• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Babita Phogat: ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ವಿಚಾರಣಾ ಸಮಿತಿಗೆ ಬಬಿತಾ ಫೋಗಟ್‌ ಸೇರ್ಪಡೆ

Babita Phogat: ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ವಿಚಾರಣಾ ಸಮಿತಿಗೆ ಬಬಿತಾ ಫೋಗಟ್‌ ಸೇರ್ಪಡೆ

ಮಾಜಿ ಕುಸ್ತಿ ಪಟು ಬಬಿತಾ ಫೋಗಟ್

ಮಾಜಿ ಕುಸ್ತಿ ಪಟು ಬಬಿತಾ ಫೋಗಟ್

ಡಬ್ಲ್ಯೂಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗ ಪ್ರಕರಣದ ತನಿಖೆ ಮಾಡಲು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ರಚಿಸಿರುವ ಉಸ್ತುವಾರಿ ಸಮಿತಿಗೆ ಮಾಜಿ ಕುಸ್ತಿ ಪಟು ಬಬಿತಾ ಫೋಗಟ್ ಅವರು ಸೇರ್ಪಡೆಯಾಗಿದ್ದಾರೆ. ಆ ಮೂಲಕ ಎಂಸಿ ಮೇರಿ ಕೋಮ್‌ ನೇತೃತ್ವದ ಈ ಸಮಿತಿಯಲ್ಲಿ ಒಟ್ಟು ಆರು ಜನ ಸೇರಿದಂತಾಗಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

ನವ ದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ, (WFI) ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ವಿರುದ್ಧ ಕೆಲ ದಿನಗಳ ಹಿಂದೆ ಮಹಿಳಾ ಕುಸ್ತಿಪಟುಗಳು (Wrestler) ಲೈಂಗಿಕ ಶೋಷಣೆ ನಡೆಸಿರುವ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಧರಣಿಗೆ ಕೂತಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಕ್ರೀಡಾ ಸಚಿವಾಲಯ ಪ್ರಕರಣದ ತನಿಖೆಗೆ ಸಮಿತಿ ರಚಿಸುವುದಾಗಿ ಹೇಳಿತ್ತು. ಇದೀಗ ಈ ಸಮಿತಿಗೆ ಮಾಜಿ ಕುಸ್ತಿ ಪಟು ಬಬಿತಾ ಫೋಗಟ್ (Babita Phogat) ಅವರು ಸೇರಿಕೊಂಡಿದ್ದಾರೆ.


ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ತನಿಖೆ ಮಾಡಲು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ರಚಿಸಿರುವ ಉಸ್ತುವಾರಿ ಸಮಿತಿಗೆ ಮಾಜಿ ಕುಸ್ತಿ ಪಟು ಬಬಿತಾ ಫೋಗಟ್ ಅವರು ಸೇರ್ಪಡೆಯಾಗಿದ್ದು, ಈ ಸಮಿತಿಯು ಕುಸ್ತಿ ಫೆಡರೇಶನ್‌ನಲ್ಲಿ ಆಗಿರುವ ಆಡಳಿತ ಲೋಪಗಳು, ಹಣಕಾಸಿನ ಅಕ್ರಮ, ಲೈಂಗಿಕ ಕಿರುಕುಳ, ಬೆದರಿಕೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ವಿಚಾರಣೆ ನಡೆಸಲಿದೆ. ವಿಶೇಷ ಅಂದ್ರೆ ಕ್ರೀಡಾ ಸಚಿವಾಲಯ ರಚಿಸಿರುವ ಈ ಸಮಿತಿಯಲ್ಲಿ ಬಹುತೇಕರು ಕ್ರೀಡಾಪಟುಗಳೇ ಸೇರಿದ್ದಾರೆ.


ಖೇಲ್‌ರತ್ನ ಪ್ರಶಸ್ತಿ ಪುರಸ್ಕೃತ ಬಾಕ್ಸರ್‌ ಎಂಸಿ ಮೇರಿ ಕೋಮ್‌ ನೇತೃತ್ವದ ಈ ಸಮಿತಿಯಲ್ಲಿ ಯೋಗೇಶ್ವರ್ ದತ್, ತೃಪ್ತಿ ಮುರಗುಂಡೆ, ರಾಧಿಕಾ ಶ್ರೀಮಾನ್, ರಾಜೇಶ್ ರಾಜಗೋಪಾಲನ್ ಸದಸ್ಯರಾಗಿದ್ದು, ಇದೀಗ ಆರನೇ ಸದಸ್ಯರಾಗಿ ಬಬಿತಾ ಫೋಗಟ್ ಸೇರಿಕೊಂಡಿದ್ದಾರೆ.


ಇದನ್ನೂ ಓದಿ: Vinesh Phogat: WFI ಅಧ್ಯಕ್ಷನಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ, ರಾಜೀನಾಮೆಗೆ ಮುಂದಾದ ಬ್ರಿಜ್ ಭೂಷಣ್


ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿರುವ ಭಾರತೀಯ ಕ್ರೀಡಾ ಪ್ರಾಧಿಕಾರ, ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷರು, ಇತರ ಅಧಿಕಾರಿಗಳು ಮತ್ತು ತರಬೇತುದಾರರ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ  ಲೈಂಗಿಕ ದೌರ್ಜನ್ಯದ ದೂರು ನೀಡಿದ ನಂತರ ಕುಸ್ತಿ ಫೆಡರೇಶನ್‌ನಲ್ಲಿ ದಕ್ಷ ಆಡಳಿತವನ್ನು ಉತ್ತೇಜಿಸಲು, ಲೈಂಗಿಕ ದುರ್ವರ್ತನೆ, ಕಿರುಕುಳ ಮತ್ತು ಬೆದರಿಕೆ, ಆರ್ಥಿಕ ಅಕ್ರಮಗಳು ಮತ್ತು ಆಡಳಿತಾತ್ಮಕ ಲೋಪಗಳ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಕ್ರೀಡಾ ಸಚಿವಾಲಯವು ಪ್ರಮುಖ ಕ್ರೀಡಾಪಟುಗಳಿಂದ ಉಸ್ತುವಾರಿ ಸಮಿತಿಯನ್ನು ರಚಿಸಿದೆ. ಈ ಮೇಲ್ವಿಚಾರಣಾ ಸಮಿತಿಯು ವಿಚಾರಣೆಯ ಸಮಯದಲ್ಲಿ ಡಬ್ಲ್ಯುಎಫ್‌ಐನ ಪ್ರತಿನಿತ್ಯದ ಆಡಳಿತವನ್ನು ಸಹ ನಿರ್ವಹಿಸುತ್ತದೆ. ತನಿಖೆಗೆ ರಚಿಸಲಾಗಿರುವ ಮೇಲುಸ್ತುವಾರಿ ಸಮಿತಿಯು 4 ವಾರಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುತ್ತದೆ. ಇದಲ್ಲದೆ, ಮುಂದಿನ ಆದೇಶದವರೆಗೆ ಕುಸ್ತಿ ಫೆಡರೇಶನ್‌ನ ನಿರ್ವಹಣೆ ಮತ್ತು ಕಾರ್ಯ ಚಟುವಟಿಕೆಯಿಂದ ತತ್‌ಕ್ಷಣದಿಂದ ದೂರ ಇರುವಂತೆ ಕಾರ್ಯಕಾರಿ ಸಮಿತಿಗೆ ಸೂಚನೆ ನೀಡಲಾಗಿದೆ ಎಂದು ಕ್ರೀಡಾ ಸಚಿವಾಲಯ ಪ್ರಕಟಣೆ ಹೊರಡಿಸಿದೆ.


ಇದನ್ನೂ ಓದಿ: Viral Video: ಛೀ ಛೀ, ಇದೇನಿದು ಅಸಹ್ಯ! ಫ್ಲೈಟ್‌ನಲ್ಲಿ ಅರೆಬೆತ್ತಲಾಗಿ ಮಹಿಳೆಯ ಹುಚ್ಚಾಟ!


ಏನಿದು ಆರೋಪ?


2021 ರ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದ ನಂತರ ಕುಸ್ತಿ ಫೆಡರೇಶನ್‌ (ಡಬ್ಲ್ಯೂಎಫ್‌ಐ) ಜೊತೆ ಭಿನ್ನಾಭಿಪ್ರಾಯ ಹೊಂದಿರುವ ಏಷ್ಯನ್ ಗೇಮ್ಸ್ ಚಾಂಪಿಯನ್ ಕುಸ್ತಿಪಟು ವಿನೇಶಾ ಫೋಗಟ್ ಅವರು, ಕುಸ್ತಿ ಒಕ್ಕೂಟ ತನೆಗೆ ಮಾನಸಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೇ, ಹಲವು ಮಹಿಳಾ ಕುಸ್ತಿಪಟುಗಳಿಗೆ ಕುಸ್ತಿ ಪೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಲಖನೌದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ತರಬೇತಿ ಶಿಬಿರದಲ್ಲಿ ಕೂಡ ಕೆಲವು ತರಬೇತುದಾರರು ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಫೆಡರೇಶನ್ ಅಧ್ಯಕ್ಷರ ಮಾತನ್ನು ಪಾಲಿಸುವ ಕೆಲವು ಮಹಿಳಾ ಕುಸ್ತಿಪಟುಗಳು ಕೂಡ ಶಿಬಿರದಲ್ಲಿದ್ದಾರೆ ಎಂದು ಅವರು ಆರೋಪಿಸಿದ್ದರು.



ಜೊತೆಗೆ ವಿನೇಶಾ ಫೋಗಟ್ ಅವರು ‘ತಾನು ಎಂದಿಗೂ ಲೈಂಗಿಕ ಶೋಷಣೆ ಅನುಭವಿಸಿಲ್ಲ’ ಎಂದು ಹೇಳಿದ್ದು, ಆದರೆ ಈ ಪ್ರತಿಭಟನೆಯಲ್ಲಿ ಸಂತ್ರಸ್ತರೊಬ್ಬರು ಭಾಗಿಯಾಗಿದ್ದರು. ಹೀಗಾಗಿ ಲೈಂಗಿಕ ಶೋಷಣೆ ಅನುಭವಿಸಿರುವ ಸಂತ್ರಸ್ತ ಕುಸ್ತಿಪಟುಗಳ ಜೊತೆ ನಿಲ್ಲುವುದಾಗಿ ವಿನೇಶಾ ಅವರು ಹೇಳಿದ್ದರು. ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಲೈಂಗಿಕ ಶೋಷಣೆಯ ವಿರುದ್ಧ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಧರಣಿಯಲ್ಲಿ ಸ್ಟಾರ್‌ ಕುಸ್ತಿಪಟುಗಳಾದ ವಿನೇಶಾ ಫೋಗಟ್, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ಸುಮಿತ್ ಮಲಿಕ್ ಸೇರಿದಂತೆ ಇನ್ನಿತರ ಕುಸ್ತಿಪಟುಗಳು ಭಾಗಿಯಾಗಿದ್ದರು.

Published by:Avinash K
First published: