ವಿಶ್ವದಾದ್ಯಂತ ಟ್ವಿಟರ್​ನಲ್ಲಿ ಟಾಪ್ ಟ್ರೆಂಡ್ ಆದ #AYODHYAVERDICT

ವಿಶ್ವ ಹಾಗೂ ಭಾರತದ ಟ್ವೀಟರ್​ ಟ್ರೆಂಡಿಂಗ್​ನಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ತೀರ್ಪನ ಕುರಿತು ಟ್ರೆಂಡ್​ ಸೃಷ್ಟಿಯಾಗಿದ್ದು, 555.000 ಟ್ವೀಟ್​ಗಳು ಈ ಹ್ಯಾಷ್​ಟ್ಯಾಗ್​ ಅಡಿ ಟ್ವೀಟ್​​​​ ಆಗಿದೆ.

Seema.R | news18-kannada
Updated:November 9, 2019, 3:35 PM IST
ವಿಶ್ವದಾದ್ಯಂತ ಟ್ವಿಟರ್​ನಲ್ಲಿ ಟಾಪ್ ಟ್ರೆಂಡ್ ಆದ #AYODHYAVERDICT
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ನ.09): ಅಯೋಧ್ಯೆ ಭೂವಿವಾದ ಕುರಿತ ಐತಿಹಾಸಿದ ತೀರ್ಪನ್ನು ಇಂದು ಸುಪ್ರೀಂಕೋರ್ಟ್​ ನೀಡಿದೆ. ಇನ್ನು ಸಾಕಷ್ಟು ಕುತೂಹಲ ಮೂಡಿಸಿದ್ದ ಈ ತೀರ್ಪಿನ ಕುರಿತು ಟ್ವೀಟರ್​ನಲ್ಲಿ #Ayodhyaverdict ಮತ್ತು #Rammandir ಹ್ಯಾಷ್​ಟ್ಯಾಗ್​ಗಳು ಟ್ರೆಂಡ್​ ಸೃಷ್ಟಿಸಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ್ಯಾಂತ ಈ ಹ್ಯಾಷ್​ಟ್ಯಾಗ್​ ಟ್ರೆಂಡ್​ ಆಗಿದೆ.

ವಿಶ್ವ ಹಾಗೂ ಭಾರತದ ಟ್ವೀಟರ್​ ಟ್ರೆಂಡಿಂಗ್​ನಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ತೀರ್ಪನ ಕುರಿತು ಟ್ರೆಂಡ್​ ಸೃಷ್ಟಿಯಾಗಿದ್ದು, 555.000 ಟ್ವೀಟ್​ಗಳು ಈ ಹ್ಯಾಷ್​ಟ್ಯಾಗ್​ ಅಡಿ ಟ್ವೀಟ್​​​​ ಆಗಿದೆ.

ಭಾರತದಲ್ಲಿ #BabriMasjid, #AyodhyaJudgement ಹಾಗೂ #Rajanmabhoomi ಟಾಪ್​ ಟ್ರೆಂಡ್​ ಆಗಿದ್ದವು. ಇದರಲ್ಲಿ #RamMandir ಎರಡನೇ ಸ್ಥಾನದಲ್ಲಿದೆ. ಈ ಹ್ಯಾಷ್​ಟ್ಯಾಗ್​ನಲ್ಲಿ 160.000ಟ್ವೀಟ್​ ಆಗಿದೆ. ಇದರ ಜೊತೆಗೆ ಸುಪ್ರೀಂಕೋರ್ಟ್​ ಕೂಡ ಟ್ರೆಂಡ್​ ಆಗಿದ್ದು , 200.000 ಟ್ವೀಟ್​​​ಗಳು ಆಗಿದೆ.

ಪಂಚಸದಸ್ಯ ಪೀಠದಿಂದ ಪ್ರಕಟವಾದ ಈ ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕೂಡ ಒಬ್ಬರಾಗಿದ್ದು, ಇವರ ಹೆಸರಿನಲ್ಲಿ #RanjanGogai ಕೂಡ ಟ್ರೆಂಡ್​ ಆಗಿದೆ.

ಇದನ್ನು ಓದಿ: Ayodhya Verdict: 93ರ ವಯಸ್ಸಿನಲ್ಲಿ ಹಿಂದುಗಳ ಪರ ವಾದ ಮಂಡಿಸಿದ ಪರಾಸರನ್​ ಮತ್ತವರ ಅಗಾಧ ಜ್ಞಾಪಕ ಶಕ್ತಿ

#HinduMuslimBhaiBhai ಕೂಡ ಟ್ರೆಂಡ್​ ಆಗಿದ್ದು, ಇದರಡಿ 33.000 ಟ್ವೀಟ್​ ಆಗಿದೆ. ವಿಶ್ವದ ನಾಲ್ಕು ಟಾಪ್​ ಟ್ರೆಂಡಿಂಗ್​ ಹ್ಯಾಷ್​ಟ್ಯಾಗ್​ನಲ್ಲಿ ಅಯೋಧ್ಯಾ ತೀರ್ಪು ಕೂಡ ಮೊದಲ ಸ್ಥಾನದಲ್ಲಿದೆ.

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading