ವಿಶ್ವಕ್ಕೆ ಯೋಗದ ಮಹತ್ವ ಸಾರಿದ ಬಾಬಾ ರಾಮ್​ದೇವ್!


Updated:June 21, 2018, 8:36 AM IST
ವಿಶ್ವಕ್ಕೆ ಯೋಗದ ಮಹತ್ವ ಸಾರಿದ ಬಾಬಾ ರಾಮ್​ದೇವ್!
ಬಾಬಾ ರಾಮದೇವ್
  • Share this:
ನ್ಯೂಸ್ 18 ಕನ್ನಡ

ನವದೆಹಲಿ(ಜೂ.21): 1995ರಲ್ಲಿ ದಿವ್ಯ ಯೋಗ ಮಂದಿರ ಟ್ರಸ್ಟ್​ನಿಂದ ಆರಂಭವಾದ ಬಾಬಾ ರಾಮ​ದೇವ್​ ಇಂದು ವಿಶ್ವ ಪ್ರಸಿದ್ಧರಾಗಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ತಕ್ಷಣ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವಸಂಸ್ಥೆಯ ಮಾನ್ಯತೆ ಪಡೆಯುವಂತೆ ಒತ್ತಡ ಹಾಕಿದವ್ರಲ್ಲಿ ರಾಮ​ದೇವ್​ ಕೂಡ ಒಬ್ಬರು.

ಬಾಬಾ ರಾಮ​ದೇವ್​ ಕೇವಲ ಎರಡೂವರೆ ವರ್ಷದವರಿದ್ದಾಗ ಪಾರ್ಶವಾಯುಗೆ ತುತ್ತಾಗಿ ದೇಹದ ಕೆಲ ಭಾಗಗಳ ಸ್ವಾಧೀನ ಕಳೆದುಕೊಂಡಿದ್ರು. ಬಳಿಕ ಯೋಗಾಭ್ಯಾಸ ಮಾಡುವ ಮೂಲಕ, ನಿಧಾನವಾಗಿ ಆಧ್ಯಾತ್ಮದತ್ತಲೂ ಒಲವು ಬೆಳೆಸಿಕೊಂಡ ರಾಮ​ದೇವ್​, ಯೋಗ ಮಂದಿರವನ್ನು ಸ್ಥಾಪಿಸಿದ್ರು. ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತ ಯೋಗಾಭ್ಯಾಸವನ್ನೂ ಹೇಳಿಕೊಟ್ಟ ಕೀರ್ತಿ ಬಾಬಾ ರಾಮದೇವ್ ಅವರಿ​ಗಿದೆ.

ಇದೀಗ ದೇಶ, ವಿದೇಶದಲ್ಲಿ ಬಾಬಾ ರಾಮದೇವ್​ರ ಹಲವು ಯೋಗಮಂದಿರಗಳಿದ್ದು, ಅಮಿತಾಬ್​ ಬಚ್ಚನ್​, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಇವರೇ ಯೋಗಗುರುಗಳಾಗಿದ್ದಾರೆ. ಪತಂಜಲಿ ಯೋಗ ಪೀಠವನ್ನು ಸ್ಥಾಪಿಸಿರುವ ಬಾಬಾ ರಾಮ​ದೇವ್​, ದೇಶದ ಮೂಲೆಮೂಲೆಯಲ್ಲೂ ಯೋಗದ ಅರಿವು ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

 
First published:June 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading