ಶಬರಿಮಲೆಯ ಅಯ್ಯಪ್ಪ ದೇಗುಲದ ಎದುರಿರುವ ಪೊನ್ನಂಬಲಮೇಡೌನಲ್ಲಿ ಕಾಣಿಸಿಕೊಂಡ ಮಕರಜ್ಯೋತಿಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಮಕರ ಸಂಕ್ರಾಂತಿಯಾದ ಇಂದು ಸಂಜೆ 6.42ಕ್ಕೆ ಮಕರ ಜ್ಯೋತಿ ಕಾಣಿಸಿಕೊಂಡಿದೆ. ಈ ವೇಳೆ ದೇವಾಲಯದಲ್ಲಿ ಮಂತ್ರಘೋಷಗಳು ಮೊಳಗಿದವು. ದೇವಾಲಯದಲ್ಲಿ ದೀಪಾರಾಧನೆಯಾದ ತಕ್ಷಣದ ಈ ಪವಿತ್ರ ಮಕರ ಜ್ಯೋತಿ ದರ್ಶನವಾಗಿದೆ. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ದೇವಾಲಯದಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಲಾಗಿತ್ತು. ಪ್ರತಿ ಬಾರಿ ಲಕ್ಷಾಂತರ ಭಕ್ತರು ಅಯ್ಯಪ್ಪ ಸನ್ನಿಧಿಯಲ್ಲಿ ಈ ದಿವ್ಯ ಮಕರ ಜ್ಯೋತಿ ದರ್ಶನ ಮಾಡುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಸೋಂಕಿನ ಹಿನ್ನಲೆ ದೇವಾಲಯಕ್ಕೆ ಈ ದಿನ ಕೇವಲ 5000 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮಕರ ಜ್ಯೋತಿ ಕಾಣಲು ಭಕ್ತರು ಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾದು ನಿಂತಿದ್ದರು, ಈ ವೇಳೆ ಪೊಲೀಸರು ಎಲ್ಲಾ ಸ್ಥಳದಲ್ಲಿ ಪೊಲೀಸ್ ಭದ್ರತೆ ಯೋಜಿಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾದರು.
ಮಕರ ಜ್ಯೋತಿ ದರ್ಶನಕ್ಕೂ ಮುಂಚೆ ದೇವಸ್ವಂ ಮಂಡಳಿ ಸಚಿವ ಕಡಕಂಪಿಲ್ಲ ಸುರೇಂದ್ರನ್ ಮತ್ತು ರಾಜೀವರ ನೇತೃತ್ವದಲ್ಲಿ ತಿರುವಭರಂಣ ಹೊತ್ತು ದೇವಾಲಯದವರೆಗೆ ಮೆರವಣಿಗೆ ಸಾಗಿ ಬಂದಿತು. ಬಳಿಕ ದೇವರನ್ನು ಆಭರಣಗಳಿಂದ ಅಲಂಕರಿಸಲಾಯಿತು.
ಇದೇ ವೇಳೆ ದೇವಸ್ವಂ ಗಾಯಯ ವೀರಮಣಿ ರಾಜು ಅವರಿಗೆ ಹರಿವರಸನಂ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 1 ಲಕ್ಷ ನಗದನ್ನು ಹೊಂದಿದೆ.
ದೇವಾಲಯದ ವಾರ್ಷಿಕ ಯಾತ್ರೆ ಜ. 20ರಂದು ಬೆಳಗ್ಗೆ ಮಲಿಕಪ್ಪುರಂನಲ್ಲಿ ಗುರುತಿ ಆಚರಣೆ ಬಳಿಕ ಅಂತ್ಯಗೊಳ್ಳಲಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ