ಗಂಡ-ಹೆಂಡತಿ ಜಗಳದಲ್ಲಿ ಬಲಿಯಾಯ್ತು 5 ತಿಂಗಳ ಹಸುಗೂಸು

ಘಾಜಿಪುರ ಪೊಲೀಸರು ಐಪಿಸಿ ಸೆಕ್ಷನ್​ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ತಾಯಿ ಪೊಲೀಸರ ವಶದಲ್ಲಿದ್ದು, ತಂದೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Latha CG | news18-kannada
Updated:October 10, 2019, 3:07 PM IST
ಗಂಡ-ಹೆಂಡತಿ ಜಗಳದಲ್ಲಿ ಬಲಿಯಾಯ್ತು 5 ತಿಂಗಳ ಹಸುಗೂಸು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಅ.10): ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಅದು ಅಕ್ಷರಶಃ ಸತ್ಯ ಕೂಡ ಹೌದು. ಅಪ್ಪ-ಅಮ್ಮ ಜಗಳವಾಡುವಾಗ  ಆಕಸ್ಮಿಕವಾಗಿ ಪೆಟ್ಟು ಬಿದ್ದ 5 ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.  ಗಂಡ-ಹೆಂಡತಿ ಸತ್ಯಜಿತ್ ಮತ್ತು ದೀಪ್ತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಕೋಪಗೊಂಡ ಸತ್ಯಜಿತ್​ ಹೆಂಡತಿಗೆ ಕೋಲಿನಿಂದ ಬಾರಿಸಿದ್ದ. ಈ ವೇಳೆ ಆಕಸ್ಮಿಕವಾಗಿ ಕೋಲು ಅಲ್ಲೇ ಇದ್ದ ಮಗುವಿನ ತಲೆಗೆ ತಾಗಿದೆ. ಬಲವಾಗಿ ಬಿದ್ದ ಏಟಿಗೆ ಮಗು ಪ್ರಜ್ಞೆ ತಪ್ಪಿ ಬಿದ್ದಿದೆ.

ರೈಲ್ವೆ ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ತಕ್ಷಣ ಮನೆಯಲ್ಲೇ ಗಂಡ-ಹೆಂಡತಿ ಮಗುವಿಗೆ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಬಳಿಕ ಮಗು ವಾಂತಿ ಮಾಡಿಕೊಂಡಿದೆ. ಆಗ ಸಮೀಪದ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ 5 ತಿಂಗಳ ಹಸುಗೂಸು ಕೊನೆಯುಸಿರೆಳೆದಿದೆ.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮಗು ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ತಮ್ಮಿಬ್ಬರ ಜಗಳಕ್ಕೆ ಮಗು ಬಲಿಯಾಯ್ತು ಎಂದು ಗಂಡ-ಹೆಂಡತಿ ಇಬ್ಬರೂ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ.

ಘಾಜಿಪುರ ಪೊಲೀಸರು ಐಪಿಸಿ ಸೆಕ್ಷನ್​ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ತಾಯಿ ಪೊಲೀಸರ ವಶದಲ್ಲಿದ್ದು, ತಂದೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ್ಯಡಮ್​ ಹ್ಯಾರಿ ದೇಶದ ಮೊದಲ ತೃತೀಯ ಲಿಂಗಿ ಪೈಲಟ್​; ಸಾಧನೆಯ ಹಿಂದಿದೆ ಮನಕಲಕುವ ಕಥೆ!
First published: October 10, 2019, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading