WhatsApp ಗೆ ಟಕ್ಕರ್ ನೀಡಲು ಸ್ವದೇಶೀ ಆ್ಯಪ್ ಬಿಡುಗಡೆಗೊಳಿಸಿದ ಬಾಬಾ ರಾಮ್​ದೇವ್


Updated:May 31, 2018, 9:29 AM IST
WhatsApp ಗೆ ಟಕ್ಕರ್ ನೀಡಲು ಸ್ವದೇಶೀ ಆ್ಯಪ್ ಬಿಡುಗಡೆಗೊಳಿಸಿದ ಬಾಬಾ ರಾಮ್​ದೇವ್

Updated: May 31, 2018, 9:29 AM IST
ನ್ಯೂಸ್ 18 ಕನ್ನಡ

ಮುಂಬೈ(ಮೇ.31): ಸರ್ಕಾರಿ ಟೆಲಿಕಾಂ ಕಂಪೆನಿ BSNL ನೊಂದಿಗೆ ಸೇರಿ ಸಮೃದ್ಧಿ ಸಿಮ್ ಕಾರ್ಡ್​ ಬಿಡುಗಡೆಗೊಳಿಸಿದ ಬಳಿಕ, ಇದೀಗ ಬಾಬಾ ರಾಮ್​ದೇವ್ ಸೋಷಲ್ ಮೀಡಿಯಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಲು ತಯಾರಾಗಿದ್ದಾರೆ. ಯೋಗ ಗುರು ಬಾಬಾ ರಾಮ್​ದೇವ್​ರವರ ಸ್ವದೇಶೀ ಕಂಪೆನಿ ಪತಂಜಲಿಯು ಸಿಮ್ ಕಾರ್ಡ್​ ಲಾಂಚ್ ಮಾಡಿದ ಬಳಿಕ, ಬುಧವಾರದಂಸು ಕಿಂಬೋ(Kimbho) ಎಂಬ ಮೆಸೇಜಿಂಗ್ ಆ್ಯಪ್​ನ್ನು ಬಿಡುಗಡೆಗೊಳಿಸಿದೆ. ಪತಂಜಲಿಯ ವಕ್ತಾರ ಎಸ್​. ಕೆ ತಿಜಾರಾವಾಲಾರವರು ಟ್ವಿಟರ್​ ಮೂಲಕ ಆ್ಯಪ್ ಬಿಡುಗಡೆಗೊಳಿಸಿರುವ ಕುರಿತಾಗಿ ಮಾಹಿತಿ ನೀಡಿದ್ದಾರೆ. ANI ಕೂಡಾ ಬಾಬಾ ರಾಮ್​ದೇವ್​ರವರು ತಮ್ಮ ಕಂಪೆನಿ ಪತಂಜಲಿಯ ಬ್ಯಾನರ್​ ಅಡಿಯಲ್ಲಿ ಹೊಸ ಮೆಸೇಜಿಂಗ್ ಆ್ಯಪ್- ಕಿಂಬೋ ಲಾಂಚ್​ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ. ಇನ್ನು ಈ ಸ್ವದೇಶೀ ಮೆಸೇಜಿಂಗ್ ಆ್ಯಪ್ ಕಿಂಬೋ ಈಗಾಗಲೇ ವ್ಯಾಪಕವಾಗಿ ಬಳಕೆಯಾಗುತ್ತಿರುವ WhatsApp ಗೆ ಫೈಟ್ ನೀಡಲಿದೆ ಎಂದು ಪತಂಜಲಿಯ ವಕ್ತಾರ ತಿಜಾರಾವಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೆಸೇಜಿಂಗ್ ಆ್ಯಪ್ ಕಿಂಬೋ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದ್ದು, ಉಚಿತವಾಗಿ ಡೌನ್​ಲೋಡ್​ ಮಾಡಬಹುದಾಗಿದೆ. ಈಗ ಭಾರತ ಮಾತನಾಡಲಿದೆ- ಎಂಬುವುದು ಬಾಬಾ ರಾಮ್​ದೇವ್​ರವರ ಆ್ಯಪ್​ನ ಟ್ಯಾಗ್​ ಲೈನ್​ ಆಗಿದೆ. ಭಾರತದಲ್ಲಿ ಲಾಂಚ್​ ಆಗಿರುವ ಬಾಬಾ ರಾಮ್​ದೇವ್​ರವರ ಈ ಮೆಸೇಜಿಂಗ್ ಆ್ಯಪ್​ WhatsApp ಗೆ ಭಾರೀ ಟಕ್ಕರ್ ನೀಡಲಿದೆ.

ಗೂಗಲ್​ ಪ್;ಲೇ ಸ್ಟೋರ್​ನಲ್ಲಿ ಲಭ್ಯವಿರುವ ಬಾಬಾ ರಾಮ್​ದೇವ್​ರವರ ಈ ಸ್ವದೇಶೀ ಮೆಸೇಜಿಂಗ್ ಆ್ಯಪ್​ನ ಸೈಜ್​ 22MB ಆಗಿದೆ. ಇನ್ನು ವಕ್ತಾರರು ಮಾಡಿದ ಟ್ವೀಟ್​ ನಿಂದ ಈ ಆ್ಯಪ್​ ಯೋಗ ಗುರು ಬಾಬಾ ರಾಮ್​ದೇವ್ ಹಾಗೂ ಆಚಾರ್ಯ ಬಾಲಕೃಷ್ಟಣರವರ ನೇತೃತ್ವದಲ್ಲಿ ಅವರ ಶಿಷ್ಯರಾದ ನವದೀಕ್ಷಿತ ಸಾಧುಗಳು ಹಾಗೂ ರಾಷ್ಟ್ರನಿಷ್ಟ ವಿಶೇಷತಜ್ಞರಿಂದ ತಯಾರಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಾದ ಮಾಹಿತಿ ಅನ್ವಯ ಈ ಮೆಸೇಜಿಂಗ್ ಆ್ಯಪ್ ಮೂಲಕ ಉಚಿತ ಕರೆ ಹಾಗೂ ವಿಡಯೋ ಕರೆಯೊಂದಿಗೆ ಪ್ರೈವೇಟ್​ ಹಾಗೂ ಗ್ರೂಪ್​ ಚಾಟ್​ ಮಾಡಬಹುದೆಂದು ತಿಳಿದು ಬಂದಿದೆ. ಟೆಕ್ಸ್​, ಆಡಿಯೋ, ವಿಡಿಯೋ, ಸ್ಟಿಕ್ಕರ್ಸ್​, ಲೋಕಸಭೆ, GIF, ಡೂಡಲ್ ಮೊದಲಾದುವನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ಇದನ್ನು ಹೊರತುಪಡಿಸಿ ಇನ್ನೂ ಹಲವಾರು ಅತ್ಯಾಕರ್ಷಕ ಫೀಚರ್ಸ್​ ಹೊಂದಿದೆ ಈ ಆ್ಯಪ್.
First published:May 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ