading