ನಾನು ಸಂಸದನಾಗಿರುತ್ತೇನೆ ಆದರೆ ರಾಜಕೀಯದಲ್ಲಿ ಇರುವುದಿಲ್ಲ; ಯೂಟರ್ನ್​ ಹೊಡೆದ ಬಿಜೆಪಿ ಎಂಪಿ ಸುಪ್ರಿಯೋ

ಶನಿವಾರ ಫೇಸ್​ಬುಕ್ಕಿನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು, "ನಾನು ಹೊರಡುತ್ತಿದ್ದೇನೆ ... ಅಲ್ವಿದಾ (ವಿದಾಯ) ... ನೀವು ಯಾರಾದರೂ ಸಾಮಾಜಿಕ ಕೆಲಸ ಮಾಡಲು ಬಯಸಿದರೆ, ರಾಜಕೀಯದಲ್ಲಿ ಇಲ್ಲದೆ ಇದನ್ನು ಮಾಡಬಹುದು ... " ಎಂದು ಬರೆದು ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ್ದರು.

ಬಿಜೆಪಿ ಸಂಸದ ಬಾಬುಲ್​ ಸುಪ್ರಿಯೋ

ಬಿಜೆಪಿ ಸಂಸದ ಬಾಬುಲ್​ ಸುಪ್ರಿಯೋ

 • Share this:
  ತಾನು ರಾಜಕೀಯದಿಂದ ದೂರ ಉಳಿಯುವುದಾಗಿ ಶನಿವಾರ ಘೋಷಿಸಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ಸೋಮವಾರ ಸಂಜೆ ವೇಳೆಗೆ ಉಲ್ಟಾ ಹೊಡೆದಿದ್ದು, ತಮ್ಮ ಯೋಜನೆಗಳನ್ನು ಏನಾದರೂ ಬದಲಾವಣೆ ಮಾಡಿಕೊಂಡರಾ ಎನ್ನುವ ಅನುಮಾನ ಕಾಡುತ್ತಿದೆ. ಏಕೆಂದರೆ ಅವರು ಸೋಮವಾರ ಸಂಜೆ ಹೊತ್ತಿಗೆ ನಾನು ಸಂಸತ್ತಿನ ಸದಸ್ಯರಾಗಿ ಸೇವೆ ಮುಂದುವರೆಸುತ್ತೇನೆ ಎಂದು ಹೇಳಿದರು.

  ಫೇಸ್‌ಬುಕ್‌ನಲ್ಲಿ ರಾಜಕೀಯ ತೊರೆಯುವುದಾಗಿ ಘೋಷಿಸಿದ ನಂತರ ಬಿಜೆಪಿಯೊಳಗೆ ರಾಜಕೀಯ ಬಿರುಗಾಳಿಯೇ ಆರಂಭವಾಗಿತ್ತು, ತಾನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಮತ್ತು ದೆಹಲಿಯಲ್ಲಿನ ಭದ್ರತೆ ಮತ್ತು ವಸತಿಗಳನ್ನು ತ್ಯಜಿಸುತ್ತೇನೆ ಎಂದು ಶನಿವಾರದಂದು ಸುಪ್ರಿಯೋ ಖಂಡಾತುಂಡವಾಗಿ ಹೇಳಿದ್ದರು.

  ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಅವರ ಮೂಲಕ ಈ ರೀತಿ ಹೇಳಿಕೆ ಬಂದಿದೆ. "ನಾನು ಗೃಹ ಸಚಿವ ಮತ್ತು ಬಿಜೆಪಿ ಮುಖ್ಯಸ್ಥರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನನ್ನು ಇಲ್ಲೇ ಇರಿ, ಹಿನ್ನೆಲೆಯಲ್ಲಿ ಕೆಲಸ ಮಾಡಿ ಎಂದು ಕೇಳಿದರು. ಆದರೆ ನಾನು ರಾಜಕೀಯ ಮಾಡುವುದನ್ನು ತೊರೆಯುತ್ತಿದ್ದೇನೆ. ಆದರೆ ಸಂಸದನಾಗಿ ನನ್ನ ಕರ್ತವ್ಯಗಳನ್ನು ಪೂರೈಸುವುದನ್ನು ಮುಂದುವರಿಸುತ್ತೇನೆ ಏಕೆಂದರೆ ಅದು ಸಾಂವಿಧಾನಿಕ ಹುದ್ದೆಯಾಗಿದೆ "ಎಂದು ಅವರು ಹೇಳಿದರು.

  ಸುಪ್ರಿಯೋ ಅವರು ಶನಿವಾರ ಮಧ್ಯರಾತ್ರಿ ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು, ಎಂದು ಪಿಟಿಐ ಸಂಸ್ಥೆಗೆ ಬಿಜೆಪಿಯ ಮೂಲಗಳು ತಿಳಿಸಿವೆ ಎಂದು ಹೇಳಾಗಿದೆ.


  "ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ" ಎಂದು ಗಾಯಕ-ರಾಜಕಾರಣಿ ಹೇಳಿದರು. "ನಾನು ಬಿಜೆಪಿ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ ... ನನ್ನ ಸ್ಥಾನ ಏನು ಎಂದು ನಾನು ಅವರಿಗೆ ಸವಿವರವಾಗಿ ವಿವರಿಸಿದ್ದೇನೆ’’ ಎಂದರು.  "ನೀವು ರಾಜಕಾರಣಿ ಬಾಬುಲ್ ಅನ್ನು ಇನ್ನೂ ಸರಿಯಾಗಿ ನೋಡಿಲ್ಲ ... ಆದರೆ ನನ್ನ ಕ್ಷೇತ್ರದ ಜನರು ನನ್ನನ್ನು ತಮ್ಮ ಸಂಸದನನ್ನಾಗಿ ನೋಡಲು ಬಯಸುತ್ತಾರೆ" ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ಸುಪ್ರಿಯೋ ಹೇಳಿರುವುದಾಗಿ ಉಲ್ಲೇಖೀಸಲಾಗಿದೆ. "ನಾನು ಶೀಘ್ರದಲ್ಲೇ ಮುಂಬೈ ಅಥವಾ ಕೋಲ್ಕತ್ತಾದಲ್ಲಿ ಇರುವುದಾಗಿ" ಅವರು ಹೇಳಿದರು.  ಇದಕ್ಕೂ ಮುನ್ನ, ಭಾನುವಾರ, ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಸುಪ್ರಿಯೋ ಅವರು ನಾಟಕ ಮಾಡುತ್ತಿದ್ದಾರೆ ಮತ್ತು ಅವರಿಗೆ ಸಂಸದ ಸ್ಥಾನವನ್ನು ತೊರೆಯುವ ಧೈರ್ಯವಿಲ್ಲ ಎಂದು ಗೇಲಿ ಮಾಡಿದ್ದರು, "ನಾನು ಈಗಾಗಲೇ ಲೋಕಸಭಾ ಸ್ಪೀಕರ್‌ನಿಂದ ಸಮಯ ಕೇಳಿದ್ದೇನೆ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಆತನ ಒಪ್ಪಿಗೆ ಅಗತ್ಯ ಇದೆಯೇ ಕೇಳಬೇಕು ಎಂದು ಹೇಳಿದ್ದಾರೆ.

  "ನಾನು ಈಗಾಗಲೇ ನಿನ್ನೆ ರಾತ್ರಿ ನನ್ನ ಪಕ್ಷದ ಉನ್ನತ ನಾಯಕರನ್ನು ಭೇಟಿ ಮಾಡಿದ್ದೇನೆ ಆದರೆ ನನ್ನ ಭವಿಷ್ಯದ ನಡೆ ಏನೆಂದು ಕಾಲವೇ ಹೇಳುತ್ತದೆ" ಎಂದು ಅವರು ಹೇಳಿದರು.


  ಇದನ್ನೂ ಓದಿ: EXCLUSIVE: ಎಕ್ಸ್​ರೇ ಹೇಳುತ್ತಿದೆ ಭಯಾನಕ ಕತೆ; ಛಾಯಾಗ್ರಾಹಕ ದಾನಿಶ್​ ಸಿದ್ದಿಕಿ ಮೇಲೆ ಎಸ್​ಯುವಿ ಹತ್ತಿಸಿದ್ದ ಉಗ್ರರು

  ಕ್ಯಾಬಿನೆಟ್ ಪುನರ್ರಚನೆಯ ನಂತರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಸ್ಥಾನ ಕಳೆದುಕೊಂಡ ಸುಪ್ರಿಯೋ, ಶನಿವಾರ ಫೇಸ್​ಬುಕ್ಕಿನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು, "ನಾನು ಹೊರಡುತ್ತಿದ್ದೇನೆ ... ಅಲ್ವಿದಾ (ವಿದಾಯ) ... ನೀವು ಯಾರಾದರೂ ಸಾಮಾಜಿಕ ಕೆಲಸ ಮಾಡಲು ಬಯಸಿದರೆ, ರಾಜಕೀಯದಲ್ಲಿ ಇಲ್ಲದೆ ಇದನ್ನು ಮಾಡಬಹುದು ... " ಎಂದು ಬರೆದು ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಸಿದ್ದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: