Azadi Ka Amrit Mahotsav: ಮಧುಶ್ರೀ ಅವರ 'ವಂದೇ ಮಾತರಂ' ಹಾಡು ಭಾರೀ ವೈರಲ್, ಇಲ್ಲಿದೆ ವಿಡಿಯೋ

ಇತ್ತೀಚೆಗಷ್ಟೇ ಮಧುಶ್ರೀ ತಮ್ಮ ಮಧುರ ಕಂಠದಲ್ಲಿ ‘ವಂದೇ ಮಾತರಂ’ ಹಾಡನ್ನು ರೆಕಾರ್ಡ್ ಮಾಡಿದ್ದು, ಇದೀಗ ಈ ಹಾಡು ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧುಶ್ರೀ ಅವರೂ ಈ ಬಗ್ಗೆ ಬಹಳ ಸಂತೋಷಗೊಂಡಿದ್ದು, ಉತ್ಸುಕರಾಗಿದ್ದಾರೆ.

ಮಧುಶ್ರೀ ಅವರ 'ವಂದೇ ಮಾತರಂ' ಹಾಡು ಭಾರೀ ವೈರಲ್

ಮಧುಶ್ರೀ ಅವರ 'ವಂದೇ ಮಾತರಂ' ಹಾಡು ಭಾರೀ ವೈರಲ್

  • Share this:
ನವದೆಹಲಿ(ಆ.15): ಈಗ ಮತ್ತೊಮ್ಮೆ ಭಾರತ'ವಂದೇ ಮಾತರಂ' (Vande Mataram)  ಪ್ರತಿಧ್ವನಿಯೊಂದಿಗೆ ಪ್ರತಿಧ್ವನಿಸಲಿದೆ. ಮತ್ತೊಮ್ಮೆ ‘ವಂದೇ ಮಾತರಂ’ ಹಾಡಿನ ಮೂಲಕ ದೇಶಪ್ರೇಮದ ಸ್ಪೂರ್ತಿ ತುಂಬಲಿದೆ. ಹೌದು, ಭಾರತದ ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಗಾಯಕಿ ಮಧುಶ್ರೀ (Singer Vande Mataram) ಅವರು ತಮ್ಮ ಸುಮಧುರ ಕಂಠದಿಂದ ಭಾರತೀಯರಿಗೆ ಗೌರವವನ್ನು ನೀಡಿದ್ದಾರೆ. ಈ ಹಾಡು ಭಾರತಕ್ಕೆ ತನ್ನದೇ ಗುರುತನ್ನು ನೀಡುತ್ತದೆ.

ಇದನ್ನೂ ಓದಿ:  Independence Day 2022: ಭಾರತದಾದ್ಯಂತ ಪ್ರತಿಧ್ವನಿಸುತ್ತದೆ ಹರ್ ಘರ್ ತಿರಂಗ ಅಭಿಯಾನ, ಎಲ್ಲೆಲ್ಲಿ ಹೇಗಿದೆ ನೋಡಿ

ಇತ್ತೀಚೆಗಷ್ಟೇ ತಮ್ಮ ಸುಮಧುರ ಕಂಠದಲ್ಲಿ ‘ವಂದೇ ಮಾತರಂ’ ಹಾಡನ್ನು ರೆಕಾರ್ಡ್ ಮಾಡಿದ್ದು, ಇದೀಗ ಹಾಡು ಮುನ್ನೆಲೆಗೆ ಬಂದಿದ್ದು, ಬಿಡುಗಡೆಯಾದ ಬೆನ್ನಲ್ಲೇ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಸಂತಸಗೊಂಡ ಮಧುಶ್ರೀ, 'ನಾನು ಭಾರತವನ್ನು ಪ್ರೀತಿಸುತ್ತೇನೆ, ಬಾಲ್ಯದಿಂದಲೂ 'ವಂದೇ ಮಾತರಂ' ಹಾಡು ನನ್ನ ಮನಸ್ಸಿನಲ್ಲಿ ಮಧುರವಾಗಿ ಉಳಿದಿದೆ. ಈ ಹಾಡನ್ನು ಕೇಳಿದಾಗಲೆಲ್ಲ ನನಗೆ ಮೈನವಿರೇಳುತ್ತದೆ. ಲತಾ ಜೀ ಅವರು ಹಾಡಿದ 'ವಂದೇ ಮಾತರಂ' ಹಾಡು ನನಗೆ ಯಾವಾಗಲೂ ಸ್ಫೂರ್ತಿ ನೀಡುತ್ತಿದೆ ಮತ್ತು ಈ ವರ್ಷ ನಾನು ಈ ಹಾಡನ್ನು ರೆಕಾರ್ಡ್ ಮಾಡಿದ್ದು, ಈ ಹಾಡನ್ನು ದೇಶವಾಸಿಗಳಿಗೆ ಮತ್ತು ಭಾರತಮಾತೆಗೆ ಅರ್ಪಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಮಧುಶ್ರೀ ಅವರು, 'ನಾನು ರಾಬಿ ಬಾದಲ್‌ಗೆ ವಿಭಿನ್ನ ಟ್ಯೂನ್ ಮಾಡಲು ಕೇಳಿದೆ ಮತ್ತು ಅವರು ಅದೇ ರೀತಿ ಮಾಡಿದ್ದಾರೆ. ನಾನು ಈ ಹಾಡನ್ನು ಸಂಪೂರ್ಣ ಭಕ್ತಿ ಮತ್ತು ಕೃತಜ್ಞತೆಯಿಂದ ಹಾಡಿದ್ದೇನೆ. ನಮ್ಮ ಭಾರತ ಮಾತೆ ನಮಗೆ ಸಾಕಷ್ಟು ಕೊಟ್ಟಿದ್ದಾರೆ. ನಮ್ಮ ದೇಶವು 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಹಾಡು ನಮ್ಮ ದೇಶಕ್ಕೆ ಮತ್ತು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವವಾಗಲಿ ಎಂದು ನಾನು ಬಯಸುತ್ತೇನೆ. ಈ ಹಾಡು ನಮ್ಮ ತ್ರಿವರ್ಣ ಧ್ವಜದ ಶಕ್ತಿಯನ್ನು ಸಂಗೀತದ ಮೂಲಕ ಮನೆಮನೆಗೆ ತಲುಪಿಸುವ ನನ್ನ ಪ್ರಯತ್ನವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Independence day: 75ನೇ ಸ್ವಾತಂತ್ರ್ಯೋತ್ಸವ, ಬ್ರಿಟಿಷ್​ರಿಂದ ಬಿಡುಗಡೆಯಾದ ದಿನದ ಒಂದು ಮೆಲುಕು

ಮತ್ತಷ್ಟು ಈ ಬಗ್ಗೆ ಹೇಳಿದ ಅವರು, 'ಸಂಗೀತಕ್ಕೆ ಯಾವುದೇ ಗಡಿ ಇಲ್ಲ ಮತ್ತು 'ವಂದೇ ಮಾತರಂ' ಹಾಡಿನ ಮೂಲಕ ನಮ್ಮ ರಾಷ್ಟ್ರಧ್ವಜವನ್ನು ಪ್ರತಿಯೊಬ್ಬ ಭಾರತೀಯನ ಮನೆ ಮತ್ತು ಹೃದಯದಲ್ಲಿ ಮತ್ತು ಪ್ರಪಂಚದಾದ್ಯಂತ ಎಂದೆಂದಿಗೂ ಹೆಮ್ಮೆಯಿಂದ ಹಾರಿಸಬೇಕೆಂದು ನಾನು ಬಯಸುತ್ತೇನೆ.' ಇದಕ್ಕೆ ರಾಬಿ ಬಾದಲ್ ಸಂಗೀತ ನೀಡಿದ್ದರೆ ಮತ್ತು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದಿದ್ದಾರೆ ಎಂದಿದ್ದಾರೆ.
Published by:Precilla Olivia Dias
First published: