HOME » NEWS » National-international » BABA KA DHABA COUPLE RETURNS TO OLD EATERY AFTER RESTAURANT FAILS STG KVD

Baba Ka Dhaba: ವೈರಲ್ ಆಗಿದ್ದ ವೃದ್ಧನ ಹೋಟೆಲ್ ಬಂದ್: ಮತ್ತೆ ಬೀದಿಬದಿ ಡಾಬಾಗೆ ಮರಳಿದ ದಂಪತಿ

ಕಳೆದ ವರ್ಷ ಯೂಟ್ಯೂಬರ್ ಒಬ್ಬರು ಕಾಂತಾ ಪ್ರಸಾದ್ ಮತ್ತವರ ಪತ್ನಿ ಬಾದಾಮಿ ದೇವಿ ಡಾಬಾದಲ್ಲಿ ವ್ಯಾಪಾರವಿಲ್ಲದೆ ಕಷ್ಟಪಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿದ್ದೇ ತಡ ಬಾಬಾ ಕ ಡಾಬಾದ ಮುಂದೆ ನೂರಾರು ಗ್ರಾಹಕರು ಜಮಾಯಿಸಿದ್ದರು.

Trending Desk
Updated:June 8, 2021, 9:29 PM IST
Baba Ka Dhaba: ವೈರಲ್ ಆಗಿದ್ದ ವೃದ್ಧನ ಹೋಟೆಲ್ ಬಂದ್: ಮತ್ತೆ ಬೀದಿಬದಿ ಡಾಬಾಗೆ ಮರಳಿದ ದಂಪತಿ
ವೃದ್ಧ ದಂಪತಿ
  • Share this:

ದೆಹಲಿ: ಕಳೆದ ವರ್ಷ ರಾತೋರಾತ್ರಿ ವೈರಲ್ ಮೂಲಕ ದೇಶಾದ್ಯಂತ ಮನೆ ಮಾತಾಗಿದ್ದ ಬಾಬಾ ಕಾ ಡಾಬಾ ನೆನಪಿದೆಯೇ? ಆರು ತಿಂಗಳು ಖ್ಯಾತಿಯನ್ನು ಕಂಡ ಡಾಬಾದ ಮಾಲೀಕರಾದ ವೃದ್ಧ ದಂಪತಿ ಈಗ ಮತ್ತೆ ತಮ್ಮ ಆ ಹಳೆಯ ಬೀದಿ ಬದಿ ಡಾಬಾಗೆ ಮರಳಿದ್ದಾರೆ. ಮತ್ತೆ ದಕ್ಷಿಣ ದೆಹಲಿ ಮಾಲಾವಿಯ ನಗರದಲ್ಲಿ ಇರುವ ತಮ್ಮ ಡಾಬಾದಲ್ಲಿ ಆ ವಯಸ್ಸಾದ ದಂಪತಿ ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ. ಕಾಂತಾ ಪ್ರಸಾದ್ ದಂಪತಿ ತಮ್ಮ ಅದೇ ಹಳೆಯ ಬೀದಿ ಬದಿಯ ಡಾಬಾಕ್ಕೆ ಮರಳಿದ್ದಾರೆ.
ಕಳೆದ ವರ್ಷ ಯೂಟ್ಯೂಬರ್ ಒಬ್ಬರು ಕಾಂತಾ ಪ್ರಸಾದ್ ಮತ್ತವರ ಪತ್ನಿ ಬಾದಾಮಿ ದೇವಿ ಡಾಬಾದಲ್ಲಿ ವ್ಯಾಪಾರವಿಲ್ಲದೆ ಕಷ್ಟಪಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿದ್ದೇ ತಡ ಬಾಬಾ ಕ ಡಾಬಾದ ಮುಂದೆ ನೂರಾರು ಗ್ರಾಹಕರು ಸಾಲುಸಾಲಾಗಿ ನಿಂತರು. ವೈರಲ್ ಆದ ಅಜ್ಜನ ಬಳಿ ಸೆಲ್ಫಿ ತಗೆದುಕೊಂಡರು, ದಂಪತಿಗೆ ಹಣ ಸಹಾಯ ಕೂಡ ಮಾಡಿದರು. ಇನ್ನೂ ವಿಶೇಷವೆಂದರೆ ಜೊಮ್ಯಾಟೋ ಕೂಡ ತನ್ನ ವೆಬ್‍ಸೈಟ್‍ನ ಹೊಟೇಲ್‍ಗಳ ಪಟ್ಟಿಯಲ್ಲಿ ಈ ಡಾಬಾದ ಹೆಸರನ್ನು ಸೇರಿಸಿತ್ತು.ಅದಾದ ಬಳಿಕ ಕಾಂತಾ ಪ್ರಸಾದ್ ಹೊಸ ಹೋಟೆಲ್ ತೆಗೆದು ತಮ್ಮ ಹಳೆಯ ಸಾಲವನ್ನೆಲ್ಲಾ ತೀರಿಸಿದ್ದರು. ಜೊತೆಗೆ ತನಗೆ ಮತ್ತು ಕುಟುಂಬದವರಿಗೆ ಸ್ಮಾರ್ಟ್‍ಫೋನ್‍ಗಳನ್ನು ಕೂಡ ಕೊಳ್ಳುವಷ್ಟು ಸಮರ್ಥರಾದರು.ಆದರೆ, ಕಾಂತಾ ಪ್ರಸಾದ್ ಅವರು ಹೋಟೆಲ್ ಯಶಸ್ವಿಯಾಗಿ ನಡೆಯಲಿಲ್ಲ. ಈ ವರ್ಷ ಫೆಬ್ರವರಿಯಲ್ಲಿ ಅವರು ಹೋಟೆಲನ್ನು ಮುಚ್ಚಬೇಕಾಯಿತು. ಈಗ ಮತ್ತವರು ತಮ್ಮ ಅದೇ ಹಳೆಯ ಬೀದಿ ಬದಿಯ ಡಾಬಾಕ್ಕೆ ಮರಳಿದ್ದಾರೆ. ಇಷ್ಟೇ ಅಲ್ಲವೇ ಲಾಕ್‍ಡೌನ್ನಿಂದ ಮತ್ತೆ ಗ್ರಾಹಕರಿಲ್ಲದೇ ಸಂಕಷ್ಟದಲ್ಲಿದ್ದಾರೆ.


ಇದನ್ನೂ ಓದಿ: EPFO ಸದಸ್ಯರಿಗೆ ಇಲ್ಲಿದೆ ಗುಡ್​​ನ್ಯೂಸ್​​: ಮುಂದಿನ ತಿಂಗಳು 6 ಕೋಟಿ ಮಂದಿಗೆ ಶೇ.8.5 ಬಡ್ಡಿ

ಲಾಕ್‍ಡೌನ್ ಇರುವುದರಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಲಾಕ್‍ಡೌನ್‍ಗೆ ಮೊದಲು ನಿತ್ಯ 3,500 ರೂಪಾಯಿ ವ್ಯಾಪಾರವಾಗುತ್ತಿತ್ತು. ಈಗ ಅದು 1,000 ರೂಪಾಯಿಗೆ ಇಳಿದಿದೆ. ನಮ್ಮ 8 ಜನರ ಕುಟುಂಬಕ್ಕೆ ಆ ಆದಾಯ ಸಾಕಾಗುತ್ತಿಲ್ಲ ಎಂದು ಕಾಂತಾ ಪ್ರಸಾದ್ ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷ ದಿಢೀರ್ ಯಶಸ್ಸು ಸಿಕ್ಕಿದ್ದರಿಂದ ಕಾಂತಾ ಪ್ರಸಾದ್ ಹೋಟೆಲ್ ತೆರೆಯಲು 5 ಲಕ್ಷ ಹೂಡಿಕೆ ಮಾಡಿ, ಮೂವರು ಕೆಲಸದವರನ್ನು ನೇಮಿಸಿದ್ದರು. ಅಲ್ಪ ಅವಧಿಯವರೆಗೆ ಯಶಸ್ವಿಯಾಗಿ ನಡೆದ ಹೋಟೆಲ್‌ಗೆ ಗ್ರಾಹಕರ ಕೊರತೆಯಿಂದಾಗಿ ಬೀಗ ಬಿತ್ತು.ಹೋಟೆಲ್‌ ತೆರೆಯುವ ತಪ್ಪು ನಿರ್ಧಾರದಿಂದ ವೃದ್ಧ ದಂಪತಿ ಪಶ್ಚಾತ್ತಾಪಪಡುತ್ತಿದ್ದಾರೆ. ಅದಕ್ಕಾಗಿ ಮಾಡಿದ ಒಟ್ಟು ಹೂಡಿಕೆ 5 ಲಕ್ಷ ರೂಪಾಯಿ. ಹೊಟೇಲ್ ಮುಚ್ಚಿದ ಬಳಿಕ ಕುರ್ಚಿಗಳು, ಪಾತ್ರೆಗಳು ಮತ್ತು ಅಡುಗೆ ಯಂತ್ರಗಳನ್ನು ಮಾರಿ 36, 000 ರೂಪಾಯಿಗಳಷ್ಟೇ ಕೈಗೆ ಬಂದಿದ್ದು ಎಂದು ಕಾಂತಾ ಪ್ರಸಾದ್ ತಮ್ಮ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ.ಕಳೆದ ವರ್ಷ ಗೌರವ್ ವಾಸನ್ ಎಂಬುವರು ಯೂಟ್ಯೂಬ್ ವಿಡಿಯೋ ಮೂಲಕ ಕಾಂತಾ ಪ್ರಸಾದ್ ಅವರ ರಸ್ತೆ ಬದಿ ಡಾಬಾದ ದುಸ್ಥಿತಿಯನ್ನು ಬೆಳಕಿಗೆ ತಂದಿದ್ದರು. ಆದರೆ ಆ ಬಳಿಕ ಕಾಂತಾ ಪ್ರಸಾದ್ ದೇಣೆಗೆಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಾಸನ್ ಮತ್ತವರ ಸಂಗಡಿಗರ ಮೇಲೆ ವಂಚನೆಯ ದೂರು ದಾಖಲಿಸಿದ್ದರು. ವಾಸನ್ ಉದ್ದೇಶಪೂರ್ವಕವಾಗಿ ತಮ್ಮ ಮತ್ತು ತಮ್ಮ ಕುಟುಂಬ/ಸ್ನೇಹಿತರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ದೇಣಿಗೆ ಕೊಡುವವರ ಜೊತೆ ಹಂಚಿಕೊಂಡಿದ್ದು, ತನಗೆ ಯಾವುದೇ ಮಾಹಿತಿ ನೀಡದೆ ವಿವಿಧ ಮೂಲಗಳಿಂದ ದೇಣಿಗೆ ಸಂಹ್ರಹಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ವಾಸನ್ ಈ ಆರೋಪವನ್ನು ನಿರಾಕರಿಸಿದ್ದರು ಮತ್ತು ಕಾಂತಾ ಪ್ರಸಾದ್ ಖಾತೆಗೆ ಹಣ ವರ್ಗಾವಣೆ ಆಗಿದ್ದರ ಬಗ್ಗೆ ಪುರಾವೆಗಳನ್ನು ಒದಗಿಸಿದ್ದರು.

Published by: Kavya V
First published: June 8, 2021, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories